SHIVAMOGGA | MALENADUTODAY NEWS
Sep 7, 2024 mescom shimoga
ಈ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳಿವೆ. ಅಲ್ಲದೆ ರಜಾದಿನಗಳಿವೆ. ಹೀಗಾಗಿ ಸರ್ಕಾರಿ ಕಚೇರಿಗಳು, ಗ್ರಾಹಕ ಸಂಬಂಧಿ ವಹಿವಾಟು ಹೊಂದಿರುವ ಸಂಸ್ಥೆಗಳ ರಜೆ ಇರುತ್ತವೆ. ಇದರಿಂದ ಜನರಿಗೆ ಸಮಸ್ಯೆಗಳು ಸಹ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಬಿಲ್ ಕಟ್ಟಲು ಹಾಗೂ ಮೆಸ್ಕಾಂ ಸೇವೆಗಳಲ್ಲಿ ವ್ಯತ್ಯಾಸವಾಗಬಾರದು ಎನ್ನುವ ಕಾರಣಕ್ಕೆ ರಜಾ ದಿನಗಳಲ್ಲಿಯು ಮೆಸ್ಕಾಂ ವಿಭಾಗದ ಕೌಂಟರ್‌ಗಳು ತೆರದಿರಲಿವೆ. ಈ ಸಂಬಂಧ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಸಾಲು ಸಾಲು ರಜೆಗಳಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಗ್ರಾಹಕರಿಗೆ ತೊಂದರೆ ಆಗದಂತೆ ಮೆಸ್ಕಾಂನ ವಿಶೇಷ ಕಂದಾಯ ವಸೂಲಾತಿ ಅಭಿಯಾನದ ಅಡಿಯಲ್ಲಿ ಕೌಂಟರ್‌ಗಳನ್ನ ತೆರೆದಿಡಲಾಗುತ್ತಿದೆ.
ಮಂಗಳೂರು, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು
ವಿದ್ಯುತ್ ಬಿಲ್ ಪಾವತಿಸಲು ಅನುಕೂಲವಾಗುವಂತೆ ಮೆಸ್ಕಾಂನ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನಗದು ಕೌಂಟರ್‌ಗಳನ್ನು ರಜಾದಿನಗಳಲ್ಲೂ ತೆರೆದಿಡಲು ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ ತಿಂಗಳ ರಜಾ ದಿನಗಳಾದ 7, 8, 14, 15, 16, 22, 28 ಹಾಗೂ 29ರಂದು ಕೌಂಟರ್‌ಗಳಲ್ಲಿ ಸೇವೆ ಲಭ್ಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದದೆ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ