Agumbe Ghat | ಆಗುಂಬೆಯ 5 ಮತ್ತು 6 ನೇ ತಿರುವಿನಲ್ಲಿ ಗುಡ್ಡ ಕುಸಿತ | ವಾಹನ ಸವಾರರೇ ಹುಷಾರಾಗಿ ಚಲಿಸಿ
Heavy vehicles have been banned from Agumbe Ghat due to concerns about landslides. Despite the ban, a minor landslide has occurred, with soil falling onto the road at the 5th and 6th cross
SHIVAMOGGA | MALENADUTODAY NEWS | Jul 14, 2024
ಮಳೆ ಹಿನ್ನೆಲೆಯಲ್ಲಿ ಹೆವಿ ವೆಹಿಕಲ್‌ಗಳಿಗೆ ಆಗುಂಬೆ ಘಾಟಿಯಲ್ಲಿ ನಿರ್ಬಂಧ ಹೇರಲಾಗಿದೆ. ಘಾಟಿಯಲ್ಲಿ ಗುಡ್ಡ ಕುಸಿಯುವ ಆತಂಕದ ಕಾರಣಕ್ಕೆ ಈ ಕ್ರಮವನ್ನ ಜಿಲ್ಲಾಡಳಿತ ಕೈಗೊಂಡಿತ್ತು. ಕ್ರಮದ ಹೊರತಾಗಿಯು ಆತಂಕ ನಿಜವಾಗಿದೆ. ಆಗುಂಬೆ ಘಾಟಿಯಲ್ಲಿ ಸಣ್ಣಕ್ಕೆ ಧರೆ ಕುಸಿದಿದೆ. ಮುಖ್ಯವಾಗಿ ಘಾಟಿ ತಿರುವುಗಳಲ್ಲಿ ಧರೆಯಿಂದ ಇಳಿಯುವ ನೀರು, ಮಣ್ಣನ್ನ ಸಡಿಲಗೊಳಿಸುತ್ತಲೇ ಇರುತ್ತವೆ. ಇನ್ನೂ ರಸ್ತೆ ಮೇಲಿನ ನೀರು ಧರೆಕೊರೆಯುತ್ತಾ ಹರಿಯುತ್ತವೆ. ಇದರ ಪರಿಣಾಮವೋ ಏನೋ ಎಂಬಂತೆ ಇವತ್ತು ಐದು ಮತ್ತು ಆರನೇ ಕ್ರಾಸ್‌ನಲ್ಲಿ ಬೆಟ್ಟದಲ್ಲಿ ರಸ್ತೆ ಪಕ್ಕದ ಧರೆ ತುಸು ಪ್ರಮಾಣದಲ್ಲಿ ಕುಸಿದಿದೆ. ಕುಸಿದ ಮಣ್ಣು ರಸ್ತೆ ಮೇಲೆ ಬಿದ್ದಿದ್ದು, ಅರ್ಧರಸ್ತೆಯ ತುಂಬಾ ಹರಡಿದೆ.
ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದಿದ್ಯಾ? ವಿಡಿಯೋ ಬಗ್ಗೆ ...
ಇನ್ನೂ ಸ್ಥಳೀಯರು ಹೇಳುವ ಪ್ರಕಾರ, ಇನ್ನೊಂದಿಷ್ಟು ದಿನ ಹೀಗೆ ಧರೆಕುಸಿಯುವ ಆತಂಕವಿದೆ. ಈ ಹಿಂದೆ ದೊಡ್ಡ ಪ್ರಮಾರಣದಲ್ಲಿ ಘಾಟಿಯಲ್ಲಿ ಗುಡ್ಡ ಕುಸಿದಿತ್ತು. ಆ ಥರದ ಘಟನೆಗಳು ಮತ್ತೆ ಸಂಭವಿಸದೇ ಇರಲಿ ಎನ್ನುತ್ತಾರೆ. ಇನ್ನೂ
ಈಗಾಗಲೇ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನಿಷೇಧ ಮಾಡಲಾಗಿದ್ದು ತೀರ್ಥಹಳ್ಳಿ - ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಹೋಗುತ್ತಿವೆ. ಈಗ ಆಗುಂಬೆ ಘಾಟಿಯ 5 ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದ್ದು ವಾಹನ ಸವಾರರು ಎಚ್ಚರಿಕೆವಹಿಸಬೇಕಿದೆ.
Heavy vehicles have been banned from Agumbe Ghat due to concerns about landslides. Despite the ban, a minor landslide has occurred, with soil falling onto the road at the 5th and 6th cross. Heavy vehicles are being redirected through Hulikal Ghat, and drivers are advised to exercise caution.