KSRTC ಬಸ್– ಪಿಕಪ್‌ ಮುಖಾಮುಖಿ ಡಿಕ್ಕಿ | ಚಾಲಕನಿಗೆ ಗಂಭೀರ ಗಾಯ

KSRTC bus-pickup head-on collision | Driver seriously injured

KSRTC ಬಸ್– ಪಿಕಪ್‌ ಮುಖಾಮುಖಿ ಡಿಕ್ಕಿ | ಚಾಲಕನಿಗೆ ಗಂಭೀರ ಗಾಯ
today police

SHIVAMOGGA | MALENADUTODAY NEWS |  Aug 4, 2024

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಬಸ್‌ ಹಾಗೂ ಪಿಕಪ್‌ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಈ ಘಟನೆಯಲ್ಲಿ ಪಿಕಪ್‌ ಚಾಲಕನಿಗೆ ಗಂಭೀರ ಗಾಯವಾಗಿರುವ ಬಗ್ಗೆ ವರದಿಯಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಬಸ್– ಪಿಕಪ್‌ ಮುಖಾಮುಖಿ ಡಿಕ್ಕಿ

ಮಹಿಷಿ– ದಬ್ಬಣಗದ್ದೆ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಪಿಕಪ್‌ ವಾಹನದ ನಡುವೆ ಬೈನೆಸರ ಸಮೀಪ ಡಿಕ್ಕಿಯಾಗಿದೆ.  

ಘಟನೆಗೆ ಕಾರಣ ಸ್ಪಷ್ಟವಾಗಿಲ್ಲವಾದರೂ, ಇಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿಯ ಅವ್ಯವಸ್ಥೆಯಿಂದ ಅಪಘಾತ ಸಂಭವಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.