ನಿಂದನೆಯಷ್ಟೆ ಅಲ್ಲ | ಮೈ ಮೇಲೆ ಲಾರಿ ಹತ್ತಿಸುವ ಬೆದರಿಕೆ | ಅಟ್ರಾಸಿಟಿ ಕೇಸ್‌ನ ವಾರ್ನಿಂಗ್ ಕೊಟ್ಟಿದ್ಯಾರು? MLA ಮಗನ ಅವತಾರ
mla son uses abusive language women government officer

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 11, 2025
ಮಹಿಳಾ ಸರ್ಕಾರಿ ಅಧಿಕಾರಿಗೆ ಎಂಎಲ್‌ಎ ಮಗ ನಿಂದಿಸಿದ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಮೊದಲ ದೃಶ್ಯದಲ್ಲಿ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಯನ್ನು ಅಶ್ಲೀಲವಾಗಿ ನಿಂದಿಸಿದ ಮಾತುಗಳು ರೆಕಾರ್ಡ್ ಆಗಿದ್ದರೆ, ಎರಡನೇ ವಿಡಿಯೋದಲ್ಲಿ ಮಹಿಳಾ ಅಧಿಕಾರಿಯು ತಮ್ಮ ಮೇಲೆ ಲಾರಿ ಹತ್ತಿಸುತ್ತೀರಿ ಎಂದು ಬೆದರಿಕೆ ಹಾಕಿದ ಬಗ್ಗೆ ಮಾತನಾಡಿದ್ದಾರೆ.
ಭದ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆಯ ಸಂಬಂಧ ಮಹಿಳಾ ಅಧಿಕಾರಿ ರೇಡ್ ನಡೆಸಿದ ಸಂದರ್ಭದಲ್ಲಿ ಎಂಎಲ್‌ಎಯೊಬ್ಬರು ಮಗನ ಚೇಲಾಗಳು ಸ್ಥಳಕ್ಕೆ ಬಂದು ಮಹಿಳಾ ಅಧಿಕಾರಿಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆನಂತರ ಆಪ್ತರ ಮೊಬೈಲ್ ಮೂಲಕ ಮಾತನಾಡುವ ವ್ಯಕ್ತಿ ಮಹಿಳಾ ಅಧಿಕಾರಿಯನ್ನು ಹೀನಾಮಾನವಾಗಿ ನಿಂದಿಸಿದ್ದಾರೆ ಎನ್ನಲಾದ ಆಡಿಯೊ ಮೊದಲು ಹೊರಬಿದ್ದ ವೈರಲ್ ವಿಡಿಯೋದಲ್ಲಿ ಕೇಳುತ್ತಿದೆ.
ಇದೀಗ ಹೊರಬಿದ್ದಿರುವ ಇನ್ನೊಂದು ವಿಡಿಯೋದಲ್ಲಿ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ಲಾರಿ ಹತ್ತಿಸುವ ಬೆದರಿಕೆ ಹಾಕ್ತೀದ್ದೀರಿ ಎಂದು ಅಧಿಕಾರಿ ಮಾತನಾಡಿದ್ದು, ಜನರನ್ನು ಕಳುಹಿಸುತ್ತೇನೆ ಎಂಬ ಆಡಿಯೋ ರೆಕಾರ್ಡ್ ಆಗಿದೆ. ಸದ್ಯ ವೈರಲ್ ವಿಡಿಯೋಗಳು ಮಹಿಳಾ ಅಧಿಕಾರಿಯೊಬ್ಬರು ಡ್ಯೂಟಿಯಲ್ಲಿರುವ ಅವರ ಸೇಫ್ಟಿಗೆ ಸಂಬಂಧಿಸಿದ್ದಾಗಿದೆ.
ಶಿವಮೊಗ್ಗ ಮೌನ
ಇನ್ನೂ ನಿನ್ನೆಯಿಂದ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ಇದರ ನಡುವೆ ನಡೆದ ಘಟನೆ ಸಂಬಂಧ ಶಿವಮೊಗ್ಗ ಪೊಲೀಸ್ ಆಡಳಿತ, ಜಿಲ್ಲಾಡಳಿತ ಹಾಗೂ ಸರ್ಕಾರಿ ನೌಕರರ ಸಂಘಗಳು ಜಾಣಮೌನಕ್ಕೆ ಶರಣಾಗಿವೆ. ಅದರಲ್ಲಿಯು ಕೆಲವು ಪೊಲೀಸ್ ಅಧಿಕಾರಿಗಳು ಮಹಿಳಾ ಸರ್ಕಾರಿ ಅಧಿಕಾರಿಯನ್ನೇ ಗುರಿಮಾಡುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ಆರೋಪಿಸುವ ಮಾತುಗಳು ರಾಜ್ಯಮಟ್ಟದ ಮಾಧ್ಯಮಗಳಲ್ಲಿ ಬಯಲಾಗುತ್ತಿವೆ.
ಸರ್ಕಾರಿ ಅಧಿಕಾರಿಗೆ ರಕ್ಷಣೆ ಇಲ್ಲವೆ
ಈ ನಡುವೆ ಮಾಧ್ಯಮವೊಂದರಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವೊಂದರಲ್ಲಿ ಮಹಿಳಾ ಅಧಿಕಾರಿಯು ಮಾತನಾಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ಮಹಿಳೆ ತಮ್ಮ ಮೈಮೇಲೆ ಲಾರಿ ಹತ್ತಿಸಲು ಬಂದಿದ್ದರು. ಆ ಬಳಿಕ ತಮ್ಮನ್ನು ಹೆದರಿಸುವ ಸಲುವಾಗಿ ಅಟ್ರಾಸಿಟಿ ಕೇಸ್ ಕೊಡಲು ಸ್ಟೇಷನ್‌ಗೆ ಹೋಗಿದ್ದರು. ಅಲ್ಲಿಂದ ಪಿಎಸ್‌ಐ ಒಬ್ಬರು ಕರೆ ಮಾಡಿ ನಿಮ್ಮ ವಿರುದ್ಧ ಅಟ್ರಾಸಿಟಿ ಕೇಸ್ ಕೊಡಲು ಬಂದಿದ್ಧಾರೆ ಎಂದು ಹೇಳಿದರು. ಪ್ರತಿಯಾಗಿ ನಾವು ರೇಡ್‌ಗೆ ಹೋಗಿದ್ದು, ಅಲ್ಲಿಂದ ವಾಪಸ್ ಬಂದಿವೆ, ಯಾರಿಗೆ ಏನೂ ಅಂದಿಲ್ಲ, ಅಟ್ರಾಸಿಟಿ ಅಂತಾ ಕೇಸ್ ಹಾಕಲು ಪ್ರೂಪ್ ಕೇಳುವುದಿಲ್ಲವೇ ಎಂದು ಪ್ರಶ್ನಿಸಿದೆನು. ಅದಕ್ಕೆ ಪೊಲೀಸ್ ಅಧಿಕಾರಿ ಏನು ಹೇಳದೆ ಸುಮ್ಮನಾದರು ಎಂದು ತಿಳಿಸಿದ್ದಾರೆ.
SUMMARY | mla son uses abusive language women government officer
KEY WORDS | mla son uses abusive language women government officer