ಗಾಂಧಿ ಬಜಾರ್‌ನಲ್ಲಿ ಪುಟ್‌ಪಾತ್‌ ವ್ಯಾಪಾರಿಗಳಿಗೇ ನಿರ್ಬಂಧವಿದ್ಯಾ? ನಿನ್ನೆ ಸಂಜೆ ನಡೆದಿದ್ದೇನು?ಪೊಲೀಸ್ರು ಹೊಡೆದ್ರಾ? ಸಿಸಿ ಕ್ಯಾಮರಾದಲ್ಲಿ ಏನಿದೆ?

Gandhi Bazaar, Shivamogga, policeman allegedly assaulted a street vendor selling peanuts and corn.

ಗಾಂಧಿ ಬಜಾರ್‌ನಲ್ಲಿ  ಪುಟ್‌ಪಾತ್‌ ವ್ಯಾಪಾರಿಗಳಿಗೇ ನಿರ್ಬಂಧವಿದ್ಯಾ? ನಿನ್ನೆ ಸಂಜೆ ನಡೆದಿದ್ದೇನು?ಪೊಲೀಸ್ರು ಹೊಡೆದ್ರಾ? ಸಿಸಿ ಕ್ಯಾಮರಾದಲ್ಲಿ ಏನಿದೆ?
Gandhi Bazaar, Shivamogga, policeman

SHIVAMOGGA | MALENADUTODAY NEWS | Jul 9, 2024  ಮಲೆನಾಡು

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ನಿನ್ನೆ ಸಂಜೆ ಹೊತ್ತಿಗೆ ಗಲಾಟೆಯೊಂದು ನಡೆದಿದೆ. ಕಡ್ಲೆಕಾಯಿ ಹಾಗೂ ಜೋಳ ಮಾರುತ್ತಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸ್‌ ಸಿಬ್ಬಂದಿಯೊಬ್ಬರು ಹಲ್ಲೆ ಮಾಡಿದರು ಎಂಬುದು ವಿಚಾರ. ಇದೇ ಕಾರಣಕ್ಕೆ ಅಲ್ಲಿದ್ದ ಸ್ಥಳೀಯ ಪುಟ್‌ಪಾತ್‌ ವರ್ತಕರು ಗಲಾಟೆ ತೆಗೆದು ಪೊಲೀಸರು ದೇವರಲ್ಲ, ಪುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುವವರು ಕಳ್ಳರಲ್ಲ, ಯಾಕೆ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ರು ಅಂತಾ ಆಕ್ರೋಶ ಹೊರಹಾಕಿದ್ರು. ಅವರನ್ನ ಸಮಾಧಾನ ಮಾಡೋದಕ್ಕೆ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ರವರೇ ಗಾಂಧಿಬಜಾರ್‌ಗೆ ಬರಬೇಕಾಯ್ತು. 

ಶಿವಮೊಗ್ಗ ಗಾಂಧಿ ಬಜಾರ್‌ 

ಪ್ರಕರಣದ ವಿವರ ಹೀಗಿದೆ. ಗಾಂಧಿ ಬಜಾರ್‌ನ ಜನರ ಮಾತಿನಲ್ಲಿ ಕೇಳಿಬರುವ ಹಾಗೆ ಇಲ್ಲಿ ಎರಡು ವರ್ಗವಿದೆ. ಒಂದು ಪುಟ್‌ಪಾತ್‌ ಮೇಲೆ ದುಡಿಮೆ ಮಾಡುವವರು, ಇನ್ನೊಂದು ಅಂಗಡಿ ಇಟ್ಟುಕೊಂಡು ವಹಿವಾಟು ನಡೆಸುವ ಉದ್ಯಮಿಗಳು. ಗಾಂಧಿ ಬಜಾರ್‌ ಅನ್ನೋದು ಶಿವಮೊಗ್ಗದ ದೊಡ್ಡ ವ್ಯಾಪಾರ ಕೇಂದ್ರ.  ದುಡಿಮೆಗೆಂದೆ ಇಲ್ಲಿ ಪ್ರತಿದಿನ ಹೊಸಬರು ಬರುತ್ತಾರೆ. ಅವರಿಗೆಲ್ಲಾ ಶೆಡ್ಡು ಗಾಂಧಿಬಜಾರ್‌ನ ರಸ್ತೆ ಹಾಗೂ ಪುಟ್‌ ಪಾತೇ ಆಗಿದೆ. ಹೀಗೆ ವ್ಯಾಪಾರ ಮಾಡುವ ಪುಟ್‌ ಪಾತ್‌ ವ್ಯಾಪಾರಿಗಳು ರಸ್ತೆಯನ್ನ ಅಡ್ಡಗಟ್ಟಿದ್ದಾರೆ. ಟ್ರಾಫಿಕ್‌ಗೆ ತೊಂದರೆ ಆಗ್ತಿದೆ. ಜನ ಓಡಾಡಲಾಗಲ್ಲ, ಹಾಗೆ ಹೀಗೆ ಅಂತಾ ಫೋಟೋ ತೆಗೆದು ಪೊಲೀಸ್‌ ಇಲಾಖೆಯ ದೊಡ್ಡವರಿಗೆ ವಾಟ್ಸಾಪ್‌ ಮಾಡುವ ಒಂದಿಷ್ಟು ಮನಸ್ಸುಗಳು ಇಲ್ಲಿವೆ ನಿನ್ನೆಯು ಸಹ ಇದೇ ಆಗಿದೆ ಎನ್ನಲಾಗುತ್ತಿದೆ.

ಪುಟ್‌ ಪಾತ್‌ನಲ್ಲಿ ಕಡ್ಲೆಕಾಯಿ ಮಾರಬಾರದೇ

ನಿನ್ನೆ ಸಂಜೆ ಆರು ಮುಕ್ಕಾಲರ ಸಮಯ. ಗಾಂಧಿ ಬಜಾರ್‌ ಎಂಟ್ರಿಯಿಂದ ಸ್ವಲ್ಪ ಕೆಳಗೆ ಬಡವನೊಬ್ಬ ಕಡ್ಲೆಕಾಯಿ ಮಾರುತ್ತಾ ತನ್ನ ಹೆಂಡತಿ ಮಕ್ಕಳ ಜೊತೆಗೆ ನಿಂತಿದ್ದ. ಆತ, ಆತನ ಪತ್ನಿ ಹಾಗೂ ಆತನ ಪುಟ್ಟ ಮಗಳು ಹೀಗೆ ಇಡಿ ಸಂಸಾರದ ಪುಟ್‌ಪಾತ್‌ ಮೇಲೆ ಜಿಟಿ ಮಳೆಯ ನಡುವೆ ನಿಂತಿದೆ ಅಂದರೆ, ಆತನ ವಹಿವಾಟು ಎಷ್ಟಿರಬಹುದು ಯೋಚಿಸಿ.

ಸಾಮಾನ್ಯವಾಗಿ ಇಂತಹ ವರ್ಗದ ಜನರಿಗೆ ಪೊಲೀಸರು ತೊಂದರೆ ಕೊಡುವುದಿಲ್ಲ . ಹೋಗೋ ಹೋಗೋ ಅಂತಾ ಅಲ್ಲಿಂದ ಕಳಿಸಿ ವಾಪಸ್‌ ಬರುತ್ತಾರೆ. ಪೊಲೀಸರ ಕಣ್ಣೇದುರು ಹೋದಂತೆ ಮಾಡಿ ಮತ್ತೆ ಅಲ್ಲೆ ಬಂದು ಬಡ ವ್ಯಾಪಾರಸ್ಥರು ನಿಲ್ಲುತ್ತಾರೆ. ಆದರೆ ನಿನ್ನೆ ಹಾಗಾಗಲಿಲ್ಲ. ಪೊಲೀಸ್‌ ಸಿಬ್ಬಂದಿಯೊಬ್ಬರು ಬುರ್‌ ಅನ್ನೋ ಸ್ಪೀಡ್‌ನಲ್ಲಿ ಬೈಕ್‌ ಓಡಿಸಿಕೊಂಡು ಬಂದು, ಕಡ್ಲೆಕಾಯಿ ಮಾರುತ್ತಿದ್ದವನ ಬಳಿ ನಿಲ್ಲುತ್ತಾರೆ. ಅಲ್ಲದೆ, ಆತನಿಗೆ ಗಾಡಿ ತೆಗೆಯಲು ಹೇಳುತ್ತಾರೆ. ಬಡ ವ್ಯಾಪಾರಸ್ಥ ಕೂಡ ಹೂ ಸರ್‌  ತೆಗೆಯುತ್ತೇನೆ ಎಂದು ಹೇಳುತ್ತಾನೆ. ಅಷ್ಟರಲ್ಲಿ ಪೊಲೀಸ್‌ ಸಿಬ್ಬಂದಿ ಕಡ್ಲೆಕಾಯಿ ಅಳೆಯಲು ಇಟ್ಟಿದ್ದ ಸೇರು ಕಿತ್ತುಕೊಳ್ಳುತ್ತಾರೆ. ಆಗ ವ್ಯಾಪಾರಸ್ಥರ ಅದನ್ನ ವಾಪಸ್‌ ಪಡೆಯಲು ಆತನು ಸೇರಿಗೆ ಕೈ ಹಾಕುತ್ತಾನೆ. ಅಷ್ಟರಲ್ಲಿ  ಸೇರನ್ನ ಹಿಡಿದ ಪೊಲೀಸ್‌ ಸಿಬ್ಬಂದಿ ಬಡ ವ್ಯಾಪಾರಿಯ ತಲೆಗೆ ಕುಕ್ಕುವಂತೆ ಕೈ ಮುಂದು ಮಾಡುತ್ತಾರೆ. ಆದರೆ ಪೊಲೀಸರ ಕೈಯಿಂದ ಬಡವ್ಯಾಪಾರಿ ತಲೆಗೆ ನಿಜವಾಗಲು ಪೆಟ್ಟು ಬಿದ್ದು ಬಿಟ್ಟಿತ್ತು. ಸಿಬ್ಬಂದಿ ಹೊಡೆದಿದ್ದು ರಕ್ತ ಬರಲಿ ಎಂದು ಖಂಡಿತ ಅಲ್ಲವಾದರೂ, ಹೆದರಿಸಲು ಹೊಡೆದ ಏಟು ಪುಟ್‌ ಪಾತ್‌ ವ್ಯಾಪಾರಿಯ ತಲೆಯಲ್ಲಿ ಹೊಲಿಗೆ ಬೀಳುವಂತೆ ಮಾಡಿದೆ. 

ಎಸ್‌ಪಿ ಮಿಥುನ್‌ ಕುಮಾರ್‌ 

ಯಾವಾಗ ವ್ಯಾಪಾರಿ ತಲೆಯಲ್ಲಿ ರಕ್ತ ಬರಲು ಆರಂಭವಾಯ್ತೋ ಪೊಲೀಸ್‌ ಸಿಬ್ಬಂದಿ ಅಲ್ಲಿಂದ ತೆರಳಿದ್ದಾರೆ. ಆದರೆ ಅಕ್ಕಪಕ್ಕದಲ್ಲಿದ್ದ ಪುಟ್‌ಪಾತ್‌ ವ್ಯಾಪಾರಿಗಳೆಲ್ಲಾ ಪೆಟ್ಟು ತಿಂದವನ ಬೆಂಬಲಕ್ಕೆ ನಿಂತು ಪ್ರತಿಭಟನೆ ಆರಂಭಿಸಿದ್ದಾರೆ. ನಾವೇನು ಕಳ್ಳರೇ ನಮ್ಮೇನೇಕೆ ಹೀಗೆ ಟ್ರೀಟ್‌ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಪೊಲೀಸ್‌ ಸಿಬ್ಬಂದಿಯ ಸಮಾಧಾನಕ್ಕೆ ಬಗ್ಗದಿದ್ದಾಗ ಕೊನೆಗೆ ಎಸ್‌ಪಿ ಮಿಥುನ್‌ ಕುಮಾರ್‌ರವರೇ ಸ್ಥಳಕ್ಕೆ ಬಂದು ವ್ಯಾಪಾರಿಗಳನ್ನ ಸಮಾಧಾನ ಮಾಡಿದ್ದಾರೆ.. ಪುಟ್‌ಪಾತ್‌ ವ್ಯಾಪಾರಿಗಳಿಗೆ ಎಸ್‌ಪಿಯವರು ಯಾವ ಭರವಸೆ ನೀಡಿದರೋ ಗೊತ್ತಿಲ್ಲ. ಆದರೆ ಪೊಲೀಸ್‌ ವ್ಯವಸ್ಥೆಯು ಗಾಂಧಿಬಜಾರ್‌ನ ಒಳಮತ್ಸರದ ಗುಟ್ಟುಗಳನ್ನ ಅರ್ಥ ಮಾಡಿಕೊಳ್ಳಬೇಕು. ಗಾಂಧಿ ಬಜಾರ್‌ನಲ್ಲಿ ವಾಹನ ಓಡಾಟದ ಬಗ್ಗೆ ಗಮನ ಹರಿಸುವ ಬದಲು, ಬೆಂಗಳೂರಿನ ಹಲವು ಸ್ಟ್ರೀಟ್‌ಗಳ ಥರ ಅದನ್ನ ವ್ಯಾಪಾರ ಕೇಂದ್ರದಂತೆಯೇ ನೋಡಬೇಕು. ಗಾಂಧಿ ಬಜಾರ್‌ನ ಶಕ್ತಿ ಕುಗ್ಗಿಸುವ ಪ್ರಯತ್ನಕ್ಕೆ ದುಡ್ಡಿನ ಬಂಡವಾಳ ಸೇರುತ್ತಿರುವುದು ಹಳೆಯ ಶಿವಮೊಗ್ಗಕ್ಕೆ ಗೊತ್ತಿರುವ ಸಂಗತಿ. ಆದರೆ ಗಾಂಧಿ ಬಜಾರ್‌ನ ಅಸ್ಮಿತೆ ಇರುವುದು ಅಲ್ಲಿನ ಪುಟ್‌ಪಾತ್‌ ವ್ಯಾಪಾರಿಗಳಿಂದಲೇ ಎಂಬುದನ್ನ ಮರೆಯಬಾರದು ಎನ್ನುತ್ತಾರೆ ಸ್ಥಳೀಯ ತರಕಾರಿ ವ್ಯಾಪಾರಸ್ಥರೊಬ್ಬರು. 

Gandhi Bazaar, Shivamogga, policeman allegedly assaulted a street vendor selling peanuts and corn. Local vendors protested, expressing their anger towards the police. Shivamogga SP Mithun Kumar arrived to calm the situation.