ಹಪ್ತಾ ಕೊಟ್ಟಿಲ್ಲ ಅಂತಾ ಗಾಂಧಿಬಜಾರ್ ನಲ್ಲಿ ಹಣ್ಣಿನ ಅಂಗಡಿಗೆ ಬೆಂಕಿ ! ಏನಿದು?
Shimoga: A fruit shop was set on fire near Gandhibazar in Shivamogga for not serving hapta. The incident took place on October 30
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 3, 2024
ಶಿವಮೊಗ್ಗ ಗಾಂಧಿಬಜಾರ್ ಬಳಿಯಲ್ಲಿ ಹಪ್ತಾ ಕೊಟ್ಟಿಲ್ಲ ಎಂದು ಹಣ್ಣಿನ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಘಟನೆಯೊಂದರೆ ಬಗ್ಗೆ ಇವತ್ತು ವರದಿಯಾಗಿದೆ. ಘಟನೆ ಅಕ್ಟೋಬರ್ 30 ನೇ ತಾರೀಖು ಈ ಘಟನೆ ನಡೆದಿದೆ.
ಘಟನೆಯ ಪೂರ್ತಿ ವಿವರ
ನಗರದ ಗಾಂಧಿಬಜಾರ್ ರಸ್ತೆಯ ಮುಂಭಾಗದಲ್ಲಿ ಹಣ್ಣಿನ ಅಂಗಡಿಯನ್ನ ನಡೆಸ್ತಿರುವ ವ್ಯಕ್ತಿಯೊಬ್ಬರಿಗೆ ಸ್ಥಳೀಯ ದುಷ್ಕರ್ಮಿಯೊಬ್ಬ ಹಪ್ತಾಕೊಡಬೇಕು ಎಂದು ಬೆದರಿಕೆ ಹಾಕಿದ್ದನಂತೆ. ಅಂಗಡಿಯಾತ ನಿನಗೇಕೆ ಕೊಡಬೇಕು ಹಪ್ತಾ ಎಂದು ಕೇಳಿದ್ದಾನೆ. ಇದೇ ವಿಚಾರಕ್ಕೆ ಅಕ್ಟೋಬರ್ 29 ರ ತಡರಾತ್ರಿ ಮೂರು ಗಂಟೆ ಸುಮಾರಿ ಹಣ್ಣಿನ ಅಂಗಡಿಗೆ ಪೆಟ್ರೋಲ್ ಸುರಿದು ಆರೋಪಿ ಬೆಂಕಿ ಹಚ್ಚಿದ್ದಾನೆ. ಈ ಬಗ್ಗೆ ಅಕ್ಕಪಕ್ಕದವರು ಅಂಗಡಿಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಅಂಗಡಿ ಸುಟ್ಟು ಹೋಗಿತ್ತು.
ತಮ್ಮ ಹೊಟ್ಟೆಪಾಡಿಗೆ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ. ಆರೋಪಿಯ ದುಷ್ಕೃತ್ಯದಿಂದಾಗಿ ಒಂದು ಲಕ್ಷ ರೂಪಾಯಿಗೂ ಅಧಿಕ ನಷ್ಟ ಹೊಂದಿದ್ದಾನೆ. ಇನ್ನೂ ಪ್ರಕರಣದ ನಂತರ ದೂರು ದಾಖಲಿಸಿಕೊಂಡಿರುವ ಕೋಟೆ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿ ಕೋರ್ಟ್ ಮೂಲಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣವನ್ನೆ ಬೆಳಕಿಗೆ ಬರದಂತೆ ತಡೆಯುವ ಪ್ರಯತ್ನಗಳು ವೈಫಲ್ಯವನ್ನು ಮುಚ್ಚಿಡಬಹುದು. ಆದಾಗ್ಯು ಶಿವಮೊಗ್ಗ ನಗರದಲ್ಲಿ ಪೊಲೀಸರ ಭಯ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಯನ್ನ ಈ ಘಟನೆ ಮೂಡಿಸುತ್ತಿದೆ.
SUMMARY | Shimoga: A fruit shop was set on fire near Gandhibazar in Shivamogga for not serving hapta. The incident took place on October 30.
KEYWORDS | Shimoga, fruit shop was set on fire near Gandhibazar ,Shivamogga , hapta,