ಶಿವಮೊಗ್ಗ AIRPORT ವಿಚಾರದಲ್ಲಿ ದೊಡ್ಡ ಸುದ್ದಿ ನೀಡಿದ ಮಧು ಬಂಗಾರಪ್ಪ | ಏನದು
night landing will begin at Shivamogga airport by the end of January next year
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024
ಶಿವಮೊಗ್ಗ | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Shivamogga Airport) ನಲ್ಲಿ ರಾತ್ರಿ ಹೊತ್ತಿನಲ್ಲಿ ವಿಮಾನಗಳ ಸಂಚಾರಕ್ಕೆ ಅವಕಾಶ ಒದಗಿಸುವ ಪ್ರಯತ್ನ ಮುಂದುವರಿದಿದೆ. ಈ ಸಂಬಂಧ ಈಗಾಗಲೇ ಅವಶ್ಯಕ ಕಾಮಗಾರಿಗಳು ನಡೆದಿದ್ದು, ಬಹುತೇಕ ಅಂತಿಮ ಹಂತದಲ್ಲಿದೆ.
ಈ ನಡುವೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೈಟ್ ಲ್ಯಾಂಡಿಂಗ್ ಸೌಲಭ್ಯವಿಲ್ಲದಿದ್ದರೆ ವಿಮಾನ ನಿಲ್ದಾಣದ ನಿರ್ವಹಣೆ ಕಷ್ಟ ಆಗಲಿದೆ. ಈ ನಡುವೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬರುವ ಜನವರಿ ಅಂತ್ಯದ ವೇಳೆಗೆ ನೈಟ್ ಲ್ಯಾಂಡಿಂಗ್ ಸೌಲಭ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ ಸೇರಿದಂತೆ ಬಳ್ಳಿಗಾವಿ ದೇವಾಲಯಗಳ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದ ಮಧು ಬಂಗಾರಪ್ಪ, ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ವಿಶೇಷ ಆಸಕ್ತಿ ವಹಿಸುವುದಾಗಿ ಹೇಳಿದ್ದಾರೆ.
ಇನ್ನೂ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ಕಾಮಗಾರಿ ಬಗ್ಗೆ ಈ ಹಿಂದೆ ಸಂಸದ ಬಿವೈ ರಾಘವೇಂದ್ರ ರವರು ಸಹ ಮಾಹಿತಿ ನೀಡಿದ್ದು, ನೈಟ್ ಲ್ಯಾಂಡಿಂಗ್‌ಗಾಗಿ ಕೆಲವೊಂದು ಕಾಮಗಾರಿಗಳು ನಡೆಯುತ್ತಿದ್ದು, ಅದು ಅಂತಿಮ ಹಂತದಲ್ಲಿದೆ ಎಂದಿದ್ದರು.
SUMMARY | night landing will begin at Shivamogga airport by the end of January next year.
KEY WORDS | night landing at Shivamogga airport , January