9 ಸಾವಿರ ಸಾಲಕ್ಕೆ ಬೈಕ್‌ ಕಿತ್ತುಕೊಂಡ ದಂಪತಿ | ವಿಷ ಕುಡಿದು ಬದುಕು ಮುಗಿಸಿದ ಎಲೆ ವ್ಯಾಪಾರಿ | ಶಿವಮೊಗ್ಗದಲ್ಲಿ ಮನುಷ್ಯತ್ವದ ಕರುಳು ಹಿಚುಕುವ ಕಥೆ

Man commits suicide, harassed to repay Rs 9,000 loan, micro finance torture,micro finance torture case,microfinance loan,micro finance torture in karnataka

9 ಸಾವಿರ ಸಾಲಕ್ಕೆ ಬೈಕ್‌ ಕಿತ್ತುಕೊಂಡ ದಂಪತಿ | ವಿಷ ಕುಡಿದು ಬದುಕು ಮುಗಿಸಿದ ಎಲೆ ವ್ಯಾಪಾರಿ | ಶಿವಮೊಗ್ಗದಲ್ಲಿ ಮನುಷ್ಯತ್ವದ ಕರುಳು ಹಿಚುಕುವ ಕಥೆ
Man commits suicide, harassed to repay Rs 9,000 loan, micro finance torture,micro finance torture case,microfinance loan,micro finance torture in karnataka

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 25, 2025 ‌‌ 

ಮೈಕ್ರೋ ಫೈನಾನ್ಸ್‌ ಹಾವಳಿಯ ಸರಣಿ ದುರಂತಗಳ ನಡುವೆ ಶಿವಮೊಗ್ಗದಲ್ಲಿ ವಿಳ್ಳದೆಲೆ ಮಾರುವಾತ ಒಬ್ಬ ತನಗಾದ ಅವಮಾನಕ್ಕೆ ಕಳೆನಾಷಕ ಕುಡಿದು ಜೀವ ಬಿಟ್ಟಿದ್ದಾನೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಹಿರೇ ಎಡಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿವರ ಬಡವನಾಗಿ ಹುಟ್ಟಬಾರದೇನೋ ಎಂದೇನಿಸುತ್ತದೆ. ಏಕೆಂದರೆ ಕೇವಲ ಒಂಬತ್ತು ಸಾವಿರ ಸಾಲಕ್ಕೆ ಇಲ್ಲಿ ಬಡವ ಪ್ರಾಣವನ್ನೆ ಬಿಟ್ಟಿದ್ದಾನೆ. 

ಸೊರಬದ ಹಿರೇಎಡಗೋಡು ಗ್ರಾಮದ ನಿವಾಸಿ 48 ವರ್ಷದ ಮಹೇಶ ಎಂಬಾತ ವಿಳ್ಯದೆಲೆ ಮಾರಿಕೊಂಡು ಜೀವನ ನಡೆಸ್ತಿದ್ದ. ಇದ್ದುದ್ದರಲ್ಲಿ ಒಂದು ಬೈಕ್‌ ಹಿಡ್ಕೊಂಡು ರಾಣೆಬೆನ್ನೂರಿನಿಂದ ಎಲೆ ತಂದು ಮಾರುತ್ತಿದ್ದ ಮಹೇಶ್‌ ಅದರ ವಹಿವಾಟಲ್ಲೆ ತನ್ನ ಸಂಸಾರ ಸಾಗಿಸ್ತಿದ್ದ. ವಿಳೆದೆಲೆ ಮಾರುವ ಬಂಡವಾಳಕ್ಕೆ ಎಂದ ಕೈ ಸಾಲ ಪಡೆಯುತ್ತಿದ್ದ ಮಹೇಶ ಪ್ರತಿದಿನ ವ್ಯಾಪಾರ ಮುಗಿದ ಬಳಿಕ, ಪಡೆದ ಕೈ ಸಾಲ ವಾಪಸ್‌ ಕೊಟ್ಟು ತನ್ನ ಲಾಭ ತಂದು ಮನೆಗೆ ನೀಡುತ್ತಿದ್ದ. ಇದರ ನಡುವೆ ಯಾವುದೋ ಕಾರಣಕ್ಕೆ ಕಾರಣಕ್ಕೆ ಮಾಡಿ ಐದು ಸಾವಿರ ರೂಪಾಯಿ ಸಾಲ, ಮಹೇಶನ ಜೀವ ತೆಗೆಯುತ್ತೆ ಎಂದು ಆತನಿಗೂ ಗೊತ್ತಿರಲಿಲ್ಲ. 

ಮಹೇಶ ತಮ್ಮೂರಿನ ಹತ್ತಿರದಲ್ಲಿಯೇ ಇರುವ ದಂಪತಿ ಬಳಿ ಐದು ಸಾವಿರ ಸಾಲ ಪಡೆದುಕೊಂಡಿದ್ದನಂತೆ. ಅದು ಇದು ಅಂತ ಪ್ರತಿ ತಿಂಗಳು ಎದುರಾಗುವ ಜೇಬಿನ ಖರ್ಚಿನ ನಡುವೆ ಮಹೇಶನಿಗೆ ಐದು ಸಾವಿರ ಸಾಲ ಮರು ಹೊಂದಿಸಿ ಕೊಡಲು ಆಗಿರಲಿಲ್ಲ. ಇದರ ನಡುವೆ ಸಾಲ ಬಡ್ಡಿ ಸೇರಿ  ಒಂಬತ್ತು ಸಾವಿರವಾಗಿದೆ. ಹೀಗಾಗಿ ಮಹೇಶ್‌ ಸಿಕ್ಕಲ್ಲಿ ಆತನನ್ನು ಅಡ್ಡ ಹಾಕಿ ಕೇಳಲು ಆರಂಭಿಸಿದ್ದರು ದಂಪತಿ. ಅದೇ ರೀತಿಯಲ್ಲಿ ಇವತ್ತಿಗೆ ಎರಡು ಮೂರು ದಿನಗಳ ಹಿಂದೆ ವ್ಯಾಪಾರಕ್ಕೆಂದು ಎಲೆ ತಗೆದುಕೊಂಡು ಬರುತ್ತಿದ್ದ ಮಹೇಶ್‌ನನ್ನ ಅಡ್ಡಗಟ್ಟಿದ ದಂಪತಿ ಹೀನಾಮಾನ ಬೈದಿದ್ದು, ಆತನ ಅನ್ನದ ಮೂಲವಾಗಿದ್ದ ಎಳೆಕಟ್ಟುಗಳನ್ನು ಬೀಳಿಸಿದ್ದಾರೆ. ಅಲ್ಲದೆ ಆತನ ಬೈಕ್‌ನ್ನ ಕಿತ್ತುಕೊಂಡು ಹೋಗಿದ್ದಾರೆ.ಎಲ್ಲರೆದರು ಬೀದಿಯಲ್ಲಿ ಅವಮಾನಗೊಂಡ ಮಹೇಶ ಮಾನಸಿಕವಾಗಿ ಕುಗ್ಗಿದ್ದ. ಅಲ್ಲದೆ ಬೈಕ್‌ನ್ನ ಕಿತ್ತುಕೊಂಡು ಹೋಗಿದ್ದರಿಂದ ಈ ಕಡೆ ಎಲೆ ವ್ಯಾಪಾರ ಮಾಡಲಾಗದೆ, ಆ ಕಡೆ ಎಲೆವ್ಯಾಪಾರದದ ಬಂಡವಾಳದ ದುಡ್ಡು ವಾಪಸ್‌ ಕೊಡಲಾಗದೆ, ಸಾಲವೂ ಕಟ್ಟಲಾಗದೇ ಜರ್ಜರಿತಗೊಂಡಿದ್ದ. ಬೇರೆ ದಾರಿ ಕಾಣ್ತಿಲ್ಲ ಅಂತಾ ವಿಷ ಕುಡಿದುಬಿಟ್ಟಿದ್ದ. ವಿಷಯ ತಿಳಿದ ತಕ್ಷಣವೇ ಮಹೇಶನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಹೇಶ ಇದೀಗ ಸಾವನ್ನಪ್ಪಿದ್ದಾನೆ. ಆನವಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತೀವಿ ಎಂದಿದ್ದಾರೆ. ಆದರೆ ವ್ಯಕ್ತಿಯೊಬ್ಬನ ಜೀವದ ಬೆಲೆ ಕೇವಲ 9 ಸಾವಿರವೇ ಎಂಬ ಪ್ರಶ್ನೆ ಮಾತ್ರ ಮನುಷ್ಯತ್ವದ ಕರಳು ಹಿಚುಕುತ್ತಿದೆ.

SUMMARY |   Man commits suicide after being harassed to repay Rs 9,000 loan

KEY WORDS |   Man commits suicide, harassed to repay Rs 9,000 loan, micro finance torture,micro finance torture case,microfinance loan,micro finance torture in karnataka