Hosanagara | ಬಾವಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವು | ಧಾರುಣ ಘಟನೆ

Hosanagara, Mother, two children die after jumping into well , ಹೊಸನಗರ , ತಾಯಿ ಮಕ್ಕಳು ಆತ್ಮಹತ್ಯೆ, ಚಂಪಕಾಪುರ

Hosanagara | ಬಾವಿಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳು ಸಾವು | ಧಾರುಣ ಘಟನೆ
Hosanagara, Mother, two children die after jumping into well , ಹೊಸನಗರ , ತಾಯಿ ಮಕ್ಕಳು ಆತ್ಮಹತ್ಯೆ, ಚಂಪಕಾಪುರ

SHIVAMOGGA | MALENADUTODAY NEWS | Aug 9, 2024  ಮಲೆನಾಡು ಟುಡೆ 

ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಬಾರದಂತಹ ದುರಂತವೊಂದು ಸಂಭವಿಸಿದೆ. ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಗ್ಗೆ ವರದಿಯಾಗಿದೆ. ಹೊಸನಗರ ತಾಲ್ಲೂಕುನಲ್ಲಿ ಈ ಘಟನೆ ಸಂಭವಿಸಿದೆ. 

ಹೊಸನಗರ ತಾಲ್ಲೂಕು ಚಂಪಕಾಪುರದಲ್ಲಿ ಘಟನೆ 

ಹೊಸನಗರ ತಾಲೂಕು ಮತ್ತಿಕೈ ಗ್ರಾಮ ವ್ಯಾಪ್ತಿಯ ಚಂಪಕಾಪುರದಲ್ಲಿ ಘಟನೆ ನಡೆದಿದ್ದು,  ಇಲ್ಲಿನ ನಿವಾಸಿ ವಾಣಿ ಎಂಬವರು ತಮ್ಮಿಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ಅವರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 



ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ



ಸಾವನ್ನಪ್ಪಿದವರು

ರಾಜೇಶ್‌ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. 




ನಿನ್ನೆ ಅಂದರೆ ಗುರುವಾರ ರಾತ್ರಿ ವಾಣಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾನು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . 



ಬಾವಿಗೆ ಬಿದ್ದು ತಾಯಿ ಮಕ್ಕಳು ಆತ್ಮಹತ್ಯೆ

ಸದ್ಯ ಬಾವಿಯಿಂದ ಮೂವರ ಮೃತದೇಹವನ್ನು ಮೇಲೆತ್ತಲಾಗಿದ್ದು, ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ  ನಗರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. 






























 ತೀರ್ಥಹಳ್ಳಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ತಾಲ್ಲೂಕಿನಲ್ಲಿ 7 ಕಡೆಗಳ ಒಟ್ಟು 29 ಎಕರೆ ಅರಣ್ಯ ಒತ್ತುವರಿಯನ್ನು ಗುರುವಾರ ಅರಣ್ಯ ಇಲಾಖೆ ತೆರವುಗೊಳಿಸಿದೆ.

ಆಗುಂಬೆ ಅರಣ್ಯ ವಲಯ ವ್ಯಾಪ್ತಿಯ ಆಲಗೇರಿ, ಬಿದರಗೋಡು ಗ್ರಾಮದಲ್ಲಿ ಒಟ್ಟು 2 ಪ್ರಕರಣದ 13.24 ಎಕರೆ, ಮಂಡಗದ್ದೆ ಅರಣ್ಯ ವಲಯ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ 6 ಎಕರೆ, ತೀರ್ಥಹಳ್ಳಿ ಅರಣ್ಯ ವಲಯ ವ್ಯಾಪ್ತಿಯ ಭಾರತೀಪುರ, ಮೇಲಿನಕುರುವಳ್ಳಿ ಗ್ರಾಮದ 3 ಸ್ಥಳದಲ್ಲಿ ಒಟ್ಟು 7.20 ಎಕರೆ, ಆಯನೂರು ಅರಣ್ಯ ವಲಯ ವ್ಯಾಪ್ತಿಯ ಗುಂಡಿಚಟ್ನಳ್ಳಿ ಗ್ರಾಮದ 2 ಎಕರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ.

ತೆರವು ಕಾರ್ಯಾಚರಣೆ ವೇಳೆ ಗ್ರಾಮಸ್ಥರ ವಿರೋಧ ವ್ಯಕ್ತವಾಯಿತು. ಒತ್ತುವರಿ ತೆರವುಗೊಳಿಸಿ ವಶಪಡಿಸಿ ಕೊಂಡ ಜಾಗದಲ್ಲಿ ಜೆಸಿಬಿ ಮೂಲಕ ಕಂದಕ ನಿರ್ಮಿಸಲಾಗಿದೆ. ಕಂದಕದ ಆಜುಬಾಜಿನಲ್ಲಿ ಕಾಡು ಜಾತಿಯ ಸಸಿಗಳನ್ನು ನಾಟಿ ಮಾಡಲಾಗಿದೆ.

ಒತ್ತುವರಿ ತೆರವು ಸ್ಥಳಕ್ಕೆ ಡಿಸಿಎಫ್‌ಒ ಶಿವಶಂಕರ್‌ ಇ. ಭೇಟಿ ನೀಡಿ ಪರಿಶೀಲಿಸಿದರು. ಎಸಿಎಫ್‌ ದಿನೇಶ್‌‌ ಎಸ್.ಒ, ತೀರ್ಥಹಳ್ಳಿ ವಲಯ ಅರಣ್ಯ ಅಧಿಕಾರಿ ಸಂಜಯ್‌ ಬಿ.ಎಸ್, ಮಂಡಗದ್ದೆ ವಲಯ ಅರಣ್ಯ ಅಧಿಕಾರಿ ಎಂ.ಪಿ. ಆದರ್ಶ, ಆಗುಂಬೆ ವಲಯ ಅರಣ್ಯ ಅಧಿಕಾರಿ ಮಧುಕರ್‌ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಹಂಗಮ ರೆಸಾರ್ಟ್‌ ಒತ್ತುವರಿ ತೆರವು

ಇಲ್ಲಿನ ಭಾರತೀಪುರ ಗ್ರಾಮದ ಸರ್ವೆ ನಂ. 81ರ ಭಾರತೀಪುರ ಕಿರು ಅರಣ್ಯ ಪ್ರದೇಶದಲ್ಲಿ ಕೆ.ಆರ್.‌ ದಯಾನಂದ, ಕಾನೀನ ಕಡಿದಾಳ್‌ ಅವರು ಅಕ್ರಮವಾಗಿ ಕಲ್ಲುಕಂಬ ತಂತಿ ಬೇಲಿ ನಿರ್ಮಿಸಿ, ಅಡಿಕೆ, ಕಾಫಿ ಇನ್ನಿತರೆ ಬೆಳೆ ಬೆಳೆದು ಮನೆ ಮತ್ತು ಇತರೆ ಕಟ್ಟಡ ನಿರ್ಮಿಸಿ ಕಾನೂನು ಬಾಹಿರ ಒತ್ತುವರಿ ಮಾಡಿಕೊಂಡಿದ್ದರು.

ಡಿಸಿಎಫ್‌ಒ ನೇತೃತ್ವದಲ್ಲಿ ವಿಹಂಗಮ ಹಾಲಿಡೇ ರೆಸಾರ್ಟ್‌ ಪ್ರದೇಶದ ಅಂದಾಜು 2.20 ಎಕರೆ ಅಕ್ರಮ ಒತ್ತುವರಿ ತೆರವುಗೊಳಿಸಿ ಜಾಗವನ್ನು ಸುಪರ್ದಿಗೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಒತ್ತುವರಿದಾರರು ಕಟ್ಟಡಗಳಿಗೆ ಪಟ್ಟಣ ಪಂಚಾಯಿತಿಯಿಂದ ಭೂ– ಭೂಪರಿವರ್ತನೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ದಾಖಲೆ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ. ಮುಂದಿನ ಹಂತದ ಕಾರ್ಯಚರಣೆ ಕೈಗೊಳ್ಳಲು ಒತ್ತುವರಿದಾರರ ಮೇಲೆ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಲಂ 64(ಎ) ಅಡಿಯಲ್ಲಿ ನೋಟೀಸ್‌ ಜಾರಿ ಮಾಡಲಾಗಿದೆ.



ಕುಂಸಿ ಪೊಲೀಸ್‌ ಠಾಣೆ ಪೊಲೀಸ್‌ ಕಾರ್ಯಾಚರಣೆ 

ಅಲ್ಲದೆ ಅಳಿಯ ಆದರ್ಶನನ್ನ ಸಾವಿತ್ರಮ್ಮ ತರಾಟೆ ತೆಗೆದುಕೊಂಡಿದ್ದಾಳೆ. ಮೊದಲೇ ಕುಡಿದು ಟೈಟಾಗಿದ್ದ ಆದರ್ಶ ಮತ್ತಷ್ಟು ಕೆರಳಿ ಅಜ್ಜಿ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಹಿಸುಕಿ ಸಾಯಿಸಿದ್ದಾನೆ. ಆ ಬಳಿಕ ಸಾಗುವಾನಿ ನಾಟವನ್ನು ಅಲ್ಲಿಂದ ಸಾಗಿಸಿದ್ದಾನೆ. 

ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಪೊಲೀಸ್‌ ಠಾಣೆ ಪೊಲೀಸರು ಆರೋಪಿ ಆದರ್ಶನನ್ನ ಸಂಶಯದ ಮೇಲೆ ಬಂಧಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

 

ಆದಾಗ್ಯು ಕೇವಲ ಮೂರು ಸಾವಿರ ರೂಪಾಯಿ ಬೆಲೆಬಾಳುವ ಎರಡು ಹಲಗೆ ತುಂಡಿಗಾಗಿ ಆದರ್ಶನ ತನ್ನ ಸೋದರತ್ತೆಯನ್ನೆ ಕೊಲೆಮಾಡಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆತನಿಗದ್ದ ಕುಡಿಯುವ ಚಟ ಎಂಬುದೇ ಇಲ್ಲಿ ಆತಂಕದ ಸಂಗತಿ

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ