ಶಿವಮೊಗ್ಗಕ್ಕೆ ಹೊರಟಿದ್ದ ಚಿಕ್ಕಮಗಳೂರು ಯುವಕ ಗೋವಾ ಏರ್‌ಫೋರ್ಟ್‌ನಲ್ಲಿ ಅರೆಸ್ಟ್ ! ಏನಾಯ್ತು ಗೊತ್ತಾ
man native of Chikkamagaluru, Karnataka, arrested from Manohar International Airport , Shivamogga airport, security guards , found a Garmin GPS device ,in his luggage
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 5, 2025
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಗೋವಾ ಏರ್ ಪೋರ್ಟ್‌ನಿಂದ ಹೊರಡುವಾಗ Garmin GPS device ತನ್ನ ಲಗೇಜ್‌ನಲ್ಲಿ ಇಟ್ಟುಕೊಂಡಿದ್ದ ಕಾರಣ ಆತನನ್ನು ಮೋಪಾ ಏರ್‌ಪೋರ್ಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈತನನ್ನ ಚಿಕ್ಕಮಗಳೂರು ಮೂಲದ 25 ವರ್ಷುದ ನಿವಾಸಿ ಎಂದು ಗುರುತಿಸಲಾಗಿದೆ.
Garmin GPS device, ಒಂದು ರೀತಿಯ ಜಿಪಿಎಸ್ ಟ್ರ್ಯಾಕರ್ ಆಗಿದ್ದು, ಇದನ್ನು ಕೆಲವು ಆಟಗಳಲ್ಲಿ ಬಳಸಲಾಗುತ್ತದೆ. ಇದರ ಸಾಗಾಟ ಪೂರ್ಣ ಪ್ರಮಾಣದಲ್ಲಿ ಬ್ಯಾನ್ ಆಗಿಲ್ಲವಾದರೂ, ಅಧಿಕೃತ ಲೈಸೆನ್ಸ್ ಇಲ್ಲದೆ ಈ ಸಾಧನವನ್ನು ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರು ಮೂಲದ ಯುವಕನನ್ನ ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಲಾಗಿದೆ.
ತಾನು ಇಟ್ಟುಕೊಂಡಿದ್ದ ಸಾಧನಕ್ಕೆ ಸಂಬಂಧಿಸಿದಂತೆ ಆತ ಅಧಿಕಾರಿಯಿಂದ ಪಡೆದಿರುವ ಯಾವುದೇ ಪರವಾನಗಿಯನ್ನ ತೋರಿಸಿಲ್ಲ. ಈ ಕಾರಣಕ್ಕೆ BNS ನ ಸೆಕ್ಷನ್ 35(3) ರ ಅಡಿಯಲ್ಲಿ ಕೇಸ್ ಸಹ ದಾಖಲಿಸಲಾಗಿದೆ.
SUMMARY | man native of Chikkamagaluru, Karnataka, arrest from Manohar International Airport to Shivamogga, security guards found a Garmin GPS device in his luggage.
KEY WORDS | man native of Chikkamagaluru, Karnataka, arrested from Manohar International Airport , Shivamogga airport, security guards , found a Garmin GPS device ,in his luggage.