ಹೆಂಡತಿಯನ್ನ ವಾಪಸ್‌ ಕಳುಹಿಸದಿದ್ದಕ್ಕೆ ಕೋಪ | ಮಾವನ ತೋಟದಲ್ಲಿದ್ದ 106 ಅಡಿಕೆ ಸಸಿ ಕಡಿದ ಅಳಿಯ

ಶಿವಮೊಗ್ಗ ಸೊರಬ ತಾಲ್ಲೂಕು ನಿವಾಸಿ ಯೊಬ್ಬ ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ತನ್ನ ಮಾವನಿಗೆ ಸೇರಿದ ಅಡಿಕೆ ಸಸಿಗಳನ್ನ ಕಡಿದು ಹಾಕಿದ್ದಾನೆ

ಹೆಂಡತಿಯನ್ನ ವಾಪಸ್‌ ಕಳುಹಿಸದಿದ್ದಕ್ಕೆ ಕೋಪ | ಮಾವನ ತೋಟದಲ್ಲಿದ್ದ  106 ಅಡಿಕೆ ಸಸಿ ಕಡಿದ ಅಳಿಯ
ಶಿವಮೊಗ್ಗ ಸೊರಬ ತಾಲ್ಲೂಕು ,ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕು, ಅಡಿಕೆ ಸಸಿ

SHIVAMOGGA | MALENADUTODAY NEWS | ಮಲೆನಾಡು ಟುಡೆ 



Sep 26, 2024   HAVERI | SORABA | ತನ್ನ ಪತ್ನಿಯನ್ನ ಮನೆಗೆ ವಾಪಸ್‌ ಕಳಿಸಿಲ್ಲ ಎಂಬ ಸಿಟ್ಟಿಗೆ ಮಾವ ಬೆಳಸಿದ್ದ ಅಡಿಕೆ ತೋಟದಲ್ಲಿ ಅಡಿಕೆ ಸಸಿಗಳನ್ನ ಅಳಿಯನೊಬ್ಬ ಕಡಿದು ಹಾಕಿದ ಘಟನೆ  ಬಗ್ಗೆ ವರದಿಯಾಗಿದೆ.  



ಹಾನಗಲ್ ತಾಲ್ಲೂಕಿನ ಬಸಾಪುರದಲ್ಲಿ ಮಾವನ ಜಮೀನಿನಲ್ಲಿ ಬೆಳೆದಿದ್ದ 106 ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದರ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರರು  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ವ್ಯಕ್ತಿಯೊಬ್ಬರಿಗೆ ತಮ್ಮ ಮಗಳನ್ನ ಕೊಟ್ಟಿದ್ದರು. ವಿವಿಧ ವಿಚಾರಗಳಿಗೆ ಅಳಿಯನ ವಿರುದ್ಧ ಈ ಕುಟುಂಬ ಸಿಟ್ಟಾಗಿತ್ತು. ಅಲ್ಲದೆ ಮಗಳು ತವರು ಮನೆಗೆ ವಾಪಸ್‌ ಆಗಿದ್ದರು. ಈ ವಿಷಯದಲ್ಲಿ ಅಳಿಯ ತನ್ನ ಪತ್ನಿಯನ್ನ ವಾಪಸ್‌ ಕುಳಹಿಸುವಂತೆ ಒತ್ತಾಯಿಸಿದ್ದ. ಆದರೆ ಮಾವ ಮದ್ಯವ್ಯಸನ ಬಿಟ್ಟು ಬಿಡುವಂತೆ ಒತ್ತಾಯಿಸಿದ್ದರು. ಈ ನಡುವೆ ಸಿಟ್ಟಿಗೆದ್ದ ಅಳಿಯ ಇದೇ 23 ರ ರಾತ್ರಿ 106 ಅಡಿಕೆ ಸಸಿಗಳನ್ನ ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.