ನಡು ರಸ್ತೆಯಲ್ಲಿ ಧಗಧಗ ಉರಿದ ಹುಲ್ಲಿನ ಲಾರಿ | ನಡೆದಿದ್ದೇನು?

hay lorry caught fire , Kanabandur in Hosanagara taluk, Shivamogga district

ನಡು ರಸ್ತೆಯಲ್ಲಿ ಧಗಧಗ ಉರಿದ ಹುಲ್ಲಿನ ಲಾರಿ | ನಡೆದಿದ್ದೇನು?
hay lorry caught fire , Kanabandur in Hosanagara taluk, Shivamogga district

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 27, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಕಣಬಂದೂರು ಬಳಿಯಲ್ಲಿ ನಿನ್ನೆ ದಿನ ಹುಲ್ಲಿನ ಲಾರಿಯೊಂದು ಬೆಂಕಿಗೆ ತುತ್ತಾಗಿ ಪೂರ್ಣವಾಗಿ ಸುಟ್ಟುಹೋಗಿದೆ. ಈ ಘಟನೆ ಸಂಬಂಧ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಹೋಗಿ ಬೆಂಕಿ ನಂದಿಸಿದಾದರೂ ಅಷ್ಟರಲ್ಲಿ ಅನಾಹುತ ನಡೆದುಹೋಗಿತ್ತು. 

ಇಲ್ಲಿನ ವಿವಿದ ಹಳ್ಳಿಗಳಲ್ಲಿ ಒಣಹುಲ್ಲು ಖರೀದಿಸಿ, ವ್ಯಾಪಾರಿಯೊಬ್ಬರು ಅದನ್ನು ಲಾರಿಗೆ ಹೇರಿ ಆಯನೂರಿಗೆ ಸಾಗಿಸುತ್ತಿದ್ದರು. ಈ ವೇಳೇ ಲಾರಿ ಕಣಬಂದೂರಿನ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಬರುತ್ತಿದ್ದಾಗ, ಲಾರಿಗೆ ಬೆಂಕಿ ತಗುಲಿದೆ. ಆದರೆ ಈ ವಿಚಾರ ಲಾರಿ ಚಾಲಕನ ಅರಿವಿಗೂ ಬಂದಿರಲಿಲ್ಲ. ಲಾರಿ ಹಿಂಬದಿ ಬರುತ್ತಿರುವವರು ಗಮನಿಸಿ ಚಾಲಕನಿಗೆ ವಿಷಯ ತಿಳಿಸಿ ಲಾರಿ ನಿಲ್ಲಿಸಿದ್ದಾರೆ. ಆದರೆ ಹುಲ್ಲು ನೋಡುತ್ತಲೇ ಜೋರಾಗಿ ಉರಿಯಲು ಆರಂಭಿಸಿದ್ದು, ಇಡೀ ಲಾರಿಗೆ ಬೆಂಕಿ ಆವರಿಸಿ ಸುಟ್ಟುಹೋಗಿದೆ. ಅದೃಷ್ಟಕ್ಕೆ ಘಟನೆಯಲ್ಲಿ ಯಾರಿಗೂ ಏನೂ ಆಗಿಲ್ಲ

SUMMARY | A hay lorry caught fire yesterday near Kanabandur in Hosanagar taluk of Shivamogga district.

KEY WORDS | hay lorry caught fire , Kanabandur in Hosanagara taluk, Shivamogga district