34 ವರ್ಷಗಳ ಹಿಂದಿನ ಕೇಸ್ ನಲ್ಲಿ ಹೊಳೆಹೊನ್ನೂರು ನಿವಾಸಿ ಅರೆಸ್ಟ್ | ನಡೆದಿದ್ದೇನು?
Holehonnur resident arrested in 34-year-old case | What happened?
Jul 27, 2024 SHIVAMOGGA | MALENADUTODAY NEWS |
ನೆರೆ ಜಿಲ್ಲೆ ಉಡುಪಿ ಪೊಲೀಸರು 34 ವರ್ಷದ ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇದೀಗ ಶಿವಮೊಗ್ಗದ ಹೊಳೆಹೊನ್ನೂರು ಮೂಲದ ಆರೋಪಿಯೊಬ್ಬನನ್ನ ಬಂಧಿಸಿದ್ದಾರೆ.
ಉಡುಪಿ ಪೊಲೀಸ್
ಉಡುಪಿ ನಗರ ಪೊಲೀಸರ ಕಾರ್ಯಾಚರಣೆ ಇದೀಗ ಕುತೂಹಲ ಮೂಡಿಸುತ್ತಿದೆ. ಮೊನ್ನೆ ಶುಕ್ರವಾರ ಹೊಳೆಹೊನ್ನೂರು ಮೂಲದ ಚಿನ್ನುವಾಡು ಎಂಬ 55 ವರ್ಷದ ವ್ಯಕ್ತಿಯನ್ನ ಉಡುಪಿ ನಗರ ಪೊಲೀಸರು ಬಂಧಿಸಿದ್ದರು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಶ್ರೀಗಂಧ ಕಳ್ಳತನ ಪ್ರಕರಣ
ಬಂಧಿತ ಆರೋಪಿ 1990 ರಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ಲಿಮಿಟ್ಸ್‌ನಲ್ಲಿ ಶ್ರೀಗಂಧ ಕಳ್ಳತನ ನಡೆಸಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೇಸ್ ದಾಖಲಾಗಿ ಇದೀಗ 34 ವರ್ಷಗಳೇ ಕಳೆದಿದೆ. ಇದೀಗ ಪ್ರಕರಣದ ಆರೋಪಿಯನ್ನ ಹೊಳೆಹೊನ್ನೂರು ಸಮೀಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.