SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ಮನೆಯೊಳಗೆ ಸಣ್ಣ ಇಲಿ ಓಡಾಡಿದರೇ ರಾತ್ರಿಹೊತ್ತು ಭಯವಾಗುತ್ತದೆ. ಅಂತಹದ್ದರಲ್ಲಿ ಮನೆಯ ಮಲಗುವ ಕೋಣೆಯಲ್ಲಿ ಕಾಳಿಂಗ ಸರ್ಪವೊಂದು ಬಂದು ಠಿಕಾಣಿ ಹೂಡಿದರೆ ಪರಿಸ್ಥಿತಿ ಏನಾಗಬೇಡ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಸಮೀಪ ಸಿಗುವ ಸೋಮೇಶ್ವರದಲ್ಲಿ ಇಂತಹದ್ದೊಂದು ಸನ್ನಿವೇಶ ಎದುರಾಗಿತ್ತು.

ಇಲ್ಲಿನ ಮನೆಯೊಂದರ ಬೆಡ್ ರೂಮ್‌ನಲ್ಲಿ ಸುಮಾರು 9 ಅಡಿ ಉದ್ದ ಇರಬಹುದಾದ ಕಾಳಿಂಗ ಸರ್ಪವೊಂದು ಸೇರಿಕೊಂಡಿತ್ತು. ಹೇಗೋ ಮನೆಯೊಳಗೆ ಬಂದ ಕಾಳಿಂಗ ಸರ್ಪ (king cobra), ಸೀದಾ ಮನೆಯ ಮಲಗುವ ಕೋಣೆಯಲ್ಲಿನ ಸೆಲ್ಪ್ ಮೇಲೆ ಏರಿದೆ. ಅಲ್ಲಿದ್ದ ಅಲ್ಯುಮಿನಿಯಂ ಪೆಟ್ಟಿಗೆಯೊಳಗೆ ಆರಾಮಾಗಿ ಠಿಕಾಣಿ ಹೂಡಿತ್ತು.
ಮನೆಯವರು ವಿಷಯ ಅರಿತು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಆ ಬಳಿಕ ಎಆರ್‌ಎಸ್‌ಆಸ್ Agumbe Rainforest Research Station (ARRS) ನವರಿಗೆ ವಿಷಯ ಮುಟ್ಟಿಸಿದ್ದಾರೆ.
ವಿಷಯ ತಿಳಿದು ARRS ನ ಫೀಲ್ಡ್ ಡೈರಕ್ಟರ್ ಅಜಯ್ ಗಿರಿ ನೇತೃತ್ವದ ತಂಡ ಸ್ಥಳಕ್ಕೆ ತೆರಳಿದೆ.
ಅಲ್ಲಿ ಜಾಗರೂಕರಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಕಾಳಿಂಗವನ್ನು ಹಿಡಿದು, ಆ ಬಳಿಕ ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟಿದ್ದಾರೆ.
View this post on Instagram