ಡೈರಿಗೆ ಹಾಲು ಹಾಕಿ ಮನೆಗೆ ಬರುವಾಗ ಬೈಕ್ ಸವಾರನಿಗೆ ಆಘಾತ | ಸಾವು
man died after falling into a ditch , Harohittalu, Arasalu Panchayat ,Hosanagar taluk of Shivamogga district
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅರಸಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾರೋಹಿತ್ತಲು ಬಳಿಯಲ್ಲಿ ವ್ಯಕ್ತಿಯೊಬ್ಬರು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್ ಆಗುತ್ತಿದ್ದ ಅವರು ಬೈಕ್ ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ.
ಘಟನೆ ಏನು?
ಇಲ್ಲಿನ ಕಡೆಗದ್ದೆ ಸಮೀಪದ ಗೇರುಗಲ್ಲು ಗ್ರಾಮದ ನಿವಾಸಿ 55 ವರ್ಷದ ದೇವೇಂದ್ರಪ್ಪ ನಿನ್ನೆ ಸಂಜೆ ಡೈರಿಗೆ ಹಾಲು ಹಾಕಲು ತೆರಳಿದ್ದರು. ಆ ಬಳಿಕ ಮನೆಗೆ ವಾಪಸ್ ಬರುವಾಗ, ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬರುತ್ತಿದ್ದ ಅವರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಲ್ಲಿ ನೀರು ತುಂಬಿತ್ತು. ಪರಿಣಾಮ ಅಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
SUMMARY | A man died after falling into a ditch near Harohittalu, Arasalu Panchayat in Hosanagar taluk of Shivamogga district.
KEY WORDS | man died after falling into a ditch , Harohittalu, Arasalu Panchayat ,Hosanagar taluk of Shivamogga district