ಸಾಗರ ಪೇಟೆಯಲ್ಲೊಂದು ಬಿದ್ದ ಹೋರಿಕರ ಮತ್ತು ಗೆದ್ದ ಮಾನವೀಯತೆಯ ಘಟನೆ
Residents of Sagar Taluk, Shimoga District, humanity showed to sick bull,

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಮಲ್ನಾಡ್ ಮಂದಿ ಮಾನವೀಯತೆಗೆ ಮನೆಮಾತನಾದವರು. ಮುಂದೆ ಮನೆಗಳಿಲ್ಲ, ಊಟ ಸಿಗೋದಿಲ್ಲ, ಇಲ್ಲೆ ಊಟ ಮಾಡಿ ಹೋಗಿ ಎಂದು ಮನೆ ಬಾಗಿಲಿಗೆ ಬಂದ ಬಿಕ್ಷಕರಿಗೂ ಹೇಳುವ ಗುಣ ಇಲ್ಲಿನ ಒಂಟಿ ಮನೆಗಳದ್ದು ಎಂಬ ಮಾತೊಂದಿದೆ. ಮಲ್ನಾಡಿಗರ ಮನುಷ್ಯತ್ವವನ್ನು ವಿವರಿಸುವುದಾಗಿ ಈ ಮಾತು ಬಳಕೆಯಲ್ಲಿದೆ. ಈಗ್ಯಾಕೆ ಈ ಮಾತು ಅಂದರೆ ಮೊನ್ನೆ ಮೊನ್ನೆ ತೀರ್ಥಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಸತ್ತುಬಿದ್ದಿದ್ದ ಮಂಗವೊಂದನ್ನು ಅಲ್ಲಿಯೇ ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ಮಾಡಿದ ಘಟನೆ ಬಗ್ಗೆ ಮಲೆನಾಡು ಟುಡೆಯಲ್ಲಿ ಓದಿದ್ದೀರಿ. ಇದೀಗ ಅಂತಹುದೆ ಒಂದು ಘಟನೆಗೆ ಸಾಗರ ತಾಲ್ಲೂಕು ಸಾಕ್ಷಿಯಾಗಿದೆ.
ಸಾಗರ ನಗರದ ಎಸ್ ಎನ್ ನಗರ ಬಡಾವಣೆಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಹೋರಿಯೊಂದನ್ನ ಗಮನಿಸಿದ ಶಾಸಕ ಗೋಪಾಲಕೃಷ್ಣರವರ ಸಂಬಂಧಿ ಅಶೋಕ ಬೇಳೂರು ವೈಧ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಅನಾರೋಗ್ಯದಿಂದ ಇಲ್ಲಿನ ಗುಡ್ಡವೊಂದು ಬಿದ್ದಲ್ಲಿಯೇ ಬಿದ್ದಿತ್ತು. ಅದು ಮೇಲಕ್ಕೆ ಏಳಲು ಪಜೀತಿ ಪಡ್ತಿರುವುದನ್ನ ಗಮನಿಸಿದ ಸ್ಥಳೀಯರು ಎಂತ ಮಾಡದ್ ಮಾರಾಯ, ಡಾಕ್ಟರ್‌ನ್ನಾದರೂ ಕರೆಸಿದ್ದರೆ ಆಗ್ತಿತ್ತು ಎನ್ನುತ್ತಾ ತಮ್ಮಲ್ಲೇ ಆಗುವ ಪ್ರಯತ್ನಗಳನ್ನ ಮಾಡಿದ್ರು. ಇದನ್ನ ಗಮನಿಸಿದ ಅಶೋಕ್ ಬೇಳೂರು, ಪಶುವೈದ್ಯರನ್ನ ಸಂಪರ್ಕಿಸಿ ಬರೋದಕ್ಕೆ ಹೇಳಿ ಅವರ ಮೂಲಕ ಹೋರಿಗೆ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಅವರ ಚಿಕಿತ್ಸೆ ಸ್ಥಳೀಯರ ಹಾರೈಕೆಯಿಂದ ಹೋರಿಕರ ಗೆಲುವಾದರೆ ಸಾಕು ಎಂಬುದಷ್ಟೆ ಈ ಸದ್ಯದ ಆಶಯ
SUMMARY | Residents of Sagar Taluk, Shimoga District, showed their humanity by providing treatment to a sick bull
KEY WORDS | Residents of Sagar Taluk, Shimoga District, humanity showed to sick bull,