SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಲಯನ್ಸ್‌ಗೆ (Shimoga Lions ) ಆರಂಭಿಕ ಆಘಾತ ಎದುರಾಗಿದೆ. ಮೊದಲ ಮ್ಯಾಚ್‌ನಲ್ಲಿ ಶಿವಮೊಗ್ಗ ಲಯನ್ಸ್ ಏಳು ರನ್‌ಗಳಿಂದ ಸೋತಿದೆ.
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್‌ನಲ್ಲಿ ಮೈಸೂರು ವಾರಿಯರ್ಸ್ (Mysuru Warriors)ವಿರುದ್ಧ ಶಿವಮೊಗ್ಗ ಲಯನ್ಸ್ 7 ರನ್‌ಗಳಿಂದ ಸೋತಿದೆ. ಪಂದ್ಯದ ವೇಳೇ ಮಳೆಯ ಅಬ್ಬರದಿಂದ ಶಿವಮೊಗ್ಗ ಲಯನ್ಸ್‌ಗೆ ಒಂಬತ್ತು ಓವರ್‌ಗಳಿಗೆ 88 ರನ್ ಗಳಿಸುವ ಟಾರ್ಗೆಟ್ ನೀಡಲಾಗಿತ್ತು. ಆದರೆ ಶಿವಮೊಗ್ಗ ಲಯನ್ಸ್ 9 ಓವರ್‌ಗಳಲ್ಲಿ ಕೇವಲ 80 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಅಂತಿಮವಾಗಿ ಐದು ವಿಕೆಟ್ ಕಳೆದುಕೊಂಡು ಶಿವಮೊಗ್ಗ ಲಯನ್ಸ್ ಸೋಲನ್ನ ಸ್ವೀಕರಿಸಿತು
ಟಾಸ್ ಸೋತು ಮೈಸೂರು ವಾರಿಯರ್ಸ್ ಮೊದಲು ಬ್ಯಾಟ್ ಮಾಡಿತ್ತು. 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 159 ರನ್ ದಾಖಲಿಸಿತ್ತು. ಆ ಬಳಿಕ ಪಂದ್ಯ 9 ಓವರ್ ಗಳಿಗೆ ಇಳಿಸಲಾಗಿತ್ತು. ಶಿವಮೊಗ್ಗ ಲಯನ್ಸ್ 9 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 80 ರನ್ ಗಳಿಸಿ 7 ರನ್ ಗಳ ಅಂತರದಿಂದ ಸೋತಿದೆ.

ಅಂಕಪಟ್ಟಿಯ ವಿವರಕ್ಕೆ ಇಲ್ಲಿ ನೋಡಿ | ಕ್ಲಿಕ್ ಮಾಡಿ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ