ಪರಪ್ಪನ ಅಗ್ರಹಾರದಿಂದ ನಕ್ಸಲ್ ಲತಾ, ನಕ್ಸಲ್ ವನಜಾಕ್ಷಿ ಶಿವಮೊಗ್ಗಕ್ಕೆ ಶಿಫ್ಟ್ !? ಕಾರಣ
naxal latha mundagaru and vanajakshi produce to thirthahalli court

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 10, 2025
ಶಿವಮೊಗ್ಗ : ಸಿಎಂ ಸಿದ್ದರಾಮಯ್ಯರ ಎದುರು ಶರಣಾದ ಲತಾ ಮುಂಡಗಾರು ನೇತೃತ್ವದ ನಕ್ಸಲ್ ತಂಡದಲ್ಲಿ, ಲತಾ ಹಾಗೂ ವನಜಾಕ್ಷಿಯವರನ್ನು ಬಾಡಿ ವಾರಂಟ್ ಮೇರೆಗೆ ಶಿವಮೊಗ್ಗಕ್ಕೆ ಕರೆತರಲಾಗಿದ್ದು, ಅವರನ್ನು ಇಂದು ತೀರ್ಥಹಳ್ಳಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.
ತೀರ್ಥಹಳ್ಳಿ ಕೋರ್ಟ್
ಲತಾ ಮುಂಡಗಾರು ಹಾಗೂ ವನಜಾಕ್ಷಿ ವಿರುದ್ಧ ಆಗುಂಬೆ ಪೊಲೀಸ್ ಠಾಣೆಯಲ್ಲಿ 3 ಕೇಸ್ ಹೊಸನಗರ ಪೊಲೀಸ್ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ. ಒಟ್ಟು ಮೂರು ಕೇಸ್‌ಗಳಿಗೆ ಸಂಬಂಧಿಸಿದಂತೆ ಇವತ್ತು ಇಬ್ಬರು ನಕ್ಸಲರನ್ನು ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಸದ್ಯ ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಲತಾ ಹಾಗೂ ವನಜಾಕ್ಷಿಯನ್ನು ಬಾಡಿ ವಾರಂಟ್ ಮೇರೆಗೆ ಶಿವಮೊಗ್ಗಕ್ಕೆ ಕರೆತರಲಾಗುತ್ತಿದೆ. ಇವತ್ತು ಕೋರ್ಟ್ ಮುಂದೆ ಇಬ್ಬರನ್ನು ಹಾಜರು ಪಡಿಸಿ ಬಳಿಕ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡುವಂತೆ ಕೋರ್ಟ್‌ನಲ್ಲಿ ಪೊಲೀಸರು ಮನವಿ ಮಾಡುವ ಸಾಧ್ಯತೆ ಇದೆ.
ಲತಾಮುಂಡಗಾರು ವಿರುದ್ಧ ಸುಮಾರು 85 ಪ್ರಕರಣಗಳಿವೆ ಎನ್ನಲಾಗಿದ್ದು, ಅವರು ಕಳೆದ ಕೆಲವು ವರುಷಗಳಿಂದ ಭೂಗತವಾಗಿದ್ದರು. ಕೇರಳಿದ್ದ ಅವರನ್ನು ಶರಣಾಗುವಂತೆ ಮನವೊಲಿಸುವಲ್ಲಿ ನಕ್ಸಲ್ ಪುನರ್‌ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರಿಕರ ವೇದಿಕೆ ಯಶಸ್ವಿಯಾಗಿತ್ತು.
ಅದರಂತೆ ಕಳೆದ ಫೆಬ್ರವರಿ ಎಂಟರದ್ದು ಮುಂಡಗಾರು ಲತಾ ತಮ್ಮ ತಂಡದ ಜೊತೆ ಶರಣಾಗಿದ್ದರು ಮುಂಡುಗಾರು ಲತಾ ಸೇರಿ ನಾಳೆ ಆರು ನಕ್ಸಲರ ತಂಡ ಶರಣು | ಎಲ್ಲಿಗೊತ್ತಾ
SUMMARY | naxal latha mundagaru and vanajakshi produce to thirthahalli court
KEY WORDS | naxal latha mundagaru , naxalvanajakshi, thirthahalli court