ಅಪರೂಪಕ್ಕೆ ಸಿಕ್ಕ ಹಾರುವ ಬೆಕ್ಕು ಬಾಡೂಟವಾಯ್ತು | ಕುಕ್ಕರ್‌ನಲ್ಲಿ ಬೇಯುತ್ತಿರುವಾಗಲೇ ಎಂಟ್ರಿಯಾಯ್ತು ಟೀಂ
forest department raided a house where a flying cat was cooked
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾರುವ ಬೆಕ್ಕನ್ನ ಬೇಟೆಯಾಡಿ ಅಡುಗೆ ಮಾಡುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಕಾರ್ಗಲ್ ಸಮೀಪದ ಕರೂರು ಹೋಬಳಿಯ ಕುದರೂರು ತೇಕಳೆ ಗ್ರಾಮದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಇಲ್ಲಿನ ವ್ಯಕ್ತಿಯೊಬ್ಬರು ಹಾರುವ ಬೆಕ್ಕನ್ನು ಬೇಟೆಯಾಡಿ ಅಡುಗೆ ಮಾಡುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ದಿಡೀರ್ ದಾಳಿ ನಡೆಸಿದ ಕಾರ್ಗಲ್ ಪ್ರಾದೇಶಿಕ ಅರಣ್ಯ ವಲಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಇನ್ನೂ ಕಾರ್ಯಾಚರಣೆ ವೇಳೆ ಆರೋಪಿ ಪರಾರಿಯಾಗಿದ್ದು, ಮಾಂಸವನ್ನು ಜಪ್ತು ಮಾಡಿ ಅದರ ಸ್ಯಾಂಪಲ್‌ನ್ನ ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
SUMMARY |In Kargal, Sagar taluk, Shimoga district, forest department personnel raided a house where a flying cat was being hunted and cooked.
KEY WORDS | In Kargal, Sagar taluk, Shimoga district, forest department raided a house where a flying cat was cooked