ಜೈಲಿಗೆ ಈವರೆಗೆ ಯಾರೂ ಭೇಟಿ ನೀಡಿಲ್ಲ- ಅನಾಥನಾದನೇ ಚೆನ್ನಯ್ಯ?

prathapa thirthahalli
Prathapa thirthahalli - content producer

Mask man chinnayya :  ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿರುವ ಚೆನ್ನಯ್ಯ, ಪ್ರಸ್ತುತ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿದ್ದಾನೆ. ಚೆನ್ನಯ್ಯನನ್ನು ಜೈಲಿನ ನಿಯಮಾವಳಿಗಳ ಪ್ರಕಾರವೇ ನಡೆಸಿಕೊಳ್ಳಲಾಗುತ್ತಿದೆ. ಚೆನ್ನಯ್ಯ ಇರುವ ಬ್ಯಾರಕ್‌ಗೆ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ.

ಚೆನ್ನಯ್ಯ ಜೈಲಿಗೆ ಬಂದಾಗಿನಿಂದ ಇಲ್ಲಿಯವರೆಗೂ ಅವನನ್ನು ಭೇಟಿ ಮಾಡಲು ಯಾರೂ ಬಂದಿಲ್ಲ ಎಂಬುದು ಆಶ್ಚರ್ಯದ ಸಂಗತಿಯಾಗಿದೆ. ಸಾಮಾನ್ಯವಾಗಿ ಜೈಲು ಸೇರಿದ ವ್ಯಕ್ತಿಯನ್ನು ಕುಟುಂಬದವರು ಮತ್ತು ಸ್ನೇಹಿತರು ಭೇಟಿಯಾಗುವುದು ಸಹಜ. ಆದರೆ, ಚೆನ್ನಯ್ಯನ ಪ್ರಕರಣದಲ್ಲಿ ಆತನ ಪತ್ನಿ ಸೇರಿದಂತೆ ಯಾರೂ ಭೇಟಿ ನೀಡಿಲ್ಲ. ಚೆನ್ನಯ್ಯ ಕೂಡ ಯಾರ ಭೇಟಿಗೂ ಅವಕಾಶ ಕೇಳಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

Mask man chinnayya : ಊಟದ ವಿಚಾರದಲ್ಲಿ ಎಚ್ಚರಿಕೆ

ಜೈಲು ಸೇರಿರುವ ಚೆನ್ನಯ್ಯನಿಗೆ ನೀಡುವ ಊಟ, ತಿಂಡಿ ವಿಚಾರದಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ವೈದ್ಯಕೀಯ ಪರೀಕ್ಷೆಗೊಳಪಡಿಸಿದ ನಂತರವೇ ಆತನಿಗೆ ಊಟ ನೀಡಲಾಗುತ್ತಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ, ಜೈಲು ಸೇರಿದ ಮೊಬೈಲ್‌ಗಳು, ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಯಾವುದೇ ಕೃತ್ಯ ಎಸಗಬಹುದು. ಚೆನ್ನಯ್ಯ ಕಾವೇರಿ ಬ್ಯಾರಕ್‌ನಲ್ಲಿ ಇದ್ದಾನೆ ಎಂದು ಹೇಳಲಾಗುತ್ತಿದ್ದರೂ, ಭದ್ರತೆಯ ದೃಷ್ಟಿಯಿಂದ ಆತನ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ. ಚೆನ್ನಯ್ಯನನ್ನು ಯಾವುದೇ ಕಾರಣಕ್ಕೂ ಜೈಲಿನ ಆವರಣದ ಹೊರಗೆ ಬಿಟ್ಟಿಲ್ಲ.

ಚೆನ್ನಯ್ಯನಿಗೆ ಇದು ಕಠಿಣ ಶಿಕ್ಷೆಯಂತೆ ಕಂಡರೂ, ಆತನ ಜೀವ ರಕ್ಷಣೆಯ ಹೊಣೆಗಾರಿಕೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲಿದೆ. ದಿನದ 24 ಗಂಟೆಯೂ ಜೈಲು ಸಿಬ್ಬಂದಿ ಸಕ್ರಿಯರಾಗಿದ್ದು, ಪ್ರತಿ ಬ್ಯಾರಕ್‌ನಲ್ಲಿ ನಡೆಯುವ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಚೆನ್ನಯ್ಯನ ಜಾಮೀನು ಅರ್ಜಿ ವಿಚಾರಣೆಯು ಸೆಪ್ಟೆಂಬರ್ 16ಕ್ಕೆ ಮುಂದೂಡಿಕೆಯಾಗಿದೆ.

Mask man chinnayya Mask man interview
Mask man chinnayya Mask man interview
Share This Article