ಬಸ್‌ನಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿ | ಆಸ್ಪತ್ರೆಗೆ ಆವರಣಕ್ಕೆ ಬಸ್ ಚಲಾಯಿಸಿ ನೆರವಿಗೆ ನಿಂತ KSRTC ಚಾಲಕ, ನಿರ್ವಾಹಕ
government bus driver and conductor , Sagar Sub-Divisional Hospital, Sagar Taluk, Soraba-Sagar Route, KSRTC Bus
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024
ಬಸ್ಸಿನಲ್ಲಿ ಅಸ್ವಸ್ಥಳಾದ ವಿದ್ಯಾರ್ಥಿನಿಯನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕರೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸಾಗರ ಸೊರಬ ಮಾರ್ಗದಲ್ಲಿ ಸಂಚರಿಸುವ KSRTC ಬಸ್‌ನಲ್ಲಿ ಘಟನೆ ನಡೆದಿದೆ. ಈ ಬಸ್‌ನಲ್ಲಿ ಬರುತ್ತಿದ್ದ ವಿದ್ಯಾರ್ಥಿನಿಯೊಬ್ಬರು ತಲೆಸುತ್ತು ಬಂದು ಅಸ್ವಸ್ಥಗೊಂಡರು. ತಕ್ಷಣವೇ ವಿದ್ಯಾರ್ಥಿನಿಯ ಜೊತೆಗಿದ್ದ ವಿದ್ಯಾರ್ಥಿನಿಯರು ನಿರ್ವಾಹಕರಿಗೆ ವಿಷಯ ತಿಳಿಸಿದ್ದಾರೆ. ಅವರು ಚಾಲಕರಿಗೆ ವಿಷಯ ಹೇಳಿದ್ದು, ತಡಮಾಡದ ಚಾಲಕ ನಿಸಾರ್ ಬಸ್ಸನ್ನ ನೇರವಾಗಿ ಸಾಗರ ಉಪವಿಭಾಗೀಯ ಆಸ್ಪತ್ರೆ ಆವರಣಕ್ಕೆ ಚಲಾಯಿಸಿದ್ದಾರೆ. ಆ ಬಳಿಕ ವಿದ್ಯಾರ್ಥಿನಿಯನ್ನ ಚಾಲಕ ಹಾಗೂ ನಿರ್ವಾಹಕರ ಆಸ್ಪತ್ರೆಗೆ ದಾಖಲಿಸಿ ತಕ್ಷಣವೇ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ವಿದ್ಯಾರ್ಥಿನಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಚಾಲಕ ಹಾಗೂ ನಿರ್ವಾಹಕನ ಕೆಲಸಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
SUMMARY | government bus driver and conductor of the bus rushed the girl to a hospital for treatment.
KEY WORDS | government bus driver and conductor , Sagar Sub-Divisional Hospital, Sagar Taluk, Soraba-Sagar Route, KSRTC Bus