ಪಂಚಾಯಿತಿ ಕಚೇರಿ ಎದುರು ಸದಸ್ಯನಿಂದಲೇ ಧರಣಿ

member protest at sogane grama panchayat

ಪಂಚಾಯಿತಿ ಕಚೇರಿ ಎದುರು ಸದಸ್ಯನಿಂದಲೇ ಧರಣಿ
member protest at sogane grama panchayat

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 12, 2025 ‌‌ ‌

ಸುಪ್ರೀಂಕೋರ್ಟ್‌ ತೀರ್ಪೊಂದರಲ್ಲಿ ಪ್ರಜಾತಂತ್ರದ ಪ್ರಗತಿ ಅಡ್ಡಗಾಲು ಹಾಕುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದೆ. ಈ ಮೂಲಕ ಅಧಿಕಾರಿಗಳ ಮೇಲ್ತನದ ಪ್ರತಿಷ್ಟೆಗೆ ಸುಪ್ರೀಂಕೋರ್ಟ್‌ ಪರೋಕ್ಷ ಎಚ್ಚರಿಕೆಯನ್ನು ನೀಡಿದೆ. ಆದಾಗ್ಯು ಅಧಿಕಾರಿಗಳು ಹಾಗೂ ಜನಪ್ರತಿನಿಧಿನಗಳ ನಡುವಿನ ತಿಕ್ಕಾಟಕ್ಕೆ ಕೊನೆ ಬೀಳುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ವಸತಿ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣಕ್ಕೆ ಪಿಡಿಓ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಸೋಗಾನೆ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್  ಪಂಚಾಯಿತಿ ಕಚೇರಿ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ. 

ಇಲ್ಲಿನ  ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನಲ್ಲಿಯೇ ಜನವಸತಿ ಹೆಚ್ಚಾಗಿದೆ. ಇವರಿಗೆ 2017 ರಲ್ಲಿ ಹಕ್ಕುಪತ್ರ ಸಹ ನೀಡಲಾಗಿದೆ. ಆದರೆ ಇದೀಗ ವಸತಿ ಯೋಜನೆಯ ಅಡಿಯಲ್ಲಿ ಮನೆ ಕಟ್ಟಿಕೊಳ್ಳಲು ಅರ್ಜಿ ಹಾಕಲು ಪಿಡಿಒ ಅವಕಾಶ ಕೊಡುತ್ತಿಲ್ಲ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ನಿರಾಕರಿಸುತ್ತಿದ್ದಾರೆ ಎಂದು ಅನಿಲ್‌ ಕುಮಾರ್‌ರವರ ಆರೋಪ. ಹೀಗಾಗಿ ಏಕಾಂಗಿಯಾಗಿ ಅನಿಲ್‌ ಪ್ರತಿಭಟನೆ ನಡೆಸಿದ್ದಾರೆ. ಇವರ ಪ್ರತಿಭಟನೆಗೆ ಸ್ಥಳೀಯರು ಸಹ ಸಾಥ್‌ ನೀಡಿದರು.