ಸತ್ತ ಎಂದುಕೊಂಡರೆ, ಡಾಬಾ ಎನ್ನುತ್ತಲೇ ಉಸಿರಾಡಿದ! ಏನಿದು ಬಂಕಾಪುರದ ಕಥೆ

man thought to be dead started breathing again, Hubli, Haveri, Shiggaon, Bankapur

ಸತ್ತ ಎಂದುಕೊಂಡರೆ, ಡಾಬಾ ಎನ್ನುತ್ತಲೇ ಉಸಿರಾಡಿದ! ಏನಿದು ಬಂಕಾಪುರದ ಕಥೆ
man thought to be dead started breathing again, Hubli, Haveri, Shiggaon, Bankapur

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 11, 2025 ‌‌ 

ಹಾವೇರಿ ತಾಲ್ಲೂಕು ಬಂಕಾಪುರದಲ್ಲಿ ಮೃತಪಟ್ಟಿದ್ದಾನೆ ಎಂಬ ವ್ಯಕ್ತಿಯು ಇದ್ದಕ್ಕಿದ್ದಂತೆ ಎದ್ದು ಉಸಿರಾಡಿದ ಘಟನೆಯೊಂದು ನಡೆದಿದೆ. 

ಬಂಕಾಪುರದಲ್ಲಿ ಬದುಕಿ ಬಂದ ವ್ಯಕ್ತಿ

ಹಾವೇರಿ ತಾಲ್ಲೂಕು ಶಿಗ್ಗಾಂವಿಯಲ್ಲಿ ಬಂಕಾಪುರದ ಮೂಲದ ಅಶೋಕ್‌ ಎಂಬವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಅಡ್ಮಿಟ್‌ ಮಾಡಲಾಗಿತ್ತು. ಈ ನಡುವೆ ಅವರ ಉಸಿರಾಟ ನಿಂತಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿದ್ದ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.   

ಡಾಬಾ ಬರುತ್ತಲೇ ?

ರಾಜ್ಯದ ಪ್ರಮುಖವಾಹಿನಿಯ ವರದಿಯ ಪ್ರಕಾರ, ಆಸ್ಪತ್ರೆಯಿಂದ ಬಂಕಾಪುರಕ್ಕೆ ವಾಪಸ್‌ ಬರುತ್ತಿರುವಾಗ, ಕುಟುಂಬಸ್ಥರು ವಾಹನದಲ್ಲಿಯೇ ಅಳುತ್ತಿದ್ದರು. ಈ ನಡುವೆ ಯಾರೋ ಒಬ್ಬರು ಡಾಬಾ ಬಂತು ಊಟ ಮಾಡುತ್ತೀಯಾ ಎಂದು ಹೇಳಿಕೊಂಡು ಅತ್ತಿದ್ದಾರೆ. ಆ ವೇಳೆಯಲ್ಲಿ ಅಶೋಕ್‌ರವರ ದೇಹ ಅಲುಗಾಡಿದಂತಾಗಿದೆ. ತಕ್ಷಣವೇ ಕುಟುಂಬಸ್ಥರು ಗಾಬರಿಗೊಂಡು ವಾಪಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಪರೀಶಿಲಿಸಿ ಅಶೋಕ್‌ ಬದುಕಿರುವುದಾಗಿ ಹೇಳಿದ್ದಾರೆ. ಸದ್ಯ ಹುಬ್ಬಳ್ಳಿಯ ಆಸ್ಪತ್ರೆಯೊಂದರಲ್ಲಿ ಅಶೋಕ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

SUMMARY  | man who was thought to be dead started breathing again. Hubli, Haveri, Shiggaon, Bankapur

KEY WORDS | man thought to be dead started breathing again, Hubli, Haveri, Shiggaon, Bankapur