ಭದ್ರಾವತಿ ಸೇತುವೆ ಬಳಿ ಚಿರತೆ ಶವ ಪತ್ತೆ | ಅಸಲಿಗೆ ನಡೆದಿದ್ದೇನು?

leopard Body found under bridge , Bhadravati Barandur

ಭದ್ರಾವತಿ ಸೇತುವೆ ಬಳಿ ಚಿರತೆ ಶವ ಪತ್ತೆ | ಅಸಲಿಗೆ ನಡೆದಿದ್ದೇನು?
leopard Body found under bridge , Bhadravati Barandur

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಸೇತುವೆ ಪಕ್ಕದಲ್ಲಿ ಚಿರತೆಯ ಶವ ಪತ್ತೆಯಾಗಿದೆ. ಇದು ಅರಣ್ಯ ಇಲಾಖೆಯಲ್ಲಿ ಆತಂಕ ಮೂಡಲು ಕಾರಣವಾಗಿದೆ. 

ಭದ್ರಾವತಿ ತಾಲ್ಲೂಕು ಬಾರಂದೂರು ಬಳಿ ಸಿಗುವ ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗಡೆಯಲ್ಲಿ ಚಿರತೆಯೊಂದರ ಶವ ಪತ್ತೆಯಾಗಿದೆ. ಸ್ಥಳೀಯರು ಇದನ್ನು ಗಮನಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಧಿಕಾರಿಗಳು, ಮೃತದೇಹವನ್ನು ಸ್ಥಳದಿಂದ ಶಿಫ್ಟ್‌ ಮಾಡಿದ್ದಾರಷ್ಟೆ ಅಲ್ಲದೆ ಸ್ಥಳ ಮಹಜರ್‌ ನಡೆಸಿದ್ದಾರೆ.

ಇನ್ನೂ ಚಿರತೆ ಶವ ಸಿಕ್ಕಿರುವ ವಿಚಾರ ಹರಿದಾಡುತ್ತಲೇ ಸೇತುವೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಎಲ್ಲದರ ನಡುವೆ ಚಿರತೆ (Leopard) ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಸ್ಥಳೀಯರು ಹೇಳುವಂತೆ ಯಾರೋ ಬೇರಡೆಯಲ್ಲಿ ಕೊಂದು ಅದರ ಕಳೆಬರವನ್ನು ಸೇತುವೆ ಬಳಿ ತಂದು ಹಾಕಿದ್ದಾರೆ ಎಂಬ ಸಂಶಯವಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮೇಲಾಗಿ ಸ್ಥಳೀಯ ಮಾಧ್ಯಮಕ್ಕೆ ಚಿರತೆ ಕಳೆಬರಹ ಪತ್ತೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭದ್ರಾವತಿ ಡಿಸಿಎಫ್‌ ಆಶೀಶ್‌ ರೆಡ್ಡಿ, ಬೇರೆಡೆಯಲ್ಲಿ ಚಿರತೆಯನ್ನು ಕೊಂದು ಅದನ್ನು ಇಲ್ಲಿಗೆ ತಂದು ಹಾಕಿರುವ ಅನುಮಾನವಿದೆ ಎಂದಿದ್ದಾರೆ. 

SUMMARY |  Body of leopard found under bridge near Bhadravati Barandur

KEY WORDS | leopard Body found under bridge , Bhadravati Barandur