ತಾಯಿಯನ್ನು ಕೊಂದ ಆರೋಪ ಹೊತ್ತು ಜೈಲಿಗೆ ಹೋಗಬೇಕಿದ್ದ ಮಗನನ್ನು ಪೊಲೀಸ್ ತನಿಖೆ ಉಳಿಸಿದ್ದು ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ.

prathapa thirthahalli
Prathapa thirthahalli - content producer

kumsi Police ಶಿವಮೊಗ್ಗ:  ಜಿಲ್ಲೆಯಲ್ಲಿ ವೃದ್ಧರ ಕೊಲೆ ಪ್ರಕರಣಗಳಲ್ಲಿ ಕೆಲವೊಂದು ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ. ಮಲೆನಾಡಿನ ಒಂಟಿ ಮನೆಗಳಲ್ಲಿ ನಡೆಯುವ ಕೊಲೆ ಘಟನೆಗಳಿಗೆ ಸಾಕ್ಷಿ ಪುರಾವೆಗಳೇ ಇರೋದಿಲ್ಲ. ತುಮರಿ ಜೋಡಿ ವೃದ್ಧ ದಂಪತಿ ಕೊಲೆ, ಸೊರಬದ ಜೋಡಿ ಕೊಲೆ ಘಟನೆಗಳಲ್ಲಿ ಆರೋಪಿಗಳು ಯಾರು ಎಂಬುದು ಈವರೆಗೂ ಪತ್ತೆಯಾಗಿಲ್ಲ. ಆದರೆ ಕುಂಸಿ ಯಲ್ಲಿ ನಡೆದ ವೃದ್ಧೆಯ ಕೊಲೆಯನ್ನು ಸಾಕ್ಷಿ ಸಮೇತ ಹಿಡಿದ ಕೀರ್ತಿ ಕುಂಸಿ ಪೊಲೀಸ್ ಠಾಣಾಧಿಕಾರಿ ದೀಪಕ್ ಹಾಗು ಸಿಬ್ಬಂದಿಗಳ ವರ್ಗಕ್ಕೆ ಸಲ್ಲುತ್ತದೆ. ಈ ಘಟನೆಯಲ್ಲಿ ತಾಯಿಯನ್ನು ಮಗನೇ ಕೊಂದಿದ್ದಾನೆ ಎಂದು ಬಲವಾಗಿ ನಂಬಲಾಗಿತ್ತು. ಅದಕ್ಕೆ ಪೂರಕವೆಂಬಂತೆ ಸಂಬಂದಿಯೊಬ್ಬರು ಮಗನ ಮೇಲೆಯೇ ದೂರು ದಾಖಲಿಸಿದ್ದರು. ತಾಂತ್ರಿಕ ವ್ಯವಸ್ಥೆಯ ತನಿಖೆಯು ತನ್ನ ದಿಕ್ಕನ್ನು ಬದಲಿಸಿದ್ದು ಈ ಪ್ರಕರಣದಲ್ಲಿ ಅಚ್ಚರಿ ಮೂಡಿಸುತ್ತದೆ. ತಾಯಿಯನ್ನು ಮಗನೇ ಕೊಂದಿದ್ದಾನೆ ಎಂದು ಬಲವಾಗಿ ನಂಬಿದ್ದ ಪೊಲೀಸರಿಗೆ ತಾಂತ್ರಿಕ ಸುಳಿವುಗಳು, ಕೊಲೆ ಆರೋಪಿ ಮಗ ಅಲ್ಲ ಎಂದು ಸಾಕ್ಷಿಕರಿಸಿ ಹೇಳುತ್ತಿದ್ದವು.

kumsi Police solved the brutal murder case
kumsi Police solved the brutal murder case

ಹೌದು ಶಿವಮೊಗ್ಗ ತಾಲೂಕು ಕುಂಸಿಯ ರಥಬೀದಿಯಲ್ಲಿ ಅಕ್ಟೋಬರ್ 2 ರ  ಸಂಜೆ  65 ವರ್ಷದ ವೃದ್ಧೆ ಬಸಮ್ಮರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಸಮ್ಮರ ಕತ್ತು ಸೀಳಿ ಹದಿನೈದು ಕಡೆಗಳಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಸಮ್ಮ ಒಬ್ಬಂಟಿಯೊಗಿ ಆ ಮನೆಯಲ್ಲಿ ಬದುಕಿದ್ದೇ ಆಕೆಯ ಜೀವಕ್ಕೆ ಮುಳುವಾಯಿತು. ಬಸಮ್ಮ ಭೀಕರವಾಗಿ ಕೊಲೆಯಾಗಿದ್ದರೂ, ಘಟನಾ ಸ್ಥಳದಲ್ಲಿ ರಕ್ತದ ಕುರುಹುಗಳೇ ಇರಲಿಲ್ಲ. ಮನೆಯ ಮುಂಬದಿ ಹಾಗು ಹಿಂಬದಿ ಬಾಗಿಲಿಗೆ ಚಿಲಕ ಹಾಕಲಾಗಿತ್ತು. ಹಂಚನ್ನು ತೆಗೆದು ಕೊಲೆ ಆರೋಪಿಗಳು ತಪ್ಪಿಸಿಕೊಂಡಿದ್ದರು. ಕೊಲೆಯಾದ ಸ್ಥಳದಲ್ಲಿ ರಕ್ತವನ್ನು ಚೆನ್ನಾಗಿ ವರೆಸಲಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಎಸ್ಪಿ ಮಿಥುನ್ ಕುಮಾರ್ ಪ್ರಕರಣವನ್ನು ಸಕಾಲದಲ್ಲಿ ಭೇದಿಸುವಂತೆ ಕುಂಸಿ ಪೊಲೀಸರಿಗೆ ನಿರ್ದೇಶನ ನೀಡಿದರು. ಕುಂಸಿ ಠಾಣೆ ಇನ್ ಸ್ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿಗಳ ತಂಡ ಕೊಲೆ ಆರೋಪಿಗಳಿಗಾಗಿ ತೀವೃ ಶೋಧಕ್ಕೆ ಅಣಿಯಾಯ್ತು. 

kumsi Police ತಾಯಿ ಕೊಂದ ಆರೋಪದಲ್ಲಿ ಮಗನ ವಿರುದ್ಧ ದೂರು

SUNCONTROL_FINAL-scaled

ವಿಪರ್ಯಾಸವೆಂದರೆ ಬಸಮ್ಮ ಕೊಲೆಯಾದ ಕೆಲವೇ ಹೊತ್ತಿನಲ್ಲಿ ಮಗ ರಮೇಶ ಮನೆಗೆ ಬಂದಿದ್ದು, ಈತನೆ ಕೊಲೆ ಮಾಡಿ ನಾಟಕವಾಡುತ್ತಿದ್ದಾನೆ ಎಂದು ಗ್ರಾಮಸ್ಥರು ನಂಬಿದ್ದರು. ಪೊಲೀಸರಿಗೂ ಅದೇ ಅನುಮಾನ ಕಾಡುತ್ತಿತ್ತು. ಇದಕ್ಕೆ ಪೂರಕವೆಂಬಂತೆ ಬಸಮ್ಮ ಅಳಿಯ ಈಶ್ವರಪ್ಪ ಕೂಡ ಕುಂಸಿ ಠಾಣೆಗೆ ದೂರು ನೀಡಿದ್ದರು. ಬಸಮ್ಮರ ಮಗ ರಮೇಶನೇ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು. ಈ ಹಿಂದೆ ಬಸಮ್ಮರ ಆಸ್ತಿ ವಿಚಾರದಲ್ಲಿ ತಾಯಿಗೂ ಮಗನಿಗೂ ಗಲಾಟೆಯಾಗಿರುವುದಾಗಿ ಅವರು ಹೇಳಿಕೆ ನೀಡಿದ್ದರು. ಇನ್ ಸ್ಪೆಕ್ಟರ್ ದೀಪಕ್ ರಮೇಶ್ ನನ್ನು ಹಲವು ಆಯಾಮಗಳಲ್ಲಿ ವಿಚಾರಣೆಗೆ ಒಳಪಡಿಸಿದರು. ಆರಂಭದಲ್ಲಿ ರಮೇಶನೇ ಕೊಲೆ ಮಾಡಿರುವುದಾಗಿ ಪೊಲೀಸರು ನಂಬುವಂತ ವಾತಾವರಣ ನಿರ್ಮಾಣವಾಗಿತ್ತು. 

ಶಾಲಾ ಬಸ್​ ಡಿಕ್ಕಿ, ಬೈಕ್​ ಸವಾರ ಸಾವು 

SUNCONTROL_FINAL-scaled

kumsi Police ಪೊಲೀಸರಿಗೆ ಆರಂಭದಲ್ಲಿ ಕಾಡಿದ ಅನುಮಾನಗಳು

ಬಸಮ್ಮರನ್ನು ಬೇರೆಡೆ ಕೊಲೆ ಮಾಡಿ ಮನೆಯೊಳಗೆ ತಂದಿದ್ದಾರೆಯೋ ಅಥವಾ ಮನೆಯಲ್ಲಿಯೇ ಕೊಲೆ ಮಾಡಿದ್ದಾರೋ ಎಂಬ ಅನುಮಾನ ಕಾಡುತ್ತದೆ. ಯಾಕೆಂದರೆ ಬಸಮ್ಮ ಕೊಲೆಯಾದ ಸ್ಥಳದಲ್ಲಿ ರಕ್ತದ ಕಲೆಗಳಾಗಲಿ ಅಥವಾ ರಕ್ತದ ವಾಸನೆಯಾಗಲಿ ಇರುವುದಿಲ್ಲ. ಆದರೆ ಅಲ್ಲಿ ರಕ್ತ ಇತ್ತೋ ಅಥವಾ ಇಲ್ಲವೋ ಎಂಬುದನ್ನು ವೈಜ್ಞಾನಿಕ ಪರೀಕ್ಷೆಗಳು ಸಾಭೀತು ಪಡಿಸುವುದರಿಂದ ಪೊಲೀಸರು ತಂತ್ರಜ್ಞಾನ ವ್ಯವಸ್ಥೆಗೆ ಮೊರೆ ಹೋಗುತ್ತಾರೆ. ಆ ಪರೀಕ್ಷೆಯಲ್ಲಿ ಬಸಮ್ಮ ಕೊಲೆಯಾದ ಘಟನಾ ಸ್ಥಳದಲ್ಲಿ ರಕ್ತವಿತ್ತು ಎಂಬುದು ವರದಿಯಲ್ಲಿ ಸಾಭೀತಾದ ಬೆನ್ನಲ್ಲೆ ಪೊಲೀಸರು ಮತ್ತಷ್ಟು ತನಿಖೆಗೆ ವೇಗ ನೀಡುತ್ತಾರೆ.

kumsi Police ಕಾಳಿ ಪೂಜೆಗೆ ಏನಾದ್ರೂ ರಕ್ತದ ಸಂಗ್ರಹಿಸಲಾಗಿತ್ತಾ?

ಹೀಗೊಂದು ಆಯಾಮದಲ್ಲೂ ಪೊಲೀಸರು ಯೋಚಿಸಿದ್ದೇ ತನಿಖೆ ಮತ್ತಷ್ಟು ಚುರುಕಾಗುತ್ತದೆ. ಬಸಮ್ಮ ಕೊಲೆಯಾದ ಸ್ಥಳದಲ್ಲಿ ರಕ್ತದ ಕುರುಹುಗಳೇ ಇರಲಿಲ್ಲ. ಅಂದ ಮೇಲೆ ಯಾರಾದ್ರೂ ಕಾಳಿ ಬಲಿಪೂಜೆಗೆ ಏನಾದ್ರೂ ರಕ್ತವನ್ನು ಸಂಗ್ರಹಿಸಿರಬಹುದೇನೋ ಎಂಬ ಆಯಾಮದಲ್ಲೂ ತನಿಖೆ ಮಾಡಲಾಗುತ್ತದೆ. ಆದರೆ ಅಲ್ಲಿ ಕೂಡ ಪೊಲೀಸರಿಗೆ ಅನುಮಾನ ಮೂಡುತ್ತದೆ.

kumsi Police ಸಿಸಿ ಟಿವಿ ಕಣ್ಗಾವಲಿನಲ್ಲಿ ರಮೇಶ 

ತಾಯಿ ಬಸಮ್ಮರನ್ನು ಕೊಂದ ಆರೋಪದಲ್ಲಿ ಕುಂಸಿ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ಪೊಲೀಸರು ರಮೇಶನನ್ನು ಹೆಚ್ಚಿನ ತನಿಖೆಗೆ ಒಳಪಡಿಸುತ್ತಾರೆ. ವಿಚಾರಣೆ ಹಲವು ಆಯಾಮಗಳಲ್ಲಿ ನಡೆದರೂ ರಮೇಶ ತಾನು ತಪ್ಪು ಮಾಡಿಲ್ಲ ಎಂದೇ ಪೊಲೀಸರಿಗೆ ಹೇಳುತ್ತಾನೆ. ಪೊಲೀಸರು ಬಸಮ್ಮ ಕೊಲೆಯಾದ ಸ್ಥಳ ಮತ್ತು ಸಮಯ ಕುಂಸಿಯಿಂದ ಹಿಡಿದು ಶಿವಮೊಗ್ಗ ನಗರದವರೆಗಿನ ಎಲ್ಲಾ ಸಿಸಿ ಕ್ಯಾಮರಗಳನ್ನು ಅವಲೋಕಿಸುತ್ತಾರೆ. ಬಸಮ್ಮ ಕೊಲೆಯಾದ ದಿನ ಹಾಗು ಸಮಯದಲ್ಲಿ ಮಗ ರಮೇಶ ಕುಂಸಿಯಲ್ಲಿ ಅರ್ಧ ಗಂಟೆ ಅಷ್ಟೆ ಇರುತ್ತಾನೆ. ಆದಾದ ಮೇಲೆ ಶಿವಮೊಗ್ಗಕ್ಕೆ ಹೋಗುವ ರಮೇಶ ಮತ್ತೆ ಕುಂಸಿಯತ್ತ ಮುಖ ಮಾಡುವುದೇ ಇಲ್ಲ.  ಕೇವಲ ಅರ್ಧ ಗಂಟೆಯಷ್ಟೆ ಕುಂಸಿಯಲ್ಲಿದ್ದ ರಮೇಶ ಕೊಲೆ ಮಾಡಿದ ಅರ್ಧ ಗಂಟೆಯಲ್ಲಿ ರಕ್ತವನ್ನು ಸಂಪೂರ್ಣವಾಗಿ ತೆಗೆದು ನೆಲ ಸಾರಿಸಲು ಸಾಧ್ಯವೇ ಇಲ್ಲ. ರಕ್ತ ದೇಹದಿಂದ ಸಂಪೂರ್ಣವಾಗಿ ಹೊರಹೋಗಬೇಕೆಂದರೂ ಹತ್ತು ಹದಿನೈದು ನಿಮಿಷಗಳಾದರೂ ಬೇಕು. ತದನಂತರದಲ್ಲಿ ಚೆಲ್ಲಿದ ರಕ್ತದ ಕುರುಹಗಳೇ ಇಲ್ಲದಂತೆ ಮಾಡಲು ಕೊಲೆ ಮಾಡಿದ ವ್ಯಕ್ತಿ ವಸ್ತ್ರ ಬದಲಿಸಲು ಸಾಕಷ್ಟು ಸಮಯ ಬೇಕು. ಇಷ್ಟೆಲ್ಲಾ ಕೃತ್ಯ ಮಗ ರಮೇಶನೊಬ್ಬನೇ ಮಾಡಲು ಸಾಧ್ಯವೇ?  

ಸಿಸಿ ಕ್ಯಾಮರ ಹದ್ದಿನ ಕಣ್ಣಿನಲ್ಲಿದ್ದ ಹಾಗು ಶ್ಯಾಡೋ ಪೊಲೀಸಿಂಗ್ ವ್ಯವಸ್ಥೆಯಲ್ಲಿದ್ದ ರಮೇಶ ಘಟನೆ ನಂತರ ಎಲ್ಲೂ ವಿಚಲಿತನಾದಂತೆ ಕಾಣುವುದಿಲ್ಲ. ಬಸಮ್ಮ ಕೊಲೆ ಘಟನೆ ದಿನ ಕುಂಸಿಗೆ ಬಂದಿದ್ದ ರಮೇಶ ಯಾವ ಬಟ್ಟೆ ಧರಿಸಿದ್ದನೋ ಅದೇ ಬಟ್ಟೆಯಲ್ಲಿ ಶಿವಮೊಗ್ಗಕ್ಕೆ ವಾಪಸ್ಸಾಗಿದ್ದ. ಬರ್ಬರವಾಗಿ ಕೊಲೆ ಮಾಡಿದ ಕೊಲೆಗಾರ ಕನಿಷ್ಟ ಬಟ್ಟೆಯನ್ನಾದರೂ ಬದಲಿಸಿಕೊಂಡೇ ತಪ್ಪಿಸಿಕೊಳ್ಳುತ್ತಾನೆ. ರಮೇಶನ ಕುರಿತಂತೆ ಹಲವು ದಿಕ್ಕುಗಳಲ್ಲಿ ತನಿಖೆ ನಡೆಸಿದ ಇನ್ ಸ್ಪೆಕ್ಟರ್ ದೀಪಕ್ ಹಾಗು ತಂಡಕ್ಕೆ ಒಂದಂತು ಖಚಿತವಾಗುತ್ತದೆ. ಇಲ್ಲಿ ತಾಯಿಯನ್ನು ಮಗ ಕೊಂದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದು ಮರ್ಡರ್ ಫಾರ್ ಗೇನ್ ಎಂಬುದು ಖಾತರಿಯಾಗುತ್ತದೆ. 

kumsi Police ರಮೇಶ ಅಲ್ಲದಿದ್ದರೆ..ಕೊಂದವರು ಯಾರು?

ಇನ್ ಸ್ಪೆಕ್ಟರ್ ದೀಪಕ್ ಗೆ ಮಗ ರಮೇಶನ ಮೇಲೆ ಅನುಮಾನ ಕಾಡಿದ್ರೂ, ತಂತ್ರಜ್ಞಾನ ವ್ಯವಸ್ಥೆಯ ವರದಿಗಳು ರಮೇಶ ಕೊಲೆ ಮಾಡಿಲ್ಲ ಎಂದೇ ಸಾರಿ ಹೇಳುತ್ತವೆ. ಹಾಗಾದ್ರೆ ಬಸಮ್ಮರನ್ನು ಕೊಂದವರಾರು ಎಂಬ ಆಯಾಮದಲ್ಲಿ ಹೊಸ ರೂಪದಲ್ಲಿ ಮತ್ತೆ ತನಿಖೆ ಆರಂಭವಾಗುತ್ತದೆ. ರಮೇಶ ಹೊರುತು ಪಡಿಸಿ ತನಿಖೆ ಕೈಗೊಳ್ಳುವ ತನಿಖಾ ತಂಡಕ್ಕೆ ಕುಂಸಿ ಗ್ರಾಮದಲ್ಲಿ ಸುತ್ತಮುತ್ತ ಮನೆಯವರ ಮೇಲೆ ಬಸಮ್ಮ ಸಂಬಂಧಿಗಳ ಮೇಲೆ ಕಣ್ಣು ನೆಡಲಾಗುತ್ತದೆ. ಬಸಮ್ಮ ಪಕ್ಕದ ಮನೆಯಲ್ಲಿದ್ದವರನ್ನು ತನಿಖೆ ಮಾಡಲಾಗುತ್ತದೆ. ಅಮಾನ್ ಸಿಂಗ್ ಮೊಬೈಲ್ ಲೊಕೇಷನ್, ಕೊನೆ ಬಾರಿ ಮಾತಾಡಿದ ಟವರ್ ಲೊಕೇಷನ್ ಎಲ್ಲವನ್ನು ಪರಿಶೀಲಿಸಿದ ಪೊಲೀಸರಿಗೆ ಸಿಸಿ ಕ್ಯಾಮರದಲ್ಲಿ ಓರ್ವ ಯುವಕ ಅನುಮಾನಸ್ಪದಲಾಗಿ ಓಡಾಡುವುದು ಕಾಣುತ್ತದೆ. ಕೈಯಲ್ಲಿ ಚೀಲ ಹಿಡಿದುಕೊಂಡು ಹೋಗುತ್ತಿದ್ದ ಅವನು ಪಕ್ಕದ ಮನೆಯ ಅಮಾನ್ ಸಿಂಗ್ ಆಗಿದ್ದ. ಪೊಲೀಸರು ಆತನನ್ನು ಬಂಧಿಸದೆ,ಚಲನ ವಲನಗಳ ಮೇಲೆ ನಿಗಾ ಇಡುತ್ತಾರೆ. ವೈಜ್ಞಾನಿಕ ವರದಿ, ಅಮಾನ್ ಸಿಂಗ್ ಮತ್ತೊಬ್ಬ ವ್ಯಕ್ತಿ ಬಸಮ್ಮ ಮನೆಗೆ ಬಂದಿರುವುದನ್ನು ಖಾತರಿ ಪಡಿಸುತ್ತವೆ. ಸಂಪೂರ್ಣ ಎವಿಡೆನ್ಸ್ ಕಲೆಕ್ಟ್ ಆದ ನಂತರ ಕುಂಸಿ ಪೊಲೀಸರು ಅಮಾನ್ ಸಿಂಗ್ ಲಾಕ್ ಮಾಡುತ್ತಾರೆ.ಆತನನ್ನ ವಿಚಾರಣೆಗೊಳಪಡಿಸಿದಾಗ ಬಸಮ್ಮರನ್ನು ತಾನು ಹಾಗು ಸ್ನೇಹಿತ ವಿಕಾಸ್ (21) ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾನೆ. 

kumsi Police ಕೊಲೆ ಹೇಗೆ ಮಾಡಿದ್ರು?

ಬಸಮ್ಮ ಪಕ್ಕದ ಮನೆಯಲ್ಲಿದ್ದ ಅಮಾನ್ ಏಕಾಂಗಿಯಾಗಿದ್ದ ಬಸಮ್ಮ ಒಡವೆಗಳ ಮೇಲೆ ಕಣ್ಣು ನೆಟ್ಟಿದ್ದ ಅಲ್ಲದೆ ತನ್ನ ಗೆಳೆಯ ವಿಕಾಸ್ ಗೆ ವಿಚಾರ ತಿಳಿಸಿದ್ದ. ಮೊದಲೇ ಮೋಜು ಮಸ್ತಿಯ ಜೀವನಕ್ಕಾಗಿ ಹಾತೊರೆಯುತ್ತಿದ್ದ ಈ ಆರೋಪಿಗಳ ಗುಂಪು ವೃದ್ದೆ ಬಸಮ್ಮ ಒಡವೆಗಳಿಗಾಗಿಯೇ ಕೊಲೆ ಮಾಡಲು ಒಂದು ತಿಂಗಳ ಮೊದಲೇ ಸಂಚು ರೂಪಿಸಿದ್ದರು.ಅಕ್ಟೋಬರ್ 2 ರಂದು ಸಂಜೆ ಬಸಮ್ಮ ಮನೆಯಲ್ಲಿ ಒಬ್ಬರೆ ಇರುವಾಗ ಗ್ಯಾಸ್ ಸಿಲಿಂಡರ್ ಬಗೆ ಹರಿಸುವ ನೆಪದಲ್ಲಿ ಬಂದಿದ್ದಾರೆ. ಪರಿಚಯವಿದ್ದ ಯುವಕರಿಗೆ ಬಸಮ್ಮ ಪಲಾವ್ ನೀಡುವುದಾಗಿ ಅಡುಗೆ ಮನೆಗೆ ಹೋಗಿದ್ದಾರೆ.ಇದೇ ಸಮಯದಲ್ಲಿ ಇಬ್ಬರೂ ಸೇರಿ ಬಸಮ್ಮ ಕುತ್ತಿಗೆಯನ್ನು ಕೊಯ್ದು ಹತ್ಯೆ ಮಾಡಿದ್ದಾರೆ. ನಂತರ, ಕಿವಿಯೋಲೆ, ಚೈನು ಮತ್ತು ಗುಂಡಿನ ಸರವನ್ನು ದೋಚಿದ್ದಾರೆ.  ಮನೆಯಲ್ಲಿ ಚೆಲ್ಲಿದ್ದ ರಕ್ತದ ಕಲೆಗಳನ್ನು ಒರೆಸಲು ಟರ್ಪೆಂಟೈನ್ ಆಯಿಲ್ ಅನ್ನು ಬಳಸಿದ್ದಾರೆ. ರಕ್ತದ ವಾಸನೆಯೂ ಬಾರದಂತೆ ಚೆನ್ನಾಗಿ ತೊಳೆದಿದ್ದಾರೆ. ಮಾರನೆ ದಿನ ಬೆಳಿಗ್ಗೆ ಬಸಮ್ಮ ಬಾಡಿಯನ್ನು ಶಿಪ್ಟ್ ಮಾಡಲು ಮತ್ತೆ ಮನೆಗೆ ಬಂದಿದ್ದಾರೆ.

ಆದರೆ, ಮನೆಯ ಎದುರು ರಂಗೋಲಿ ಹಾಕುತ್ತಿದ್ದ ಯುವತಿಯೊಬ್ಬಳಿಗೆ ಈ ಚಟುವಟಿಕೆಗಳು ಅನುಮಾನ ಮೂಡಿಸಿ, ಅವರು ‘ಬಸಮ್ಮ’ ಎಂದು ಕೂಗಿಕೊಂಡಿದ್ದಾರೆ. ತಕ್ಷಣ ಬಸಮ್ಮನವರ ಮಗನಿಗೆ ಫೋನ್ ಮಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿಗಳು, ಮುಂದಿನ ಹಾಗೂ ಹಿಂದಿನ ಎರಡೂ ಬಾಗಿಲುಗಳನ್ನು ಲಾಕ್ ಮಾಡಿ, ಮನೆಯ ಅಟ್ಟ ಹತ್ತಿ, ಮೇಲಿದ್ದ ಕಿಟಕಿಯನ್ನು ಮುರಿದು ಅಲ್ಲಿಂದ ಪರಾರಿಯಾಗಿದ್ದರು. ಕ್ರೈಂ ಮಾಡುವವರು ಚಾಪೆ ಕೆಳಗೆ ನುಸುಳಿದ್ರೆ, ಅದನ್ನು ಭೇದಿಸಲು ಪೊಲೀಸರು ರಂಗೋಲಿ ಕೆಳಗೆ ನುಸುಳುತ್ತಾರೆ ಎಂಬುದಕ್ಕೆ ಕುಂಸಿ ವೃದ್ದೆ ಕೊಲೆ ಪ್ರಕರಣ ಸಾಕ್ಷಿಯಾಗಿದೆ. 

kumsi Police ತಾಯಿಯನ್ನು ಮಗ ಕೊಂದಿಲ್ಲ- ಸತ್ಯ ಬಯಲಿಗೆಳೆದ ಕುಂಸಿ ಪೊಲೀಸರಿಗೆ ಹ್ಯಾಟ್ಸಾಪ್

ಬಸಮ್ಮರನ್ನು ಹಿಂದಿನ ದಿನ ಕೊಲೆ ಮಾಡಿ ಮಾರನೇ ದಿನ ಬೆಳಿಗ್ಗೆ ದೇಹವನ್ನು ಶಿಪ್ಟ್ ಮಾಡುವ ಪ್ಲಾನ್ ನಲ್ಲಿದ್ದ ಅಮಾನ್ ಸಿಂಗ್ ಮತ್ತು ವಿಕಾಸ್ ಮನೆ ಸನಿಹವೇ ಇರುವ ರೈಲ್ವೆ ಹಳಿಗೆ ಬಸಮ್ಮ ದೇಹವನ್ನು ಇಟ್ಟಿದ್ದರೂ, ರೈಲು ಹರಿದು, ಸಾಕ್ಷ್ಯ ನಾಶವಾಗಿ ತನಿಖೆಗೆ ತೊಡಕಾಗುವ ಸಾಧ್ಯತೆಗಳಿದ್ದವು. ಆರೋಪಿಗಳ ಕೊಲೆಯಾದ ಬಸಮ್ಮರನ್ನು ಹೂತಿದ್ದಾಗಲಿ ಅಥವಾ ಸುಟ್ಟು ಹಾಕಿದ್ರೂ, ಇಲ್ಲಿ ಸಾಕ್ಷಿ ನಾಶವಾಗಿ ಬಸಮ್ಮ ಮಗ ರಮೇಶನೇ ಬಲಿಕಾ ಬಕ್ರಾ ಆಗುತ್ತಿದ್ದ. ಕೊಲೆಯಾದ ಬಸಮ್ಮರ ಮನೆ ಹೊರಗಿನ ಬಾಗಿಲು ಕೀ ಹಾಕಿದ್ದರೂ, ಬಸಮ್ಮ ಬೇರೆ ಊರಿಗೆ ಹೋಗಿದ್ದಾರೆ ಎಂದು ಕೊಂಡೇ ಎಲ್ಲರು ಸುಮ್ಮನಾಗಿಬಿಡುತ್ತಿದ್ದರೇನೋ..ಶವ ಕೊಳೆತಾಗ ವಿಷಯ ಗೊತ್ತಾದರೂ, ತನಿಖೆ ನಡೆಸುವ ಪೊಲೀಸರಿಗೆ ಹಲವು ಸವಾಲುಗಳು ಎದುರಾಗುವ ಸಾಧ್ಯತೆಗಳಿದ್ದವು. ಆರೋಪಿಗಳು ಬನ್ನಿ ಮುಡಿಯುವ ಹಿಂದಿನ ದಿನ ಕೊಲೆ ಕೃತ್ಯ ಎಸಗಿ, ಬನ್ನಿ ಮಂಟಪಕ್ಕೆ ಗ್ರಾಮಸ್ಥರು ಹೋಗುವಾಗ ಟ್ರಾಕ್ಟರ್ ಮೂಲಕ ಬಯಮ್ಮ ಮೃತದೇಹ ಬೇರೆಡೆ ಸಾಗಿಸುವ ಉದ್ದೇಶ ಹೊಂದಿದ್ದರು. ಆದರೆ ಇತ್ತೀಚಿನ  ವೈಜ್ಞಾನಿಕ ತನಿಖೆಗಳು ಕ್ರೈ ಎಸಗುವ ಆರೋಪಿಗಳನ್ನು ಪಾತಾಳದಲ್ಲಿದ್ದರೂ. ಹೊರ ತರಬಲ್ಲರು ಎಂಬುದಕ್ಕೆ ಕುಂಸಿ ಕೊಲೆ ಪ್ರಕರಣ ಸಾಕ್ಷಿಯಾಗಿದೆ.

kumsi Police solved the brutal murder case
kumsi Police solved the brutal murder case

 

Share This Article