ತೀರ್ಥಹಳ್ಳಿ | ರಸ್ತೆ ಮಧ್ಯೆ ಜೀವ ಬಿಟ್ಟ ವಾನರ | ಹೊಸ ಬಟ್ಟೆ ಹೊದಿಸಿ ಮಣ್ಣು ಮಾಡಿ ಮಾನವೀಯತೆ
monkey died in the middle of the road, unknown vehicle near Sankadhole Surani Bridge , Sagar Konandur Road, Nerathur Village Panchayat , Thirthahalli Taluk of Shimoga District

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಗರ ಕೋಣಂದೂರು ರಸ್ತೆಯ ಸಂಕದಹೊಳೆ ಸುರಾನಿ ಸೇತುವೆ ಬಳಿ ರಸ್ತೆಯಲ್ಲಿ ಮಂಗವೊಂದು ಯಾವುದೋ ಅಪರಿಚಿತ ವಾಹನಕ್ಕೆ ತಾಗಿ ರಸ್ತೆ ಮಧ್ಯೆ ಜೀವಬಿಟ್ಟಿತ್ತು.
ಇದೇ ಈ ಮಾರ್ಗದಲ್ಲಿ ಕೆಲಸ ನಿಮಿತ್ತ ಸಾಗುತ್ತಿದ್ದ ತೂದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮಧುರಾಜ್ ಹೆಗಡೆ ಸಾವಿಗೀಡಾದ ಮಂಗವನ್ನ ಎತ್ತಿ ಬದಿಗೆ ತರಲು ಮುಂದಾಗಿದ್ದಾರೆ. ಆದರೆ ಇದನ್ನು ನೋಡುತ್ತಲೇ ಹತ್ತು ಹನ್ನೆರಡು ಮಂಗಗಳು ಇವರ ಮೇಲೆ ಏರಗಿದೆ. ಹೀಗಾಗಿ ಆ ಕ್ಷಣಕ್ಕೆ ಅಲ್ಲಿಂದ ತೆರಳಿದ ಅವರು ವಾಪಸ್ ಬರುವಾಗ ತಮ್ಮ ಸ್ನೇಹಿತರಾದ ಸಂಕದಹೊಳೆ ನಾಗರಾಜ್ ಶೆಟ್ಟರ ಮಗ ಶಿಶಿರ ರವರಿಗೆ ಫೋನ್ ಮುಖಾಂತರ ಸಂಪರ್ಕಿಸಿ ಒಂದು ಗುದ್ದಲಿ ಮತ್ತು ಹೊಸ ಬಟ್ಟೆ ತರಿಸಿಕೊಂಡಿದ್ದಾರೆ.
ನಂತರ ರಸ್ತೆಯ ಪಕ್ಕದಲ್ಲಿ ವಾಹನದ ಬೆಳಕಿನಲ್ಲಿ ಗುದ್ದಲಿಯಿಂದ ಹೊಂಡ ಹೊಡೆದು ಮಂಗದ ಸಂಸ್ಕಾರ ನಡೆಸಿದ್ದಾರೆ. ಆಂಜನೇಯನನ್ನು ಸ್ಮರಿಸಿ ಮಂಗದ ಮೇಲೆ ಹೊಸಬಟ್ಟೆ ಹಾಕಿ ಅದರ ಅಂತ್ಯಸಂಸ್ಕಾರ ನಡೆಸಿದ್ದಾರೆ. ರಾತ್ರಿಯ ವೇಳೆ ಇಬ್ಬರು ಸ್ನೇಹಿತರು ನಡೆದುಕೊಂಡ ರೀತಿ, ಅವರ ಮಾನವೀಯತೆ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.
SUMMARY | monkey died in the middle of the road, unknown vehicle near Sankadhole Surani Bridge , Sagar Konandur Road, Nerathur Village Panchayat , Thirthahalli Taluk of Shimoga District
KEY WORDS | monkey died in the middle of the road, unknown vehicle near Sankadhole Surani Bridge , Sagar Konandur Road, Nerathur Village Panchayat , Thirthahalli Taluk of Shimoga District