guru Raghavendra aradhana | ಶಿವಮೊಗ್ಗದಲ್ಲಿ ಗುರು ರಾಯರ ಆರಾಧನೆಗೆ ಸಿದ್ದತೆ | ಯಾವಾಗ ಏನೇನು? ವಿವರ ಇಲ್ಲಿದೆ

13

SHIVAMOGGA | MALENADUTODAY NEWS | Aug 16, 2024 ಮಲೆನಾಡು ಟುಡೆ  

ಶಿವಮೊಗ್ಗ ನಗರದ ದುರ್ಗಿಗುಡಿ ತಿಲಕ್ ನಗರದಲ್ಲಿರುವ ಪ್ರಸಿದ್ದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇದೇ ಆಗಸ್ಟ್ 20, 21 ಹಾಗೂ 22ರಂದು  ರಾಘವೇಂದ್ರ ಗುರುಸಾರ್ವಭೌಮರ 353ನೇ ಆರಾಧನಾ ಮಹೋತ್ಸವ ಜರುಗಲಿದೆ. 

- Advertisement -

  • ಆಗಸ್ಟ್‌ . 20ರಂದು ಮಂಗಳವಾರ ಶ್ರೀ ಗುರುರಾಜರ ಪೂರ್ವಾರಾಧನೆ, 

  • ಆಗಸ್ಟ್‌ . 21ರ ಬುಧವಾರ ಶ್ರೀ ಗುರುಗಳ ಪುಣ್ಯದಿನ  

  • ಆಗಸ್ಟ್‌ . 22ರ ಗುರುವಾರ ಬೆಳಿಗ್ಗೆ ಮಹಾರಥೋತ್ಸವ ಜರುಗಲಿದೆ.

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಆಗಸ್ಟ್‌ .18ರ ಭಾನುವಾರ ಸಂಜೆ ಗೋಪೂಜೆ, ಶ್ರೀ ಲಕ್ಷ್ಮಿ ಪೂಜೆ, ಧಾನ್ಯ ಪೂಜೆ ಜರುಗಲಿದೆ, ಆಗಸ್ಟ್‌ .19ರಂದು ಸೋಮವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಇರುತ್ತದೆ

ಅತ್ತ ಹೊಸನಗರ ಹೊಸನಗರ ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಶ್ರೀ ಗುರುಗಳ 353ನೇ ಆರಾಧನಾ ಮಹೋತ್ಸವವನ್ನು ಆಗಸ್ಟ್ 21ರ ಬುಧವಾರ ವೈಭವದಿಂದ ನಡೆಸಲು ತೀರ್ಮಾನಿಸಲಾಗಿದೆ. 

 

ಅಂದು ಬೆಳಗ್ಗೆ 6 ಗಂಟೆಗೆ ಅಷ್ಟೋತ್ತರ ಏಳು ಗಂಟೆಗೆ ಪಂಚಾಮೃತ ಅಭಿಷೇಕ 11 ಗಂಟೆಗೆ ಅಲಂಕಾರ ಸೇವೆ ಹಸ್ತೋಧಕ 12:30ಕ್ಕೆ ಮಹಾಮಂಗಳಾರತಿ ಒಂದು ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ ರಾತ್ರಿ 7:30ಕ್ಕೆ ಪಲ್ಲಕ್ಕಿ ಉತ್ಸವ  ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ 

Share This Article