ಗಂಡನ ಮನೆಗೆ ಹೋಗುವುದಾಗಿ ಮಗುವಿನೊಂದಿಗೆ ಹೋದ ಮಹಿಳೆ ಮಿಸ್ಸಿಂಗ್‌ | ಪೊಲೀಸ್‌ ಪ್ರಕಟಣೆ

mother and her child have gone missing in Shimoga,

ಗಂಡನ ಮನೆಗೆ ಹೋಗುವುದಾಗಿ ಮಗುವಿನೊಂದಿಗೆ ಹೋದ ಮಹಿಳೆ ಮಿಸ್ಸಿಂಗ್‌ | ಪೊಲೀಸ್‌ ಪ್ರಕಟಣೆ
mother and her child have gone missing in Shimoga,

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024 ‌‌ 

ಶಿವಮೊಗ್ಗದಲ್ಲಿ ಪತಿಯ ಮನೆಗೆ ಹೋಗುವುದಾಗಿ ಹೇಳಿದ ತಾಯಿ ಮಗು ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ. ಸೊರಬ ತಾಲ್ಲೂಕು ನೆಗವಾಡಿ ತಾಂಡಾದಲ್ಲಿ ಈ ಘಟನೆ ನಡೆದಿದೆ. 

ಪತಿ ಮನೆಗೆ ತೆರಳುವುದಾಗಿ ತಿಳಿಸಿ ಮಹಿಳೆಯೋರ್ವಳು ತನ್ನ ಮಗಳೊಂದಿಗೆ ನಾಪತ್ತೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿ ಹೊನ್ನಮ್ಮ (30) ಹಾಗೂ ದೀಪ್ತಿ ಮಹಾದೇವ ನಾಪತ್ತೆಯಾದವರು. ನೆಗವಾಡಿ ತಾಂಡಾ ಗ್ರಾಮದಲ್ಲಿ ಸಹೋದರನ ಅನಾರೋಗ್ಯ ವಿಚಾರಿಸಿಕೊಂಡು ಪತಿಯ ಮನೆಗೆ ಹೋಗುವುದಾಗಿ ತಿಳಿಸಿ ಮಗಳೊಂದಿಗೆ ತೆರಳಿದವರು ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಹೊನ್ನಮ್ಮ ಅವರ ಸಹೋದರ ಬಂಗಾರಪ್ಪ ಶೇಖಪ್ಪ ನೀಡಿದ ದೂರಿನ ಅನ್ವಯ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಾಪತ್ತೆಯಾದ ಹೊನ್ನಮ್ಮ ಭೋವಿ ಅವರು ಸುಮಾರು 5.4ಅಡಿ ಎತ್ತರ, ಬಿಳಿ ಮೈ ಬಣ್ಣ, ದಪ್ಪ ಮೈಕಟ್ಟು ಹೊಂದಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾರೆ. ದೀಪ್ತಿ (8) 3.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದು ಕನ್ನಡ ಮಾತನಾಡುತ್ತಾಳೆ. ಇವರ ಬಗ್ಗೆ ಸುಳಿವು ದೊರೆತವರು ಆನಪಟ್ಟ : 08184-267138 ಅಥವಾ 9480803369 ಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

SUMMARY | mother and her child have gone missing in Shimoga after they said they were going to their husband's house. The incident took place in Negawadi Tanda, Sorab taluk.

KEY WORDS |   mother and her child have gone missing in Shimoga,  in Negawadi Tanda, Sorab taluk.