Karnataka police | ಪೊಲೀಸ್ ಇಲಾಖೆಗೆ ಶಾಕ್ | ಸಿಬ್ಬಂದಿಗಳಿಗಿಲ್ಲಾ ಸಮವಸ್ತ್ರ ಕಿಟ್ | ದುಡ್ಡು ವಾಪಸ್ ತಗೊಂಡ ಸರ್ಕಾರ ?| JP ಬರೆಯುತ್ತಾರೆ
karnataka police uniform rules , ಪೊಲೀಸ್ ಸಿಬ್ಬಂದಿಗಳಿಗೆ ಸಮವಸ್ತ್ರ,ಬೂಟ್, ಲಾಠಿ, ಬೂಟ್ ಪಾಲೀಷ್, ಬೆಲ್ಟ್, ಹೆಲ್ಮೆಟ್,ರೈನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ರತಿ ವರ್ಷ ಕೊಡಬೇಕೆಂಬ ನಿಯಮವಿದೆ , ಕರ್ನಾಟಕ ಪೊಲೀಸ್ , Karnataka police
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 Hosanagara stamps and paper scam
ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಪೊಲೀಸ್ ಮತ್ತು ಜೈಲು ಸಿಬ್ಬಂದಿಯ ಸಮವಸ್ತ್ರದ ಹಣ ಹಿಂಪಡೆದ ರಾಜ್ಯ ಸರ್ಕಾರ..ಏನಾಯ್ತು? ಜೆಪಿ ಬರೆಯುತ್ತಾರೆ
ರಾಜ್ಯದ ಇತಿಹಾಸದಲ್ಲಿ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತರುವಂತ ಘಟನೆಯೊಂದು ನಡೆದು ಹೋಗಿದೆ. ಪೊಲೀಸ್ ಇಲಾಖೆ ಇತಿಹಾಸದಲ್ಲಿ ಮೊದಲ ಬಾರಿಗೆ ಕಿಟ್ ಆರ್ಟಿಕಲ್ಗೆ ಸಂಬಂಧಿಸಿದ ಕಡತ ವಿಲೇವಾರಿ ವಿಳಂಬವಾದ ಕಾರಣಕ್ಕೆ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಹಿಂಪಡೆದಿದೆ. ಇದರಿಂದಾಗಿ ಈ ಬಾರಿ ಪೊಲೀಸರಿಗೆ ಹಾಗು ಜೈಲು ಸಿಬ್ಬಂದಿಗಳಿಗೆ ಕಿಟ್ ಆರ್ಟಿಕಲ್ ಗಗನ ಕುಸಮವಾಗಿದೆ.
ರಾಜ್ಯ ಪೊಲೀಸ್ ಇಲಾಖೆ - karnataka police
ಎಡಿಜಿಪಿ ಆಡಳಿತ ಕಛೇರಿಯಿಂದ ಕಡೆತ ವಿಲೇವಾರಿ ವಿಳಂಬವಾದ ಕಾರಣಕ್ಕೆ ಸರ್ಕಾರ ಈ ನಡೆ ಅನುಸರಿಸಿದೆ ಎನ್ನಲಾಗಿದೆ. ರಾಜ್ಯದ ಲಕ್ಷಾಂತರ ಮಂದಿ ಪೊಲೀಸರಿಗೆ ಪ್ರತಿ ವರ್ಷ ಸರ್ಕಾರ ಸಮವಸ್ತ್ರದ ಕಿಟ್ ವಿತರಿಸುತ್ತರೆ. ಇದಕ್ಕಾಗಿಯೇ ಕೋಟ್ಯಾಂತರ ರೂಪಾಯಿ ವಿನಿಯೋಗಿಸುತ್ತದೆ.
ಕಿಟ್ ಆರ್ಟಿಕಲ್ ನಲ್ಲಿ ಪೊಲೀಸ್ ಸಮವಸ್ತ್ರ,ಬೂಟ್, ಲಾಠಿ, ಬೂಟ್ ಪಾಲೀಷ್, ಬೆಲ್ಟ್, ಹೆಲ್ಮೆಟ್,ರೈನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪ್ರತಿ ವರ್ಷ ಕೊಡಬೇಕೆಂಬ ನಿಯಮವಿದೆ ಆದರೆ ಈ ಬಾರಿ ಯಾಕೆ ಪೊಲೀಸ್ ಆಡಳಿತ ಕಛೇರಿಯಿಂದ ಕಡೆತ ವಿಲೆವಾರಿ ವಿಳಂಬವಾಯಿತೋ ಗೊತ್ತಿಲ್ಲ. ಪೊಲೀಸರಿಗೆ ತಲುಪಬೇಕಾದ ಸವಲತ್ತು ಕೈತಪ್ಪಿದಂತಾಗಿದೆ.
ಈ ಬಗ್ಗೆ ಪೊಲೀಸ್ ಪ್ರದಾನ ಕಛೇರಿಯು (ಎಡಿಜಿಪಿ ಆಡಳಿತ ಎಡಿಜಿಪಿ “Soumendu Mukherjee) ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಬೇಕಿದೆ. ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ರವರು ಪೊಲೀಸರಿಗೆ ತಲುಪಬೇಕಾದ ಅಗತ್ಯ ಸವಲತ್ತುಗಳನ್ನು ಆಧ್ಯತೆಯ ಮೇರೆಗೆ ನೀಡಬೇಕಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ