ಭದ್ರಾವತಿಯಲ್ಲಿ ಏನ್ ಸಾರ್ ಇದು ಕಿಡ್ನ್ಯಾಪ್‌ಗೆ ಅಟೆಂಪ್ಟ್!?
kidnap Attempt in bhadravati, person kidnapping , Bhadravati Tarikatte, Bhadravati Rural Police Station, Bolero Pickup

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಈಗೀಗ ಅಪಹರಣದ ಸುದ್ದಿಗಳು ಜೋರಾಗಿ ಕೇಳಿಬರುತ್ತಿವೆ. ಕೆಲವು ಕೇವಲ ವದಂತಿಗಳಲ್ಲಿ ಕಮರಿಹೋದರೆ, ಮತ್ತೆ ಕೆಲವು ಸುದ್ದಿಗಳು ರಾಜಿ ಸಂಧಾನದಲ್ಲಿ ಕೊನೆಗೊಳ್ತಿವೆ. ಇದರ ನಡುವೆ ಕಳೆದ ಜನವರಿ 15 ರಂದು ನಡೆದ ಅಪಹರಣ ಪ್ರಯತ್ನವೊಂದರ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಏನಿದು ಕೇಸ್
ಕಳೆದ ಜನವರಿ 15 ರಂದು ಇಲ್ಲಿನ ತಾರಿಕಟ್ಟೆಯ ಇಟ್ಟಿಗೆ ಪ್ಯಾಕ್ಟರಿಯೊಂದರ ಬಳಿಯಲ್ಲಿ ಬೊಲೆರೋ ಪಿಕಪ್ ವಾಹನದಲ್ಲಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಲಾಗಿದೆ. ಇಲ್ಲಿನ ನಿವಾಸಿಯೊಬ್ಬರು ಬೈಕ್‌ನಲ್ಲಿ ಬರುವುದನ್ನು ಕಾಯುತ್ತಿದ್ದ ಬೊಲೆರೋನಲ್ಲಿದ್ದ ಮಂಕಿ ಕ್ಯಾಂಪ್ ಧರಿಸಿದ್ದ ಆರೋಪಿಗಳು, ನಿವಾಸಿ ಅವರತ್ತ ಬರುತ್ತಲೇ ಅಪರಿಹಿಸಲು ಯತ್ನಿಸಿದ್ದಾರೆ. ಆದರೆ ನಿವಾಸಿಯು, ಅವರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಬೊಲೆರೋಗೆ ಒದ್ದ ಸಂದರ್ಭದಲ್ಲಿ, ಅಪಹರಣಕಾರರು ಸಹ ಆಯ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಜೋರಾಗಿ ಕೂಗಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಯೇ ಹತ್ತಿರದಲ್ಲಿ ಊರಿನವರು ಏನೋ ಆಯಿತು ಎಂದು ಓಡಿ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ಕಿಡ್ನ್ಯಾಪರ್ಸ್ ಬೊಲೆರೋ ಸಮೇತ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಭದ್ರಾವತಿಯ ಎಲ್‌ಆಂಡ್‌ಓ ಬಗ್ಗೆ ವಿವರಿಸುವ ಅಗತ್ಯವಿಲ್ಲ. ಆದಾಗ್ಯು ಕೆಲವೊಂದು ಘಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.
SUMMARY | Attempted kidnapping of a person coming on a bike. Bhadravati Tarikatte, Bhadravati Rural Police Station, Bolero Pickup
KEY WORDS | kidnap Attempt in bhadravati, person kidnapping , Bhadravati Tarikatte, Bhadravati Rural Police Station, Bolero Pickup