ಶಿವಮೊಗ್ಗದಲ್ಲಿ ಜನಪ್ರತಿನಿಧಿಯ ರಿಪಬ್ಲಿಕ್‌ ಆಫ್‌ ಡ್ಯಾಶ್‌ ಸ್ಟೋರಿ | ಆಪ್ತನ ಬಗ್ಗೆ ಸಿಎಂ ಸಹ ಮೌನವಾದರೆ?

mla sun case and shivamogga politics

ಶಿವಮೊಗ್ಗದಲ್ಲಿ ಜನಪ್ರತಿನಿಧಿಯ ರಿಪಬ್ಲಿಕ್‌ ಆಫ್‌ ಡ್ಯಾಶ್‌ ಸ್ಟೋರಿ | ಆಪ್ತನ ಬಗ್ಗೆ ಸಿಎಂ ಸಹ ಮೌನವಾದರೆ?
mla sun case and shivamogga politics

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 15, 2025 ‌‌ 

ಶಿವಮೊಗ್ಗ ಜಿಲ್ಲೆ ತಾಲ್ಲೂಕು ಒಂದರಲ್ಲಿ ನಡೆದ ಘಟನೆ ಕೇವಲ ಒಂದು ಉದಾಹರಣೆ, ಅದೇ ಮಾದರಿಯ ಹಲವು ಘಟನೆಗಳು ನಡೆದಿರಬಹುದಾದ ಸಾಧ್ಯತೆಗಳನ್ನು ಆಫ್‌ ದಿ ರೆಕಾರ್ಡ್‌ ಧ್ವನಿಗಳು ಹೇಳುತ್ತಿವೆ. ಇದರ ನಡುವೆ ಸಿಎಂ ಆಪ್ತರು ಸಹ ಆಗಿರುವ ಶಾಸಕರೊಬ್ಬರಿಗೆ ಸರ್ಕಾರದ ವ್ಯವಸ್ಥೆಯೇ ಬೆಂಬಲವಾಗಿ ನಿಂತಿದೆಯಾ? ಜೆಪಿ ಬರೆಯುತ್ತಾರೆ. 

 

ನುಡಿದಂತೆ ನಡೆದಿದ್ದೇವೆ ಎಂದು ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ ಕಾಂಗ್ರೆಸ್‌ ಸರ್ಕಾರಕ್ಕೆ ಒಂದಷ್ಟು ಒಳ್ಳೆಯ ಹೆಸರು ಬರುತ್ತಿದೆ ಎನ್ನುವ ಮಾತಿದೆ. ಇದರ ನಡುವೆ ಶಿವಮೊಗ್ಗದಲ್ಲಿ ಆರನೇ ಗ್ಯಾರಂಟಿಯೊಂದು ಜನಪ್ರತಿನಿದಿಯೊಬ್ಬರಿಗೆ ಸಿಕ್ಕಿದೆ ಎಂದು ಜನರೇ ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಏನು ಮಾಡಿದರು ಸೈ ಎಂಬುದು ಆ ಗ್ಯಾರಂಟಿಯಂತೆ. ಇತ್ತೀಚೆಗೆ ಶಿವಮೊಗ್ಗದಲ್ಲಿಯೇ ಮಾತನಾಡಿದ್ದ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ರಿಪಬ್ಲಿಕ್‌ ಆಫ್‌… ಬಗ್ಗೆ ಸರಣಿ ಪ್ರಶ್ನೆಗಳು ಎದುರಾದಾಗ, ಹಾಗೆ ಆಗೋದಿಕ್ಕೆ ಖಂಡಿತ ಬಿಡೋದಿಲ್ಲ ಎಂದಿದ್ದರು. ಅವರು ನೀಡಿದ ಭರವಸೆ ಆದಷ್ಟು ಬೇಗ ಈಡೇರಲಿ ಎಂಬುದು ಜನರ ಅಭಿಲಾಷೆ.

ಈ ನಡುವೆ ಸಚಿವರಿಗೆ ಎದುರಾಗಿದ್ದ ರಿಪಬ್ಲಿಕ್‌ ಆಫ್‌ ಪ್ರಶ್ನೆಗಳನ್ನು ಕೆದಕುತ್ತಾ ಹೋದಾಗ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಅಧಿಕಾರಿಗಳೇ ಸಂತ್ರಸ್ತರು ಎಂಬ ಸತ್ಯ ಬಟಾಬಯಲಾಗುತ್ತಿದೆ. ಪ್ರತಿ ಸರ್ಕಾರದಲ್ಲಿಯು ವರ್ಗಾವಣೆ ಎಂಬುದು ಕಾಮನ್‌ ಫ್ಯಾಕ್ಟರ್‌. ಅದರ ಹಿಂದಿನ ಸತ್ಯಗಳನ್ನು ಕೆದುಕುವುದು ಬೇಡ. ಆದರೆ ಈ ವರ್ಗಾವಣೆಯಲ್ಲಿ ಅಧಿಕಾರಿಗಳು ಜಿಲ್ಲೆ ಒಬ್ಬ ಜನಪ್ರತಿನಿಧಿಯ ಪರ್ಮಿಶನ್‌ ಇಲ್ಲದೆ, ಯಾವುದೇ ಆಯಕಟ್ಟಿನ ಸ್ಥಳಕ್ಕೆ ಟ್ರಾನ್ಸಫರ್‌ ಆಗಲು ಸಾಧ್ಯವಾಗುವುದಿಲ್ಲ. ಅಷ್ಟರಮಟ್ಟಿಗೆ ಪ್ರಭಾವ ಅವರದ್ದಿದೆ ಎನ್ನುತ್ತದೆ, ಸರ್ಕಾರಿ ವಲಯದ ಸೈಲೆಂಟ್‌ ಮಾತುಗಳು.. 

ವರ್ಗಾವಣೆ ಎನ್ನುವ ದೊಡ್ಡ ಕಥೆಯ ನಡುವೆ, ಇಲ್ಲಿಗೆ ವರ್ಗಾವಣೆಯಾಗಿ ಬರುವ ಅಧಿಕಾರಿಗಳು, ಮನುಷ್ಯನೊಬ್ಬ ಪಡೆಯಬಲ್ಲ ಗೌರವ ಸಮ್ಮಾನಗಳನ್ನು ಪಡೆದುಕೊಳ್ಳಲು ಸಹ ತ್ರಾಸಾಗುತ್ತಿದೆ ಎಂಬುದು ಅಧಿಕಾರ ವಲಯದ ನೊಂದ ಮನಸ್ಸುಗಳ ದೂರು. ಸಿಸ್ಟಮ್‌ ಸರಿಯಿಲ್ಲ ಸರ್‌, ಯಾರು ಏನೂ ಸಹ ಮಾಡಲಾಗುವುದಿಲ್ಲ. ಮೊನ್ನೆ ನಡೆದಿದ್ದೇ ನೋಡಿ ಏನಾಯ್ತು. ಇಲ್ಲಿ ಎಲ್ಲರ ಪರಿಸ್ಥಿತಿ ಸಹ ಇದೆ ಎನ್ನುವಾಗ ಸರ್ಕಾರಿ ಅಧಿಕಾರಿಗಳಲ್ಲಿ ಎದುರಿಸಿದ ಯಾತನೆ ಕಾಣುತ್ತದೆ. ಹಾಗಂತ ಎಲ್ಲಾ ಅಧಿಕಾರಿಗಳಿಗೂ ಇಂತಹ ಸಂಕಟವಿಲ್ಲ ಎಂಬುದು ಸಹ ಸ್ಪಷ್ಟ. 

ತಾನು ಹೇಳಿದ್ದೆ ನಡೆಯಬೇಕು, ಕೇಳಿದಷ್ಟು ಕೊಡಬೇಕು, ಆಡಿದ್ದನ್ನೆ ನುಡಿಬೇಕು ಎನ್ನುವಂತಹ ಜನಪ್ರತಿನಿದಿಯು ಬೆಂಗಳೂರಿನಲ್ಲಿ ಸಿಎಂರ ನೇರ ಸಂಪರ್ಕದಲ್ಲಿಯು ಇದ್ದಾರೆ ಎಂಬುದು ಇಡೀ ರಾಜಕಾರಣಕ್ಕೆ ಗೊತ್ತಿರುವ ವಿಚಾರ. ಆ ಕಾರಣಕ್ಕೆ ಅಧಿಕಾರ ವಲಯದ ವ್ಯವಸ್ಥೆಯನ್ನು ನಿಕೃಷ್ಟವಾಗಿ ನೋಡುವುದು ತರವಲ್ಲ. ಇನ್ನೊಂದೆಡೆ ರಿಪಬ್ಲಿಕ್‌ ಆಪ್‌ ವಿಚಾರದಲ್ಲಿ ನಡೆಯದ ದಂಧೆಗಳಿಲ್ಲ. ಅದಷ್ಟರಿಂದಲೂ ಹುಟ್ಟುವ ಕಾಸು ಯಾರಿಗೆ ತಲುಪತ್ತಿದೆ ಎಂಬುದನ್ನು ಹೇಳುವ ಅವಶ್ಯಕತೆ ಇಲ್ಲ. ಆದರೆ ಪೊಲೀಸರು ಮಾತ್ರ ಈ ವಿಚಾರಕ್ಕೆ ಹೋಗುವಂತಿಲ್ಲ ಎನ್ನುವುದೇ ವಿಶೇಷ ನಿಯಮ. 

ಶಿವಮೊಗ್ಗದ ರಾಜಕಾರಣಕ್ಕೆ ದೊಡ್ಡ ಇತಿಹಾಸವಿದೆ. ಹೋರಾಟದ ನೆಲದಲ್ಲಿ ತಮ್ಮ ಹಕ್ಕನ್ನು ಕದ ಒದ್ದು ತೆಗೆದುಕೊಳ್ಳುವ ರಾಜಕಾರಣಿಗಳನ್ನು ಮಲೆನಾಡು ಕಂಡಿದೆ. ಮಲೆನಾಡಿನಿಂದಲೇ ಸಿಎಂ ಕುರ್ಚಿ ಏರಿದ ಧೀಮಂತರ ಬದುಕಿನ ಉದಾಹರಣೆಗಳು ಭವಿಷ್ಯದ ರಾಜಕಾರಣಿಗಳಿಗೆ ಅನುಕರಣೀಯವಾಗಿಯೇ ಇದೆ. ಈ ನೆಲದಲ್ಲಿ ಉತ್ತರ ಭಾರತದ ಶೈಲಿ ರಾಜಕಾರಣ ನಡೆಸುವುದು ಮುಂದೊಂದು ದಿನ ದೊಡ್ಡ ಅಪಾಯಕ್ಕೆ ದಾರಿ ಮಾಡುವುದರಲ್ಲಿ ಅನುಮಾನ ಇಲ್ಲ. 

ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯರವರು ಮಹಿಳೆಯರ ವಿಶ್ವಾಸ ಗೆಲ್ಲವಲ್ಲಿ ಯಶಸ್ವಿಯಾಗಿದ್ದಾರೆ. ಅವರೊಬ್ಬ ಐಕಾನ್‌ ಮುತ್ಸದ್ದಿ ಅನ್ನುವುದರಲ್ಲಿ ಪ್ರಶ್ನೆಗಳಿಲ್ಲ, ಆದರೆ ಶಿವಮೊಗ್ಗ ಜಿಲ್ಲೆಯ ವಿಚಾರದಲ್ಲಿ ಯಾಕೆ ಮೌನ ವಹಿಸುತ್ತಿದ್ದಾರೆ ಎಂಬುದೆ ಕಾಡುತ್ತಿರುವ ಗೊಂದಲ, ಮಹಿಳಾ ಅಧಿಕಾರಿಗೆ ಫೋನ್ ಮಾಡಿ ನಿಂದಿಸಿ, ಬೆದರಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯರವರು ಮಾತನಾಡಬೇಕಿತ್ತು. ಆ ಮಹಿಳೆಗೆ ಕೊನೆ ಪಕ್ಷ ಮುಂದಿನ ಕರ್ತವ್ಯದ ಬದುಕಿಗೆ ಒಂದಷ್ಟು ದೈರ್ಯ ತುಂಬಬೇಕಿತ್ತು ಎಂಬುದು ಜನರ ಅಭಿಪ್ರಾಯ. ಅವರ ಮೌನ, ಸದ್ಯ ಸಂತ್ರಸ್ತರಾಗುತ್ತಿರುವ ಸರ್ಕಾರಿ ಅಧಿಕಾರಿ ವರ್ಗವನ್ನು ಧೃತಿಗೆಡಿಸುತ್ತಿದೆ

ಮಹಿಳೆಯರಿಗೆ ಕೇವಲ ಯೋಜನೆಗಳನ್ನು ನೀಡಿ ಗೌರವಿಸಿದರೆ ಸಾಲದು. ಅವರ ಮಾನ ಪ್ರಾಣದ ರಕ್ಷಣೆಯೂ ಕೂಡ ಸರ್ಕಾರದ ಹೊಣೆಯಾಗುತ್ತದೆ. ಮಹಿಳಾ ಅಧಿಕಾರಿಗೆ ಆದ ಅನ್ಯಾಯವನ್ನು ಸಿದ್ದರಾಮಯ್ಯರವರು ಸಹಿಸುವುದಿಲ್ಲ ಎನ್ನುವುದು ಸರ್ಕಾರಿ ನೌಕರರ ವಲಯಕ್ಕೂ ತಿಳಿದಿದೆ. ಈ ನಿಟ್ಟಿನಲ್ಲಿ  ಸಿದ್ದರಾಮಯ್ಯನವರು ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ, ರಾಜ್ಯದ ಮಹಿಳೆಯರ ಘನತೆಯನ್ನು ಸಿದ್ದರಾಮಯ್ಯ ಎತ್ತಿ ಹಿಡಿಯಬೇಕಿದೆ. ಅಲ್ಲದೆ ಆ ಜನಪ್ರತಿನಿಧಿಯ ಅಧಿಕಾರ ದುರ್ಬಳಕೆಯ ಆರೋಪದ ದೂರುಗಳನ್ನು ಕೇಳಬೇಕಿದೆ.

 

SUMMARY |  mla sun case and shivamogga politics

KEY WORDS | mla sun case and shivamogga politics