ರಾಶಿ, ಬೆಟ್ಟೆ, ಹಸ, ಗೊರಬಲು ಅಂದರೇ ಏನು? ಯಾವ ಅಡಕೆಗೆ ರೇಟು ಜಾಸ್ತಿ! ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

What is Rashi, Bette, Hasa, Gorabalu? Which nut is overrated! Here are answers to curious questions

ರಾಶಿ, ಬೆಟ್ಟೆ, ಹಸ, ಗೊರಬಲು ಅಂದರೇ ಏನು? ಯಾವ ಅಡಕೆಗೆ ರೇಟು ಜಾಸ್ತಿ! ಕುತೂಹಲದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Rashi, Bette, Hasa, Gorabalu

Shivamogga  Mar 27, 2024  Rashi, Bette, Hasa, Gorabalu ಅಗೆಯುವ ಎಲೆಯಡಿಕೆಯೊಂದಿಗೆ ಅಡಿಕೆ ವಿಚಾರವೂ ಮಲ್ನಾಡ್‌ನಲ್ಲಿ ಚೆಂದ ಚರ್ಚೆಯಾಗುತ್ತದೆ.ನುಕ್ಸಾನೋ? ಲಾಭವೋ? ಬೇರೆ ವಿಷಯ. ಆದರೆ ಅಡಿಕೆ ಮಾತ್ರ ಮಲೆನಾಡು ಮಂದಿಯ ಮಾತಿನ ಮಂಟಪ ಎನ್ನುವುದರಲ್ಲಿ ಅನುಮಾನ ಇಲ್ಲ. ನಿಂದು ಔಷಧಿಯಾಯ್ತನಾ? ನೀರು ಬಿಟ್ಟನಾ? ಈ ಸಲ ಕಥೆ ಹೆಂಗಾ? ಹೀಗೆ ಮಲೆನಾಡಿಗರ ಮಾತು ಅಡಿಕೆ ಸುತ್ತ ಸುತ್ತುತ್ತಲೇ ಇರುತ್ತದೆ.  

ಮಲೆನಾಡಿನ ಜನರ ಪಲ್ಸ್‌ಗೆ ತಕ್ಕಂತೆ ಅಡಕೆಯ ವಿಚಾರದಲ್ಲಿ ಮಲೆನಾಡು ಟುಡೆ ಸಹ ಅಡಿಕೆಗೆ ಸಂಬಂಧಿಸಿದ ವರದಿಗಳನ್ನ ಪ್ರಕಟಿಸುತ್ತಿದೆ. ಇತ್ತೀಚೆಗಷ್ಟೆ ತೀರ್ಥಹಳ್ಳಿ ಪ್ರತಾಪ್‌ ಅಡಕೆ ಚೇಣಿ ಬಗ್ಗೆ ನಿಮಗೆಷ್ಟು ಗೊತ್ತು? ಲಾಭ ಯಾರಿಗೆ ? ನಷ್ಟ ಯಾರಿಗೆ? ಹೇಗೆ ನಡೆಯುತ್ತೆ ಈ ವಹಿವಾಟು!  ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದರು.. ಇದೀಗ ಇನ್ನೊಂದಿಷ್ಟು ಮಾಹಿತಿಯನ್ನು ಮಲೆನಾಡಿಗರ ಮಾಹಿತಿ ಪಡೆದು ನಿಮ್ಮ ಮುಂದೆ ಇಡುತ್ತಿದ್ದಾರೆ. 

ಅಡಿಕೆಯಲ್ಲಿ ಎಷ್ಟು ವಿಧ. ಬೆಟ್ಟೆ .ಹಸ ಹಾಗೂ ಗೊರಬುಲು ಅಡಿಕೆ ಎಂದರೇನು? ಯಾವ ಅಡಿಕೆ ತೂಕ ಜಾಸ್ತಿ. ಯಾವ ಅಡಿಕೆಗೆ ರೇಟ್ ಜಾಸ್ತಿ. 

ಅಡಿಕೆ ಚೇಣಿದಾರರಿಂದ ಹಿಡಿದು ಅಡಕೆ ವ್ಯಾಪಾರಿಗಳವರೆಗೂ ಕೇಳುವುದು ಮೇಜರ್‌ ಆಗಿ  ಒಂದೇ ಪದ ಹೇ ಗೊರ್ಬುಲಿಗೆ ಎಸ್ಟುಂಟ ರೇಟು? ಬೆಟ್ಟೆಗೆ ರೇಟ್ ಬಾರಿ ಕಮ್ಮಿ ಮಾಡ್ಯನ್ ಮಾರಾಯ ಈ ಸರ್ತಿ! ಆದರೆ ಈ ಗೊರಬಲು, ಬೆಟ್ಟೆ, ರಾಶಿ ಅಂದರೆ ಸಾಮಾನ್ಯರಿಗೆ ಏನು ಅಂತಾ ಸುಲಭಕ್ಕೆ ಗೊತ್ತಾಗಲ್ಲ. ಅದನ್ನೆ ಇವತ್ತು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. 

 

ಅಡಿಕೆಯಲ್ಲಿ ಎಷ್ಟು ವಿಧ ಯಾವುದಕ್ಕೆ ಹೆಚ್ಚು ಡಿಮ್ಯಾಂಡ್.?

ಹಿಂದಿನ ಕಾಲದಲ್ಲಿ ಅಡಿಕೆಯನ್ನು ಕೈ ಸುಲಿತ ( ಅಂದರೆ ಒಂದು ಮರದ ಮಣೆಗೆ ಕತ್ತಿಯನ್ನು ಹೊಡೆದುಕೊಂಡು ಅಡಿಕೆ ಸುಲಿಯುವುದು) ಮಾಡುತ್ತಿದ್ದರು ಆದರೆ ಇಂದು ಮುಂದುವರೆದ ತಂತ್ರಜ್ಞಾನದ ಸಲುವಾಗಿ ಅಡಿಕೆಯನ್ನು ಯಂತ್ರದ ಮೂಲಕ ಸುಲಿಸುತ್ತಿದ್ದಾರೆ. ಮೊದಲನೆಯದಾಗಿ ನಾವು ಕೈಯಲ್ಲಿ ಸುಲಿದ ಅಡಿಕೆಯನ್ನು ಎಷ್ಟು ವಿಧವಾಗಿ ಮಾಡ್ತಾರೆ ಅಂತ ನೋಡೋದಾದ್ರೆ ಅದನ್ನು ಮೂರು ವಿಧವಾಗಿ ಮಾಡ್ತಾರೆ.

1) ಹಸ 

2) ಬೆಟ್ಟೆ

3) ಗೊರಬಲು

ಮೊದಲನೆಯದಾಗಿದ ಬೆಟ್ಟೆ ಯಾವ ರೀತಿ ಇರುತ್ತದೆ ಅಂತ ನೋಡೋದಾದ್ರೆ ಅಡಿಕೆ ತೀರಾ ಬೆಳೆಯದೆ ಮತ್ತು ತೀರಾ ಹಸಿಯಾಗಿಯೂ ಇರದೆ ಮಧ್ಯಮ ಗಾತ್ರದಲ್ಲಿ ಬೆಳೆದಿರುತ್ತದೆ. 

ಹಾಗೆಯೇ ಹಸ ಹೇಗಿರುತ್ತದೆ ಎಂದು ನೋಡುವುದಾದರೆ. ಅಡಿಕೆ ತೀರ ಹಸಿಯಾಗಿರುತ್ತದೆ. ಇದಕ್ಕೆ ರೇಟ್ ಸ್ವಲ್ಪ ಜಾಸ್ತಿಯಾದರೂ ತೂಕ ಬಹಳ ಕಡಿಮೆ ಬರುತ್ತದೆ. 

ಮೂರನೆಯದಾಗಿ ಗೊರಬುಲು ನೋಡುವುದಾದರೆ. ಇದು ಈ ಮೇಲಿನ ಎರಡಕ್ಕೆ ಹೋಲಿಸಿದರೆ ರೇಟ್ ಬಹಳ ಕಡಿಮೆ. ಸಾಮಾನ್ಯವಾಗಿ ರೈತರು ಬೆಟ್ಟೆ ಯನ್ನು ನೋಡಿ ತೆಗೆಯುತ್ತಾರೆ ಏಕೆಂದರೆ ಅದರಲ್ಲಿ ತೂಕ ಜಾಸ್ತಿ ಬರುವುದು ಎಂಬ ಉದ್ದೇಶದಿಂದ ಹಾಗೂ ಇದು ಹೆಚ್ಚು ಲಾಭ ದಾಯಕವಾಗಿರುತ್ತದೆ.

ಇನ್ನೂ ಅಡಿಕೆ ಮಿಶಿನ್ ಇಂದ ಸುಲಿದ ಅಡಿಕೆಯ ವಿಧಗಳನ್ನು ನೋಡುವುದಾದರೆ ಇದರಲ್ಲಿ 2 ವಿಧ ಇದೆ

1) ರಾಶಿ

2) ಗೊರಬಲು

ಮೊದಲನೆಯದಾಗಿ ರಾಶಿ ಅಡಿಕೆ ನೋಡುವುದಾದರೆ ಈ ಅಡಿಕೆಯನ್ನು ಕಟ್ ಮಾಡುವುದಿಲ್ಲ ಅದನ್ನು ಯಂತ್ರದ ಮೂಲಕ ಸುಲಿಸಿ ಸಂಸ್ಕರಣೆ ಮಾಡಿ ಒಣಗಿಸುತ್ತಾರೆ .ಇದು ಹೆಚ್ಚು ತೂಕ ಬರುತ್ತದೆ ಹಾಗೂ ಇದಕ್ಕೆ ಗೊರಬಲಿಗಿಂತ ಬೆಲೆ ಜಾಸ್ತಿ. 

ಎರಡನೆಯದಾಗಿ ಗೊರಬಲು ನೋಡುವುದಾದರೆ.ಇದು ರಾಶಿಗಿಂತ ರೇಟ್ ಕಡಿಮೆ ಇದ್ದು ತೂಕ ಸಹ ಕಡಿಮೆ ಇರುತ್ತದೆ. ಜನರು ರಾಶಿಗೆ ಜಾಸ್ತಿ ಮಹತ್ವವನ್ನು ನೀಡುತ್ತಾರೆ. ಇದಷ್ಟೆ ಅಲ್ಲದೆ ಇನ್ನಷ್ಟು ವಿಧಗಳಿವೆ. ಅವುಗಳು ಆಯಾ ಪರಿಸರಕ್ಕೆ ತಕ್ಕಂತೆ ತೀರ್ಮಾನವಾಗಿರುವಂತಹ ವಿಧಗಳು

ಅಡಿಕೆ ಧೂಳ್ ಹಾಗೂ ಪುಡಿಗೂ ಇದೆ ಡಿಮ್ಯಾಂಡ್.

ಅಡಿಕೆಯ ಯಾವ ವಸ್ತುವೂ ಸಹ. ವ್ಯರ್ಥವಾಗುವುದಿಲ್ಲ. ಅಡಿಕೆಯ ಪುಡಿ ಹಾಗೂ ಧೂಳಿನಿಂದ ಹಿಡಿದು ಸಿಪ್ಪೆಯವರೆಗೂ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅಡಿಕೆ ಸಿಪ್ಪೆಯನ್ನು ಕೆಲವರು ಗದ್ದೆಗೆ ಗೊಬ್ಬರ ಆಗಲೆಂದು ಹಾಕಿದರೆ ಇನ್ನೂ ಕೆಲವರು ಅದನ್ನು ಒಲೆಯಲ್ಲಿ ಬೆಂಕಿ ಉರಿಸಲು ಸಹ ಉಪಯೋಗಿಸುತ್ತಾರೆ. 

ಇನ್ನೂ ಅಡಿಕೆ ಪುಡಿ ಅಂದರೆ ಮಿಷನ್ ಅಲ್ಲಿ ಸುಲಿದಾಗ ಮಿಷನ್ ನ ಬ್ಲೇಡ್ ತಗುಲಿ ಪುಡಿಯಾದ ಅಡಿಕೆ ಪುಡಿಗು ಸಹ ಬೇಡಿಕೆ ಇದೆ. ಹಾಗೆ ಆ ಪುಡಿಯಾದ ಅಡಿಕೆ ಅಡಿಕೆ ಸಿಪ್ಪೆಯಲ್ಲಿ ಸೇರಿಕೊಂಡಿರುತ್ತದೆ ಅದನ್ನು ಸಂಸ್ಕರಣೆ ಮಾಡಿ ಬಿಸಿಲಿನಲ್ಲಿ ಒಣಗಿಸಿ ಮಾರಾಟ ಮಾಡಲಾಗುತ್ತದೆ.

ಅದಕ್ಕೆ ಉತ್ತಮ ರೇಟ್ ಇದೆ. ಹಾಗೆಯೇ ಅಡಿಕೆಯ ಧೂಳು ಅಂದ್ರೆ ಅಡಿಕೆ ಒಣಗಿಸಿದ ನಂತರ ಅಡಿಕೆಯಲ್ಲಿ ಕೆಂಪು ಬಣ್ಣದ ಧೂಳು ಉಳಿಯುತ್ತದೆ. ಅದಕ್ಕೂ ಸಹ ಉತ್ತಮ ರೇಟನ್ನು ನೀಡಿ ಖರೀದಿಸುವವರು ಇದ್ದಾರೆ.

ಒಟ್ಟಾರೆ ಅಡಕೆ ಮಲೆನಾಡಿನ ಆದಾಯದ ದಾರಿಯಾಗಿದೆ. ರೇಟು ಇರುವವರೆಗೂ ತೋಟ ಕಟ್ಟಿ ಆಕಾಶ ನೋಡುವುದಕ್ಕೆ ತೊಂದರೆ ಇಲ್ಲ.