SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ
ನಿರೀಕ್ಷೆಯಂತೆ ಕನ್ನಡದ ಸಿನಿಮಾ ಕಾಂತಾರ (Kantara)ಕ್ಕೆ ರಾಷ್ಟ್ರಪಶಸ್ತಿ ಲಭಿಸಿದೆ. ಕಾಂತಾರ ಸಿನಿಮಾ ಅತ್ಯುತ್ತಮ ಮನರಂಜನಾ ಸಿನಿಮಾ ಎಂದು ಆಯ್ಕೆಮಾಡಲಾಗಿದೆ. ಇನ್ನೂ ಇದೇ ಸಿನಿಮಾಕ್ಕೆ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಇನ್ನೊಂದೆಡೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ಕೆಜಿಎಫ್ 2 ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಇನ್ನೂ 2022 ಜನವರಿಯಿಂದ ರಿಂದ ಡಿಸೆಂಬರ್ 31,2022ರ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 2023 ರಲ್ಲಿ ಕೋವಿಡ್ ಕಾರಣಕ್ಕೆ ಪ್ರಶಸ್ತಿ ಘೋಷಣೆಯಾಗಿರಲಿಲ್ಲ. 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇದಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
