ಶಿವಮೊಗ್ಗ- ತೀರ್ಥಹಳ್ಳಿ ರಸ್ತೆಯುದ್ದಕ್ಕೂ ಕಂಡ ಕಂಡಲ್ಲಿ ಫ್ಲೆಕ್ಸ್ ಬೋರ್ಡ್ ವಹಿವಾಟು! ಕೇಳರಿಲ್ಲ, ಹೇಳರಿಲ್ಲ ಭಾರೀ ಲಾಭ ಕಣ್ರಿ!
high way flex board, high way flex rules violation, national highway shivamogga to thirthahalli

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 15, 2025
ಶಿವಮೊಗ್ಗ ಟು ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಂಚರಿಸುತ್ತಿರುವಾಗ ರಸ್ತೆ ಪಕ್ಕದಲ್ಲಿ ನೂರಾರು ಜಾಹೀರಾತು ಫಲಕಗಳು ಕಾಣಸಿಗುತ್ತವೆ. ಆದರೆ ಈ ಪೈಕಿ ಎಷ್ಟು ಬೋರ್ಡ್‌ಗಳು ಸ್ಥಳೀಯ ಆಡಳಿತದಿಂದ ಪರ್ಮಿಟ್ ಪಡೆದಿವೆ. ಅನಧಿಕೃತ ಫ್ಲೆಕ್ಸ್‌ಗಳೆಷ್ಟು. ಅವುಗಳ ಬೆನ್ನ ಹಿಂದಿರೋ ಲಕ್ಷ ಲಕ್ಷ ವಹಿವಾಟಿನ ಕಥೆ ನಿಮ್ಮ ಮುಂದೆ
ಶಿವಮೊಗ್ಗ ತೀರ್ಥಹಳ್ಳಿ ಫ್ಲೆಕ್ಸ್ ವಹಿವಾಟು
ಖಾಲಿ ಜಾಗ ಸಿಕ್ಕರೆ, ಅಲ್ಲೊಂದು ಬೋರ್ಡ್ ಹುಗಿದು, ಅದರಿಂದ ತಿಂಗಳ ತಿಂಗಳ ದೊಡ್ಡಮಟ್ಟದ ಬಾಡಿಗೆ ಎಣಿಸುವ ದೊಡ್ಡ ಹಾಗೂ ವ್ಯವಸ್ಥಿತ ಟೀಂ ಇರುವುದು ಶಿವಮೊಗ್ಗಕ್ಕೆ ಗೊತ್ತಿರುವ ವಿಚಾರವೇ. ಮುಂದುವರಿದು ಈ ದಂಧೆ ಹೇಗೆ ನಡೆಯುತ್ತದೆ ಎನ್ನುವುದು ಹೇಳುವುದಾದರೆ, ಸಾಮಾನ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡುವ ವಾಹನಗಳಲ್ಲಿ ಇರುವವರ ಗಮನ ಸೆಳೆಯುವುದಕ್ಕಾಗಿ ದೊಡ್ಡ ದೊಡ್ಡ ಕಂಪನಿಗಳು ಬೋರ್ಡ್‌ಗಳ ಮೂಲಕ ಜಾಹಿರಾತು ಪ್ರಕಟ ಮಾಡುತ್ತವೆ. ಈ ವಾಲ್ ಫ್ಲೆಕ್ಸ್ ಜಾಹಿರಾತಿಗಾಗಿ, ಬೋರ್ಡ್ ಅಳವಡಿಸಿದ ವ್ಯಕ್ತಿ ಅಥವಾ ಕಂಪನಿಗಳಿಗೆ ಪ್ರತಿ ತಿಂಗಳು ರೆಂಟ್ ನೀಡುತ್ತವೆ. ಹೀಗೆ ಬರುವ ಪ್ಲೆಕ್ಸ್ ಬೋರ್ಡ್‌ಗಳ ಪ್ರತಿ ತಿಂಗಳ ಕಮಾಯಿ ದೊಡ್ಡಮೊತ್ತದಲ್ಲಿರುತ್ತದೆ.
ರೂಲ್ಸ್ ಇದೆ, ಕೇಳುವರರಿಲ್ಲ
ಆದರೆ ಹೀಗೆ ಅಳವಡಿಸಲಾದ ಬೋರ್ಡ್‌ಗಳಿಗೆ ಕೆಲವು ನಿಯಮಗಳಿವೆ. ಹೆದ್ದಾರಿಯಿಂದ ಇಂತಿಷ್ಟು ಮೀಟರ್ ದೂರ ಯಾವುದೇ ವಾಲ್ ಫ್ಲೆಕ್ಸ್‌ಗಳನ್ನು ಹಾಕುವಂತಿಲ್ಲ. ಮೇಲಾಗಿ ಇಂತಹ ಪ್ಲೆಕ್ಸ್ ಬೋರ್ಡ್ ಅಳವಡಿಸುವಾಗ ಅದಕ್ಕೆ ಸ್ಥಳೀಯ ಆಡಳಿತದ ಪರ್ಮಿಶನ್ ತೆಗೆದುಕೊಳ್ಳಬೇಕು ಮತ್ತು ಪ್ಲೆಕ್ಸ್ ಬೋರ್ಡ್ ಅಳವಡಿಸುವ ಲೈಸೆನ್ಸ್ ಹೊಂದಬೇಕು. ಇದಷ್ಟೆ ಅಲ್ಲದೆ ರಸ್ತೆಯ ತಿರುವು ಸೇರಿದಂತೆ ಮುಖ್ಯ ಪಾಯಿಂಟ್‌ನ ನೂರು ಮೀಟರ್ ಒಳಗೆ ಪ್ಲೆಕ್ಸ್ ಅಳವಡಿಸುವಂತಿಲ್ಲ, ರಸ್ತೆಯಿಂದ ಐವತ್ತು ಮೀಟರ್ ಒಳಗೆ ಫ್ಲೆಕ್ಸ್ ಬೋರ್ಡ್ ಹಾಕಂಗಿಲ್ಲ. ಸಂಚಾರಕ್ಕೆ ಸಂಬಂಧಿಸಿದ ಸಿಂಬಲ್‌ಗಳನ್ನು ಮರೆಮಾಚುವಂತಿಲ್ಲ. ಚಾಲಕನ ಕಣ್ಕುಕ್ಕುವಂತೆ ಫ್ಲೆಕ್ಸ್ ಕಾಣಬಾರದು. ಹೀಗೆ ಹಲವು ನಿಯಮಾವಳಿ ಜೊತೆ ಫ್ಲೆಕ್ಸ್ ಅಳವಡಿಸಿದ ಜಾಗದ ಮಾಲೀಕ ನಿರಪೇಕ್ಷಣಾ ಪತ್ರವನ್ನು ನೀಡಬೇಕು, ಸ್ಥಳೀಯ ಆಡಳಿತ ಸಮ್ಮತಿ ನೀಡಬೇಕು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯಬೇಕು.
ಜನರಿಗೂ ನಷ್ಟ, ಚಾಲಕರಿಗೂ ಕಷ್ಟ
ಆದರೆ ತೀರ್ಥಹಳ್ಳಿ ಹೈವೆ ರೋಡ್ ಉದ್ದಕ್ಕೂ ಇಂತಹ ಯಾವುದೇ ಪರ್ಮಿಶನ್ ಹಲವರು ಪಡೆದಿಲ್ಲ. ಸ್ಥಳೀಯ ಆಡಳಿತಗಳಿಗೆ ವಿಷಯವನ್ನೆ ತಿಳಿಸದೇ, ಜಾಗದ ಮಾಲೀಕರಿಗೆ ತಿಂಗಳಿಗೆ ಕಡಿಮೆ ಬಾಡಿಗೆಯ ಒಪ್ಪಂದ ಮಾಡಿಕೊಂಡು ಖಾಲಿ ಜಾಗದಲ್ಲಿ ಫ್ಲೆಕ್ಸ್ ಹುಗಿದು ಹೋಗುವವರು, ಆನಂತರ ಪ್ರತಿ ತಿಂಗಳು ಜಾಹಿರಾತು ಕಂಪನಿಯಿಂದ ದೊಡ್ಡ ಮಟ್ಟ ಸಂಭಾವನೆಯನ್ನು ಪಡೆಯುತ್ತಾರೆ. ಇದರಿಂದ ಸರ್ಕಾರಕ್ಕೆ ನಷ್ಟ. ಇನ್ನೊಂದೆಡೆ ಕಣ್ಕುಕ್ಕುವ ಫ್ಲೆಕ್ಸ್‌ಗಳಿಂದ ವಾಹನ ಸವಾರರಿಗೂ ಸಮಸ್ಯೆ ಆಗುತ್ತದೆ. ಈ ರೀತಿ ಫ್ಲೆಕ್ಸ್‌ಗಳಿಂದಲೇ ಈ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತವಾಗಿದ್ದಿದೆ. ಹಾಗಿದ್ದರೂ ಈ ಬಗ್ಗೆ ಯಾರು ಸಹ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ವರ್ಷದಿಂದ ವರ್ಷಕ್ಕೆ?
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವಷ್ಟರಲ್ಲಿ ಈ ಹಿಂದೆ ಸುಮಾರು ಐವತ್ತು ಫ್ಲೆಕ್ಸ್‌ಗಳು ಸಿಗುತ್ತಿದ್ದವು. ಆದರೆ ಈಗೀಗ ಫ್ಲೆಕ್ಸ್‌ಗಳ ಸಂಖ್ಯೆ ಎಣಿಕೆಗೆ ಸಿಗದಷ್ಟು ಜಾಸ್ತಿಯಿದೆ. ಖಾಸಗಿ ವ್ಯಕ್ತಿಗಳು ಕಂಪನಿಯೊಂದರ ಹೆಸರಲ್ಲಿ ಈ ರೀತಿಯ ಫ್ಲೆಕ್ಸ್‌ಗಳ ಮೂಲಕ ರಾಜರೋಷವಾಗಿ ಹಣ ಮಾಡುತ್ತಿದ್ದಾರೆ. ಇತ್ತ ಫೆಕ್ಸ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲ್ಲಬೇಕಾದ ಹಣ ಹಾಗೂ ಅಳವಡಿಸಿದ ಜಾಹಿರಾತಿಗೆ ಪ್ರತಿಯಾಗಿ ಪಡೆಯುವ ಕಾಸಿನ ತೆರಿಗೆ ಸೇರಿದಂತೆ ಸ್ಥಳೀಯ ಆಡಳಿತಕ್ಕೆ ಕಟ್ಟಬೇಕಾದ ಶುಲ್ಕದಿಂದಲೂ ದುಡ್ಡು ಉಳಿಸಿ ಆಧಾಯ ಮಾಡಿಕೊಳ್ತಿದ್ದಾರೆ.
ಜನ ಏನಂತಾರೆ?
ಈ ಬಗ್ಗೆ ಮಲೆನಾಡು ಟುಡೆಗೆ ಪ್ರತಿಕ್ರಿಯಿಸಿದ ಕಾರು ಮಾಲೀಕ ವಾಸಪ್ಪ ಎಂಬವರು, ಇದೊಂದು ಸ್ಕ್ಯಾಮ್ , ಕೇಳಲು ಹೋದರೆ ಮೈಮೇಲೆ ಬರುತ್ತಾರೆ, ಸರ್ಕಾರದಿಂದ ಪರ್ಮಿಶನ್ ಇವರ್ಯಾರು ತೆಗೆದುಕೊಳ್ಳುವುದಿಲ್ಲ, ಈಗೀಗ ರೋಡ್ ಪಕ್ಕನೇ ಪೆಕ್ಸ್ ಹಾಕ್ತಿದ್ದಾರೆ, ಕ್ರಾಸಿಂಗ್‌ನಲ್ಲಿಯು ಪ್ಲೆಕ್ಸ್ ಹಾಕ್ತಿದ್ದಾರೆ. ಹಾಗಾಗಿ ರಸ್ತೆಯಲ್ಲಿ ಗಾಡಿ ಓಡಿಸುವುದು ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ.
ಒಟ್ಟಾರೆ, ಮಲೆನಾಡಿನಲ್ಲಿ ಕಣ್ಣೀಗೆ ಬೀಳುವ ದಂಧೆಗಳು ಒಂದು ಕಡೆ ಸರ್ಕಾರಕ್ಕೆ ನಷ್ಟ ಮಾಡಿದರೆ, ಕಣ್ಣಿಗೆ ಬೀಳದೆ, ಲಕ್ಷಗಟ್ಟಲೇ ಅಕ್ರಮ ಲಾಭ ತಂದುಕೊಂಡುವ ಬ್ಯುಸಿನೆಸ್‌ಗಳು ಇನ್ನೊಂದು ರೀತಿಯಲ್ಲಿ ನುಕ್ಸಾನು ಮಾಡುತ್ತಿದೆ. ಈ ಬಗ್ಗೆ ಕೇಳುವವರು ಯಾರಿಲ್ಲ ಎಂಬುದೇ ರೋಡ್ ಸೈಡ್ ಫ್ಲೆಕ್ಸ್ ಬೋರ್ಡ್ ಮಾಫಿಯಾದ ಧೈರ್ಯ. ಹಾಗೂ ಕಡಿವಾಣ ಬೀಳುತ್ತದೆ ಅಂತಾದರೆ, ಅದಕ್ಕೆ ಮುಂದೊಂದು ಕಾಲಬರಬೇಕೆನ್ನಪ್ಪ..
SUMMARY |high way flex board and rules violation in national highway shivamogga to thirthahalli
KEYWORDS | high way flex board, high way flex rules violation, national highway shivamogga to thirthahalli