ಹುಲ್ಲು ತುಂಬಿದ್ದ ಲಾರಿಗೆ ಕರೆಂಟ್ ಶಾಕ್ | ತಕ್ಷಣವE ಹೊತ್ತಿಕೊಳ್ತು ಬೆಂಕಿ
lorry carrying catching fire

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕುನಲ್ಲಿ ಹುಲ್ಲು ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಬೆಂಕಿ ತಗುಲಿದ ಘಟನೆಯೊಂದು ನಿನ್ನೆ ಅಂದರೆ ಶನಿವಾರ ವರದಿಯಾಗಿದೆ. ಇಲ್ಲಿನ ಚಂದ್ರಗುತ್ತಿಯಲ್ಲಿ ಶನಿವಾರ ಚಲಿಸುತ್ತಿದ್ದ ಹುಲ್ಲು ಹೇರಿದ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿದ್ದು ಹುಲ್ಲು ಭಾಗಶಃ ಸುಟ್ಟು ನಾಶವಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಜೋಗ ವೀಕ್ಷಣೆಯಲ್ಲಿ ತಾರತಮ್ಯ
ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಜ.1ರಿಂದ ಮಾಚ್ 15ರವರೆಗೆ ಜೋಗ ಜಲಪಾತದ ಒಳ ಆವರಣ ಪ್ರವೇಶಿಸಲು ಪ್ರವಾಸಿಗರಿಗೆ ನಿಷೇಧ ಹೇರಿದ್ದರೂ ಇಲ್ಲಿನ ಖಾಸಗಿ ಹೋಟೆಲ್ ಆಡಳಿತ ಮಂಡಳಿ ಪ್ರವಾಸಿಗರ ಬುಕ್ಕಿಂಗ್ ಸ್ವೀಕರಿಸುತ್ತಿದೆ ಮತ್ತು ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಹೋಟೆಲ್ ನಲ್ಲಿ ಊಟ ತಿಂಡಿ ವ್ಯವಸ್ಥೆಯ ಜತೆಗೆ ಜಲಪಾತ ನೋಡಲು ಅನುವು ಮಾಡಿಕೊಡುತ್ತಿದೆ. ಇಂತಹ ತಾರತಮ್ಯ ನೀತಿಯ ವಿರುದ್ದ ಸ್ಥಳೀಯರು, ಪ.ಪಂ.ಮಾಜಿ ಅಧ್ಯಕ್ಷ ಎಸ್. ಎಲ್.ರಾಜ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡುವುದಾದರೆ ಎಲ್ಲ ಪ್ರವಾಸಿಗರನ್ನು ಒಳಗೆ ಬಿಡಲಿ. ಇಲ್ಲದಿದ್ದರೆ ಯಾರನ್ನು ಒಳಗೆ ಬಿಡಬಾರದು ಎಂದು ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
SUMMARY | lorry carrying hay catching fire in Sorab taluk of Shivamogga district
KEY WORDS | lorry carrying catching fire, Sorab taluk of Shivamogga district, jogfalls story