ಭದ್ರಾವತಿಯಲ್ಲಿ ಹಾರಿತು ಪೊಲೀಸ್‌ ಗುಂಡು | ಗುಂಡನ ಕಾಲಿಗೆ ಬುಲೆಟ್‌ ಫೈರ್‌ |

hosamane ps limits of bhadravati, PSI Krishna shot gunda alias Ravi in ​​the leg

ಭದ್ರಾವತಿಯಲ್ಲಿ ಹಾರಿತು ಪೊಲೀಸ್‌ ಗುಂಡು | ಗುಂಡನ ಕಾಲಿಗೆ ಬುಲೆಟ್‌ ಫೈರ್‌ |
hosamane ps limits of bhadravati, PSI Krishna shot gunda alias Ravi in ​​the leg

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 21, 2025 ‌‌ 

ಶಿವಮೊಗ್ಗ ಜಿಲ್ಲೆ ಭದ್ರಾವತಿ ಪೊಲೀಸರು ಫೈರಿಂಗ್‌ ಮಾಡಿದ್ದಾರೆ. ಗುಂಡಾ ಅಲಿಯಾಸ್‌ ರವಿ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಲ್ಲಿನ ಪೊಲೀಸ್‌ ಅಧಿಕಾರಿ ಎಸ್‌ಐ ಕೃಷ್ಣ ಹಾಗೂ ಸಿಬ್ಬಂದಿ ಆದರ್ಶ್‌ ಇನ್ನಿತರ ಪೊಲೀಸ್‌ ಸಿಬ್ಬಂದಿ ಒಳಗೊಂಡ ತಂಡ ಗುಂಡಾ ಅಲಿಯಾಸ್‌ ರವಿ ಎಂಬಾತನನ್ನು ವಶಕ್ಕೆ ಪಡೆಯುವ ಸಲುವಾಗಿ ಕಾರ್ಯಾಚರಣೆ ನಡೆಸಿತ್ತು. 

ಆರೋಪಿಯನ್ನು ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪೊಲೀಸರ ಮೇಲ ರವಿ ಹಲ್ಲೆ ಮಾಡಿದ್ದಾನೆ. ಸಿಬ್ಬಂದಿ ಆದರ್ಶ್‌ರವರ ಮೇಲೆ ಹಲ್ಲೆ ಮಾಡಿದ ಆತನನ್ನು ಶರಣಾಗುವಂತೆ ಪಿಎಸ್‌ಐ ಕೃಷ್ಣ ವಾರ್ನ್‌ ಮಾಡಿದ್ದಾರೆ. ಅದಕ್ಕೆ ಬಗ್ಗದಿದ್ದಾಗ, ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ರಿಪಿಟೆಡ್‌ ವಾರ್ನಿಂಗ್‌ ಬಳಿಕವೂ ಗುಂಡಾ ಶರಣಾಗದೇ ಇದ್ದಾಗ, ಕೃಷ್ಣರವರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ವಶಕ್ಕೆ ಪಡೆದಿದ್ದಾರೆ. 

ಈ ಬಗ್ಗೆ ಎಸ್‌ಪಿ ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ವಾಟ್ಸಾಪ್‌ ಮೆಸೇಜ್‌ ರವಾನೆ ಮಾಡಿದ್ದು, ನಡೆದ ಘಟನೆಯನ್ನು ವಿವರಿಸಿದ್ದಾರೆ

ಗುಂಡಾ ಅಲಿಯಾಸ್‌ ರೌಡಿಶೀಟರ್‌ ಆಗಿದ್ದು ಈತನ ವಿರುದ್ಧ ನಾಲ್ಕು ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ

SUMMARY |  hosamane ps limits of bhadravati, PSI Krishna shot gunda alias Ravi in ​​the leg

KEY WORDS |‌   hosamane ps limits of bhadravati, PSI Krishna shot gunda alias Ravi in ​​the leg