ಮಹಿಳಾ ಸರ್ಕಾರಿ ಅಧಿಕಾರಿಗೆ MLA ಯೊಬ್ಬರ ಮಗನಿಂದ ಅಶ್ಲೀಲ ಬೈಗುಳದ ಬೆದರಿಕೆ ನಿಜನಾ? | Facebook ವಿಡಿಯೋ ನೋಡಿ ಭುಗಿಲೆದ್ದ ಆಕ್ರೋಶ

mla son uses abusive language women government officer

ಮಹಿಳಾ ಸರ್ಕಾರಿ ಅಧಿಕಾರಿಗೆ MLA ಯೊಬ್ಬರ ಮಗನಿಂದ ಅಶ್ಲೀಲ ಬೈಗುಳದ ಬೆದರಿಕೆ ನಿಜನಾ? | Facebook ವಿಡಿಯೋ ನೋಡಿ ಭುಗಿಲೆದ್ದ ಆಕ್ರೋಶ
mla son uses abusive language women government officer

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌ 

ಶಿವಮೊಗ್ಗವೂ ಈ ಹಿಂದೊಮ್ಮೆ ರೌಡಿ ಎಂಎಲ್‌ಎ ಕಥೆ ಕೇಳಿತ್ತು. ಇದೀಗ ರಿಪಬ್ಲಿಕ್‌ ಆಪ್‌…. ನಲ್ಲಿ ಎಂಎಲ್‌ಎಯೊಬ್ಬರ ಮಗ ಎಂದು ಆರೋಪಿಸಲಾದ ವ್ಯಕ್ತಿಯೊಬ್ಬ ಮಹಿಳಾ ಅಧಿಕಾರಿಯೊಬ್ಬರಿಗೆ ಅಶ್ಲೀಲ ರೌಡಿಸಂ ಮಾತುಗಳನ್ನು ಬೈಯ್ಯುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋ ಕೆಆರ್‌ಎಸ್‌ ಪಕ್ಷದ ರವಿ ಕೃಷ್ಣಾ ರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, ವಿಡಿಯೋದ ಬಗ್ಗೆ ಹೀಗೆ ಬರೆದುಕೊಂಢಿದ್ದಾರೆ.  

ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಗೆ ಶಾಸಕನ ಮಗನಿಂದ ಅವಾಚ್ಯ ಬೈಗುಳ ಮತ್ತು ಬೆದರಿಕೆ!?

ಇದರಲ್ಲಿರುವವರು ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಬಂದ ಅವರಿಗೆ ಫೋನಿನಲ್ಲಿ ಇನ್ನೊಂದು ಕಡೆಯಿಂದ ಬೈದು ಬೆದರಿಕೆ ಹಾಕುತ್ತಿರುವವರು ಜಿಲ್ಲೆಯ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ. ಆ ಪರಮಕೊಳಕ ಕ್ರಿಮಿನಲ್ ಯಾರೆಂದು ನಿಮಗೆ ಗೊತ್ತೇ?

ಅಂದಹಾಗೆ, ಎಲ್ಲಿಯವರೆಗೆ ಸರ್ಕಾರಿ ಅಧಿಕಾರಿಗಳು ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ತಮ್ಮ ಕೆಲಸ ಮಾಡುವುದಿಲ್ಲವೋ ಅಲ್ಲಿಯವರೆಗೆ ಭ್ರಷ್ಟ ಮತ್ತು ಕ್ರಿಮಿನಲ್ ರಾಜಕಾರಣಿಗಳು ಅವರಿಗೆ ಬೆಲೆ ಕೊಡುವುದಿಲ್ಲ. ಈ ತರಹದ ಘಟನೆಗಳು ನಡೆಯುತ್ತಿರುತ್ತವೆ. ಒಮ್ಮೆ ಬಹುಸಂಖ್ಯಾತ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಆರಂಭಿಸಿದರೆ ಪೋಕರಿಗಳೆಲ್ಲ ತಮ್ಮ ಬಿಲ ಸೇರುತ್ತಾರೆ. ಇಲ್ಲವಾದರೆ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರು ಈ ತರಹ ದಾಳಿಗೆ ಒಳಗಾಗುತ್ತಾರೆ ಮತ್ತು ಮಿಕ್ಕ ಭ್ರಷ್ಟ ಅಧಿಕಾರಿಗಳು ಭ್ರಷ್ಟರ ಮನೆಯ ಕಕ್ಕಸುಗುಂಡಿ ತೊಳೆಯುತ್ತಾರೆ.

ಈ ಕೂಡಲೇ ಸರ್ಕಾರ ಈ ಅಧಿಕಾರಿಗೆ ರಕ್ಷಣೆ ಕೊಡಬೇಕು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಕೂಡಲೇ Suo Moto ಪ್ರಕರಣ ದಾಖಲಿಸಿ ಬೆದರಿಕೆ ಹಾಕಿದ ನೀಚನ ಮೇಲೆ ಕ್ರಮ ಜರುಗಿಸಬೇಕು. ರಾಜ್ಯದಾದ್ಯಂತ ಇರುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳು ಈ ಮಹಿಳಾ ಅಧಿಕಾರಿಯ ಬೆಂಬಲಕ್ಕೆ ನಿಲ್ಲಬೇಕು. ಶಿವಮೊಗ್ಗ ಜಿಲ್ಲೆಯ KRS ಪಕ್ಷದ ಮುಖಂಡರು ಈ ಕೂಡಲೇ ಈ ಅಧಿಕಾರಿಯನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಬೇಕು ಮತ್ತು ಅವರು ಪೊಲೀಸರಿಗೆ ದೂರು ನೀಡಲು ಒತ್ತಾಯಿಸಬೇಕು ಎಂದು ಈ ಮೂಲಕ ನಾನು ಸೂಚಿಸುತಿದ್ದೇನೆ.

- ರವಿ ಕೃಷ್ಣಾರೆಡ್ಡಿ

ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ.

ಯಾರು? ಯಾರು? ಯಾರು?

ಇವತ್ತು ಅಂದರೆ ಫೆಬ್ರವರಿ 10 ನೇ ತಾರೀಖು ಮೂರು ಗಂಟೆಯ ಹೊತ್ತಿಗೆ ರವಿ ಕೃಷ್ಣಾ ರೆಡ್ಡಿಯವರು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೋದಲ್ಲಿರುವ ಧ್ವನಿ ಯಾರದ್ದು ಎಂದು ಆ ವಿಡಿಯೋ ದೃಶ್ಯವನ್ನು ನೋಡಿದವರು ಚರ್ಚಿಸುತ್ತಿದ್ದಾರೆ. ವಿಡಿಯೋ ದೃಶ್ಯದಲ್ಲಿ ಕಾಣುತ್ತಿರುವ ಫೋನ್‌ನಲ್ಲಿನ ಹೆಸರು ಮತ್ತು ಆ ಧ್ವನಿ ಯಾರದ್ದು ಎನ್ನುವ ಚರ್ಚೆಗಳ ಜೊತೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರಿಗೆ ಕಿಂಚಿತ್ತು ಗೌರವವನ್ನೆ ನೀಡದೇ ಮಾತನಾಡುವ ಹೀನ ಮನಸ್ಥಿತಿಯನ್ನು ತೋರಿದವರ ವಿರುದ್ಧ ಕ್ರಮಕ್ಕೆ ಆಗ್ರಹವೂ ಕೇಳಿಬರುತ್ತಿದೆ. 

ಮೂಲಗಳ ಪ್ರಕಾರ

ಮೂಲಗಳ ಪ್ರಕಾರ, ಕೆಆರ್‌ಎಸ್‌ ಪಕ್ಷದ ರವಿ ಕೃಷ್ಣಾ ರೆಡ್ಡಿಯವರು ಹಂಚಿಕೊಂಡ ಬಳಿಕವಷ್ಟೆ ಇಂತಹದ್ದೊಂದು ಕುಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಯೊಬ್ಬರು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಜಾಗದ ಮೇಲೆ ತಡರಾತ್ರಿ ರೇಡ್‌ ನಡೆಸಿದ ಹೊತ್ತಿನಲ್ಲಿ ಈ ಘಟನೆ ನಡೆದಿದೆ. 

ವಿಡಿಯೋದಲ್ಲಿ ಕಾಣುತ್ತಿರುವಂತೆ, MLA ಪುತ್ರ ಎಂದು ದೂರಲಾದ  ವ್ಯಕ್ತಿಗೆ ಅಲ್ಲಿನ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಆತನಿಂದ ಫೋನ್‌ ಕಾಲ್‌ ಮೂಲಕ ವಿಷಯ ತಿಳಿದ ಆ ವ್ಯಕ್ತಿಯು ಅಧಿಕಾರಿಗೆ ಫೋನ್‌ ಕೊಡಲು ತಿಳಿಸಿದ್ದಾರೆ. ಆದರೆ ಫೋನ್‌ ತೆಗೆದುಕೊಂಡು ಮಾತನಾಡಲು ಒಪ್ಪದ ಅಧಿಕಾರಿ ತಮ್ಮ ಫೋನ್‌ಗೆ ಕರೆ ಮಾಡುವಂತೆ ತಿಳಿಸಿದ್ದಾರೆ.

ಅಷ್ಟಕ್ಕೆ ಕೆಟ್ಟ ರೀತಿಯಲ್ಲಿ ಮಾತನಾಡಲು ಆರಂಭಿಸಿದ ಆ ವ್ಯಕ್ತಿಯು ಮಹಿಳೆ ಎನ್ನುವುದನ್ನು ಸಹ ನೋಡದೇ ಅಶ್ಲೀಲವಾಗಿ ನಿಂದಿಸಿದ್ದಾರೆ. ಇದಕ್ಕೆ ಮಹಿಳಾ ಅಧಿಕಾರಿ ಆಕ್ಷೇಪಿಸಿದರೂ ಸಹ ಮಾತು ನಿಲ್ಲಿಸದ ಆ ವ್ಯಕ್ತಿಯು ಅಧಿಕಾರಿಯನ್ನು ಹೀನಾಮಾನ ನಿಂದಿಸಿದ್ದಾರೆ. ಈ ದೃಶ್ಯವನ್ನು ಅಲ್ಲಿದ್ದ ಒಬ್ಬರು ರೆಕಾರ್ಡ್‌ ಮಾಡಿಕೊಂಡಿದ್ದು, ಆ ದೃಶ್ಯದಲ್ಲಿ ಫೋನ್‌ ನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಹೆಸರು ಸಹ ಕಾಣಿಸುತ್ತಿದೆ. ಇದೇ ವೇಳೆ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಬಾರದು ಎಂದು ಎಚ್ಚರಿಕೆ ನೀಡುವುದು ಸಹ ರೆಕಾರ್ಡ್‌ ಆಗಿರುವ ದೃಶ್ಯದಲ್ಲಿ ಕಾಣುತ್ತಿದೆ. ಮೇಲಾಗಿ ವಿಡಿಯೋ ಪೂಟೇಜ್‌ಗಳು ಇನ್ನಷ್ಟು ಇದ್ದು, ಕೆವಲ ಅದರ ತುಣುಕು ಮಾತ್ರ ಬಿದ್ದಿದೆ ಎಂಬುದು ಸಹ ದೃಶ್ಯಾವಳಿಯಲ್ಲಿ ಸ್ಪಷ್ಟವಾಗುತ್ತಿದೆ. 

ಇವೆಲ್ಲದ ನಡುವೆ ಸಂತ್ರಸ್ತ ಅಧಿಕಾರಿ ವಿಚಾರದ ಬಗ್ಗೆ ಮೌನ ವಹಿಸಿರುವುದು ಸಹ ಚರ್ಚೆಗೆ ಕಾರಣವಾಗಿದೆ. ಅವರ ಮೌನಕ್ಕೆ ಆಡಳಿತದ ಪ್ರಭಾವ ಕಾರಣವಾಯಿತೆ ಎಂದು  ಅನುಮಾನ ಮೂಡಿದೆ. 

SUMMARY  | mla son uses abusive language women government officer

KEY WORDS | mla son uses abusive language women government officer