ಸೂಟ್‌ಕೇಸ್‌ನಲ್ಲಿ ಅಡಗಿತ್ತು 11 ಅಡಿ ಉದ್ದದ ಕಾಳಿಂಗ ಸರ್ಪ
king cobra was found in a suitcase , Untoorkatte in Thirthahalli taluk , Shivamogga district
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 11 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮನೆಯೊಂದರಲ್ಲಿಟ್ಟಿದ್ದ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ಮನೆಯ ಟ್ರಂಕ್‌ನಲ್ಲಿದ್ದ ಹಾವನ್ನ ಕಂಡು ಗಾಬರಿಯಾದ ಮನೆಯವರು ಆ ಬಳಿಕ ಉರಗ ಸಂರಕ್ಷಕರ ಮೂಲಕ ಸರ್ಪವನ್ನು ಸುರಕ್ಷಿತವಾಗಿ ಹಿಡಿಸಿದ್ದಾರೆ..
ತೀರ್ಥಹಳ್ಳಿಯ ಊಂಟೂರುಕಟ್ಟೆ ಸಮೀಪದ ಕಟ್ಟೆಕೊಪ್ಪದ ಬಳಿ ಇರುವ ಮುನಿಯಮ್ಮ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಇವರ ಮನೆಯಲ್ಲಿದ್ದ ಟ್ರಂಕ್‌ನಲ್ಲಿ ಕಳೆದ ಭಾನುವಾರ ರಾತ್ರಿ ಹಾವು ಸೇರಿರುವುದು ಗೊತ್ತಾಗಿದೆ. ಕೇರೆ ಹಾವೊಂದನ್ನ ಅಟ್ಟಿಸಿಕೊಂಡು ಬಂದ ಕಾಳಿಂಗ ಮನೆಯೊಳಗೆ ನುಗ್ಗಿದೆ. ಆ ಬಳಿಕ ಭಯಗೊಂಡು ಅಲ್ಲಿಯೇ ಇದ್ದ ಸೂಟ್‌ಕೇಸ್‌ನೊಳಗೆ ಸೇರಿಕೊಂಡಿತ್ತು. ಇದರಿಂದ ಮನೆಯವರು ಗಾಬರಿಯಾದರು. .
ಆ ಬಳಿಕ ಮನೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡದ ಸದಸ್ಯರಾದ ಉರಗ ಸಂರಕ್ಷಕ ಚಂದ್ರು ಹಾಗೂ ನರೇಶ್ ರನ್ನ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಅವರುಗಳು 11 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಅದನ್ನು ಬಿಡುಗಡೆ ಮಾಡಿದ್ದಾರೆ.
SUMMARY | king cobra was found in a suitcase near Unturkatte in Thirthahalli taluk of Shivamogga district.
KEY WORDS | king cobra was found in a suitcase , Untoorkatte in Thirthahalli taluk , Shivamogga district