ಪೆಟ್ರೋಲ್‌ ಸುರಿದುಕೊಂಡು ಮೂವತ್ತರ ಹರೆಯ ಸಾವು | ನಡೆದಿದ್ದೇನು?

in bidaragodu , agumbe ,thirthahalli taluk, man commits suicide set fire himself pouring petrol  

ಪೆಟ್ರೋಲ್‌ ಸುರಿದುಕೊಂಡು ಮೂವತ್ತರ ಹರೆಯ ಸಾವು | ನಡೆದಿದ್ದೇನು?
in bidaragodu , agumbe ,thirthahalli taluk, man commits suicide set fire himself pouring petrol  

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 31, 2025 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪದ ಬಿದರುಗೋಡು ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಸಾಲಬಾಧೆ ಹಿನ್ನೆಲೆಯಲ್ಲಿ ಅವರು ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವಿವರ ಹೀಗಿದೆ

ಆಗುಂಬೆ, ಬಿದರುಗೋಡು

ಇಲ್ಲಿನ ಹೊಳೆಗೆದ್ದೆ ಪ್ರಶಾಂತ್‌ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ 32 ವರುಷ ವಯಸ್ಸಾಗಿತ್ತು. ಘಟನೆ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದ್ದು, ಪ್ರಾಥಮಿಕ ಹಂತದಲ್ಲಿ ಪ್ರಶಾಂತ್‌ ಸಾಲ ಮಾಡಿಕೊಂಡಿದ್ದರು. ಅದನ್ನು ಅವರಿಗೆ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲಗಾರರು ಕೊಟ್ಟ ಹಣವನ್ನು ವಾಪಸ್‌ ನೀಡುವಂತೆ ಕೇಳುತ್ತಿದ್ದರು. ಇದರಿಂದ ಸಂಕಷ್ಟಕ್ಕೆ ಒಳಗಾದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. 

ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ. ಇತ್ತೀಚೆಗೆ ಮೈಕ್ರೋ ಫೈನಾನ್ಸ್‌ ವಿಚಾರದಲ್ಲಿ ಸಾಕಷ್ಟು ಸಾವು ನೋವಿನ ಪ್ರಕರಣಗಳು ವರದಿಯಾಗುತ್ತಿದೆ. ಇದರ ನಡುವೆ ಮೈಕ್ರೋ ಫೈನಾನ್ಸ್‌ ಕಿರುಕುಳದ ವಿರುದ್ಧ ಸರ್ಕಾರವೂ ಸಹ ದಿಟ್ಟ ಹೆಜ್ಜೆ ಇಡುತ್ತಿದ್ದು, ಜನರ ಹಿತದೃಷ್ಟಿಯಲ್ಲಿ ಸೂಕ್ತ ಕಾನೂನು ರೂಪಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಚರ್ಚೆ ನಡೆಸಿದೆ.

SUMMARY  | in bidaragodu near agumbe thirthahalli taluk man commits suicide set fire himself pouring petrol  



KEY WORDS |in bidaragodu , agumbe ,thirthahalli taluk, man commits suicide set fire himself pouring petrol