ಇನ್ನೊಂದು ತಿಂಗಳಿನಲ್ಲಿ ಶಿವಮೊಗ್ಗ ನಿಲ್ದಾಣದಲ್ಲಿ ಆಗಲಿದೆ ಈ ಕೆಲಸ | ಸಂಸದರ ಸುಳಿವು
night flights will also start operating at Shivamogga airport , Mp BY Raghavendra said.
SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 11, 2024 | SHIVAMOGGA AIRPORT | ಇನ್ನೊಂದು ತಿಂಗಳಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ರಾತ್ರಿ ಸಂಚಾರವೂ ಆರಂಭವಾಗಲಿದೆ. ಹೀಗಂತ ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ನಿನ್ನೆದಿನದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನ ಸಂಚಾರಕ್ಕೆ ಚಾಲನೆ ನೀಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣದ ಹೆಮ್ಮೆಯ ಬಗ್ಗೆ ವಿವರಿಸಿದರು.
ಕೇವಲ 20 ತಿಂಗಳ ಅವಧಿಯಲ್ಲಿ ಶಿವಮೊಗ್ಗ ಪ್ರಾದೇಶಿಕ ಸಂಪರ್ಕತೆಯ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ ಎಂದ ಅವರು, ಇಲ್ಲಿಯವರೆಗೂ ಶಿವಮೊಗ್ಗದಿಂದ ಬೆಂಗಳೂರು, ತಿರುಪತಿ, ಗೋವಾಗೆ ವಿಮಾನಗಳು ಸಂಚರಿಸುತ್ತಿದ್ದು ಇದೀಗ ಚೆನ್ನೈ, ಹೈದರಾಬಾದ್‌ಗೆ ವಿಸ್ತರಣೆಯಾಗಿದೆ ಎಂದರು
ಅಲ್ಲದೆ ಪ್ರತಿ ದಿನ 12 ಪ್ರಯಾಣಗಳು ಶಿವಮೊಗ್ಗ ಏರ್‌ಪೋರ್ಟ್‌ನಿಂದ ನಡೆಯುತ್ತಿದೆ. ಇದೊಂದು ದಾಖಲೆ ಎಂದರು. ಅಲ್ಲದೆ ಇನ್ನೊಂದು ತಿಂಗಳಲ್ಲಿ ರಾತ್ರಿ ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಅದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಶ್ವಾಸ ನೀಡಿದರು.
SUMMARY | In another month, night flights will also start operating at Shivamogga airport. Mp BY Raghavendra said.
KEYWORDS | In another month, night flights will also start operating at Shivamogga airport , Mp BY Raghavendra said.