ಸಿಗಂದೂರು ಸೇತುವೆ, ವಂದೇ ಭಾರತ್, ಮುಂಬೈ ಪ್ಲೈಟ್, AIRPORT ಬಗ್ಗೆ ಸಂಸದರ ಮಹತ್ವದ ಹೇಳಿಕೆ
Shimoga Airport night landing, Hosanagara and Kollur Road, Thyavare Kopa and Talagupa four-lane road, Sigandur bridge, Railway coaching depot at kote Gangur, Vande Bharat Rail, dubbing work of Shivamogga Beerur and Shivamogga railway line, mp BY Raghavendra
![ಸಿಗಂದೂರು ಸೇತುವೆ, ವಂದೇ ಭಾರತ್, ಮುಂಬೈ ಪ್ಲೈಟ್, AIRPORT ಬಗ್ಗೆ ಸಂಸದರ ಮಹತ್ವದ ಹೇಳಿಕೆ](https://malenadutoday.com/uploads/images/202409/image_870x_66e2879566a12.webp)
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024
ಶಿವಮೊಗ್ಗ ಬೀರೂರು ಮತ್ತು ಶಿವಮೊಗ್ಗ ರೈಲ್ವೆ ಮಾರ್ಗದ ಡಬ್ಲಿಂಗ್ ಕಾಮಗಾರಿ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣದ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಬಗ್ಗೆ ಸಂಸದ ಬಿವೈ ರಾಘವೇಂದ್ರ ಮಹತ್ವ ಹೇಳಿಕೆಯನ್ನ ನೀಡಿದ್ದಾರೆ
ಶಿವಮೊಗ್ಗ ಬೀರೂರು ಮತ್ತು ಶಿವಮೊಗ್ಗ ರೈಲ್ವೆ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಶೀಘ್ರದಲ್ಲಿ 21,900 ಕೋಟಿ ಅನುದಾನ ಬಿಡುಗಡೆಯಾಗಲಿದೆ.
ಕೋಟೆ ಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಮತ್ತು ರಾಣೆ ಬೆನ್ನೂರು ರೈಲು ಮಾರ್ಗ ಪೂರ್ಣವಾದರೆ ರೈಲ್ವೆ ನಕ್ಷೆಯಲ್ಲಿ ಶಿವಮೊಗ್ಗ ಹೆಚ್ಚು ಪ್ರಗತಿ ಸಾಧಿಸಲಿದೆ ಎಂದರು.
ಹೊಸನಗರ ಮತ್ತು ಕೊಲ್ಲೂರು ರಸ್ತೆ, ತ್ಯಾವರೆ ಕೊಪ ಮತ್ತು ತಾಳಗುಪ ಚತುಷ್ಪಥ ರಸ್ತೆಯು ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿವೆ. ಸಿಗಂದೂರು ಸೇತುವೆಯೂ ಐದಾರು ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ.
ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಕಾಮಗಾರಿ ಇನ್ನೊಂದು ತಿಂಗಳಲ್ಲಿ ಪೂರ್ಣವಾಗಲಿದೆ. ದೆಹಲಿ, ಅಹಮದಾಬಾದ್ ನಡುವೆ ಶಿವಮೊಗ್ಗದಿಂದ ನೇರ ವಿಮಾನಯಾನ ಆರಂಭವಾಗಲಿದ್ದು, ಮುಂಬೈ ನಗರಕ್ಕೆ ಸಂಬಂಧಿಸಿ ವಿಮಾನ ಸಂಪರ್ಕಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
SUMMARY | Shimoga Airport night landing, Hosanagara and Kollur Road, Thyavare Kopa and Talagupa four-lane road, Sigandur bridge, Railway coaching depot at kote Gangur, Vande Bharat Rail, dubbing work of Shivamogga Beerur and Shivamogga railway line, mp BY Raghavendra
KEYWORDS | Shimoga Airport night landing, Hosanagara and Kollur Road, Thyavare Kopa and Talagupa four-lane road, Sigandur bridge, Railway coaching depot at kote Gangur, Vande Bharat Rail, dubbing work of Shivamogga Beerur and Shivamogga railway line, mp BY Raghavendra