muda scam | ಮುಡಾ ಹಗರಣ ತನಿಖೆ | ಸಿದ್ದರಾಮಯ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ | ಶಿವಮೊಗ್ಗ ರಾಜಕಾರಣ ವಲಯದ ಪ್ರತಿಕ್ರಿಯೆ ಏನು?

13

SHIVAMOGGA | MALENADUTODAY NEWS | Aug 18, 2024 ಮಲೆನಾಡು ಟುಡೆ  

ಮುಡಾ ಹಗರಣ ತನಿಖೆ ಸಂಬಂಧ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯ ಪಾಲರು ಅನುಮತಿ ನೀಡಿದ್ದಾರೆ. ಈ ಸಂಬಂಧ ಶಿವಮೊಗ್ಗದ ರಾಜಕಾರಣ ಏನು ಹೇಳುತ್ತೆ ಎನ್ನುವುದನ್ನ ಗಮನಿಸುವುದಾದರೆ ಅದರ ವಿವರ ಹೀಗಿದೆ. 

- Advertisement -

ಕೆ. ಎಸ್‌. ಈಶ್ವರಪ್ಪ

ರಾಜ್ಯ ರಾಜಕಾರಣದ ಪ್ರಮುಖ ವಿಷಯಗಳಿಗೆ ತಮ್ಮದೆ ಆದ ಪ್ರತಿಕ್ರಿಯೆ ನೀಡುವ ಕೆಎಸ್‌ ಈಶ್ವರಪ್ಪ ಮುಡಾ ಹಗರಣ ತನಿಖೆ ಬಗ್ಗೆಯು ಮಾತನಾಡಿದ್ದಾರೆ. ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸುವ ವಿಶ್ವಾಸವಿದೆ  ಎಂದಿದ್ದಾರೆ. 

ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು. ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟಿದ್ದೆ. ಅದೇ ರೀತಿಯಲ್ಲಿ  ಸಿದ್ದರಾಮಯ್ಯ ಕಾನೂನು ಬದ್ಧವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಪಡೆದು ಆರೋಪ ಮುಕ್ತರಾಗಲಿ ಎಂದಿದ್ದಾರೆ. 

ಇದನ್ನು ಸಹ ಓದಿ :ಶೇಂಗಾ ಸಿಪ್ಪೆ ವಿಚಾರಕ್ಕೆ ಹೊಡೆದಾಟ | ತಲೆ ಒಡೆದು ಓರ್ವ ಆಸ್ಪತ್ರೆಗೆ | ಇನ್ನೊಬ್ಬ ಅರೆಸ್ಟ್‌

ಎಸ್‌ ಎನ್‌ ಚನ್ನಬಸಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಬಿಜೆಪಿಯ ಹೋರಾಟಕ್ಕೆ ದೊರೆತ ಯಶಸ್ಸು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು,  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲಾಗಿತ್ತು. ರಾಜ್ಯಪಾಲರು ಈಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದು ಸ್ವಾಗತಾರ್ಹ. ಇದು ನಮ್ಮ ಹೋರಾಟಕ್ಕೆ ಸಿಕ್ಕಿರುವ ಜಯ ಎಂದಿದ್ದಾರೆ. 

 

ಬಿ ವೈ ವಿಜಯೇಂದ್ರ 

ಇನ್ನೂ ಇದೇ ವಿಚಾರದಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಂಡತನ ಬಿಟ್ಟು ರಾಜೀನಾಮೆ ಕೊಡಬೇಕು ಎಂದಿದ್ದಾರೆ. ಮುಡಾ ನಿವೇಶನ ಹಗರಣದ ದೂರು ಆಧರಿಸಿ ರಾಜ್ಯಪಾಲರು ತಮಗೆ ಇರುವ ಸಂವಿಧಾನದತ್ತ ಅಧಿಕಾರ ಚಲಾಯಿಸಿ, ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದಾರೆ.  ಎಷ್ಟೇ ಹೋರಾಟ ನಡೆಸಿದರೂ ತಮ್ಮನ್ನು ಜಗ್ಗಿಸುವವರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಂಡ ತನ ಪ್ರದರ್ಶಿಸುತ್ತಿದ್ದರು. ಈಗಲಾದರೂ ನೈತಿಕ ಹೊಣೆ ಹೊತ್ತುರಾಜೀನಾಮೆ ನೀಡಬೇಕು  ಎಂದಿದ್ದಾರೆ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

ಎಂ ಶ್ರೀಕಾಂತ್‌ 

ಇನ್ನೂ ಇದೆ ವಿಚಾರದಲ್ಲಿ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಂ ‍ಶ್ರೀಕಾಂತ್‌ ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ, ಕಾನೂನು ಗಾಳಿಗೆ ತೂರಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದೊಂದು ಕಾನೂನು ಬಾಹಿರ ನಡೆ  ಎಂದಿದ್ದಾರೆ. 

ಮುಡಾ ಹಗರಣ ಸೃಷ್ಟಿಸಿದವರು ಬಿಜೆಪಿಯವರು ಮತ್ತು ಅಧಿಕಾರಿಗಳು. ಇದರಲ್ಲಿ ಮುಖ್ಯಮಂತ್ರಿಯವರ ಪಾತ್ರವಿಲ್ಲ. ಕೋತಿ ತಾನು ಬೆಣ್ಣೆ ತಿಂದು ಮೇಕೆಯ ಬಾಯಿಗೆ ಒರೆಸಿದ ಹಾಗೆ ಬಿಜೆಪಿ ಮುಖಂಡರು ಸಿದ್ದರಾಮಯ್ಯ ಅವರ ಹೆಸರಿಗೆ ಕಳಂಕ ತರಲು ಪಾದಯಾತ್ರೆ ನಡೆಸಿ ವಿಫಲವಾದ ನಂತರ ಇದೀಗ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಿದ್ದಾರೆ ಎಂದಿದ್ದಾರೆ. 

 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

ಶಿವಮೊಗ್ಗ ಕಾಂಗ್ರೆಸ್‌ ಆಕ್ರೋಶ

ಇನ್ನೂ ಇದೇ ವಿಚಾರದಲ್ಲಿ ಶಿವಮೊಗ್ಗ ಕಾಂಗ್ರೆಸ್‌ ಕಾರ್ಯಕರ್ತರು ನಿನ್ನೆ ಪ್ರತಿಭಟನೆಯನ್ನ ಸಹ ನಡೆಸಿದರು. ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್‌ ಜಿಲ್ಲಾ ಘಟಕ ಸೀನಪ್ಪ ಶೆಟ್ಟಿ (ಗೋಪಿ) ವೃತ್ತದಲ್ಲಿ ವಾಹನಗಳನ್ನು ತಡೆದು, ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿತ್ತು 

 

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೂ ಇಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಲ್ಲಿ ಇರಬಾರದು ಎಂಬ ಬಿಜೆಪಿಯ ಷಡ್ಯಂತ್ರದ ಭಾಗವಾಗಿ ಈ ಕುತಂತ್ರ ನಡೆದಿದೆ ಎಂದು ಆರೋಪಿಸಿದರು 

Share This Article