ಜುಲೈ ತಿಂಗಳಿನಲ್ಲಿ ದಾಖಲೆ ಬರೆದ ಸಾಗರ | ಹೊಸನಗರ, ತೀರ್ಥಹಳ್ಳಿಯಲ್ಲಿ ಒಂದುವರೆ ಪಟ್ಟು ಹೆಚ್ಚು ಮಳೆ | ವರ್ಷಧಾರೆಯ ತಿಂಗಳ ಲೆಕ್ಕ

In July, Shivamogga received one-and-a-half times more rainfall than normal ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ವಾಡಿಕೆ ಮಳೆಗಿಂತಲೂ ಒಂದುವರೆ ಪಟ್ಟು ಹೆಚ್ಚು ಮಳೆಯಾಗಿದೆ shivamogga rain news today live

ಜುಲೈ ತಿಂಗಳಿನಲ್ಲಿ ದಾಖಲೆ ಬರೆದ ಸಾಗರ | ಹೊಸನಗರ, ತೀರ್ಥಹಳ್ಳಿಯಲ್ಲಿ ಒಂದುವರೆ ಪಟ್ಟು ಹೆಚ್ಚು ಮಳೆ | ವರ್ಷಧಾರೆಯ ತಿಂಗಳ ಲೆಕ್ಕ
shivamogga rain news today live

SHIVAMOGGA | MALENADUTODAY NEWS |  Jul 31, 2024 

ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗಿದೆ ಎನ್ನುವುದಕ್ಕೆ ಮಳೆಯ ಅಂಕಿ ಅಂಶಗಳು ಸಾಕ್ಷಿ ಹೇಳುತ್ತಿದೆ. ಇವತ್ತು ಲಭ್ಯವಾದ ಮಾಹಿತಿ ಪ್ರಕಾರ,  ಶಿವಮೊಗ್ಗ 11.20 ಎಂಎಂ, ಭದ್ರಾವತಿ 8.40 ಎಂಎಂ,   ತೀರ್ಥಹಳ್ಳಿ 73.90 ಎಂಎಂ,  ಸಾಗರ 89.40 ಎಂಎಂ,  ಶಿಕಾರಿಪುರ 13.80 ಎಂಎಂ,   ಸೊರಬ 28.50 ಎಂಎಂ,  ಹಾಗೂ ಹೊಸನಗರ 40.94 ಎಂಎಂ ಮಳೆಯಾಗಿದೆ. ಒಟ್ಟಾರೆ ಶಿವಮೊಗ್ಗದಲ್ಲಿ ಕಳೆದ 24 ಗಂಟೆಗಳಲ್ಲಿ 4.94 ಎಂಎಂ ಮಳೆಯಾಗಿದೆ.

ಅಪಾಯಕಾರಿಯಾದ ತುಂಗಾ | ಎಲ್ಲೆಲ್ಲಿ ನುಗ್ಗಲಿದೆ ನೀರು | ಕಾಳಜಿ ಕೇಂದ್ರ ಓಪನ್‌ ಮಾಡಿದ ಪಾಲಿಕೆ

ಜುಲೈ ತಿಂಗಳ ಮಳೆಯ ಅಂಕಿ ಅಂಶ 

ಇನ್ನೂ ಜುಲೈ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಜುಲೈ ನ ವಾಡಿಕೆ  603.54 ಎಂಎಂ ನಷ್ಟು ಆಗಬೇಕಿತ್ತು. ವಿಶೇಷ ಅಂದರೆ  ಈ ವರ್ಷದ ಜುಲೈ ತಿಂಗಳಿನಲ್ಲಿ ಒಟ್ಟಾರೆ 1019.10ಎಂಎಂ ಮಳೆಯಾಗಿದೆ. ತಾಲ್ಲೂಕು ವಾರು ಮಳೆ ಹಾಗೂ ಅದರ ವ್ಯತ್ಯಾಸವನ್ನು ಸಹ ನೀವು ಗಮನಿಸಬಹುದಾಗಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

 

ತಾಲ್ಲೂಕು  ವಾಡಿಕೆ ಮಳೆ ಈ ವರ್ಷ (ಜುಲೈ)

ಶಿವಮೊಗ್ಗ 204.70 ಎಂಎಂ 442.10 ಎಂಎಂ

ಭದ್ರಾವತಿ 198.90 ಎಂಎಂ 312.40 ಎಂಎಂ

ತೀರ್ಥಹಳ್ಳಿ 1017.90 ಎಂಎಂ 1689.30 ಎಂಎಂ

ಸಾಗರ 847.70 ಎಂಎಂ 1722.00 ಎಂಎಂ

ಶಿಕಾರಿಪುರ 257.70 ಎಂಎಂ 510.90ಎಂಎಂ

ಸೊರಬ 535.20 ಎಂಎಂ 804.40ಎಂಎಂ

ಹೊಸನಗರ 1162.70ಎಂಎಂ 1652.60ಎಂಎಂ

ಸಾಗರ ಹಾಗೂ ಶಿಕಾರಿಪುರ, ಶಿವಮೊಗ್ಗದಲ್ಲಿ ವಾಡಿಕೆ ಮಳೆಗಿಂತಲೂ ದುಪ್ಪಟ್ಟು ಮಳೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ಒಂದುವರೆ ಪಟ್ಟು ಹೆಚ್ಚು ಮಳೆಯಾಗಿದೆ.