ಶಿವಮೊಗ್ಗ ನಾಗರಿಕರೇ ಎಚ್ಚರ ಸೈಡ್‌ ಮಿರರ್‌ ಇಲ್ಲದಿದ್ದರೂ ಫೈನ್‌ ಬೀಳುತ್ತೆ | ಒಬ್ಬರೇ ವ್ಯಕ್ತಿಗೆ ಬಿತ್ತು 14500 ದಂಡ

fine of Rs 14,500 on a man for driving under the influence of alcohol

ಶಿವಮೊಗ್ಗ ನಾಗರಿಕರೇ ಎಚ್ಚರ ಸೈಡ್‌ ಮಿರರ್‌ ಇಲ್ಲದಿದ್ದರೂ ಫೈನ್‌ ಬೀಳುತ್ತೆ | ಒಬ್ಬರೇ ವ್ಯಕ್ತಿಗೆ ಬಿತ್ತು 14500 ದಂಡ
city traffic police,  Shivamogga traffic police, Rs 14,500 on a man for driving under the influence of alcohol.

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024  

ಶಿವಮೊಗ್ಗ | ನಗರದ ಟ್ರಾಫಿಕ್‌ ಪೊಲೀಸರು ತಮ್ಮ ದುಬಾರಿ ದಂಡ ಶಿಕ್ಷೆಯನ್ನ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೆ 10 ಸಾವಿರ ದಂಡ ವಿಧಿಸಿದ್ದ ಶಿವಮೊಗ್ಗ ಟ್ರಾಫಿಕ್‌ ಪೊಲೀಸರು ಇದೀಗ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ₹14,500 ದಂಡ ವಿಧಿಸಿದ್ದಾರೆ. 

ಮದ್ಯಪಾನ ಹಾಗೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಈ ಸಂಬಂಧ  ಜೆಎಂಎಫ್‌ಸಿ ಸಿವಿಲ್‌ ನ್ಯಾಯಾಲಯ ₹14,500 ದಂಡ ವಿಧಿಸಿದೆ.

ನಗರದ ನೆಹರೂ ರಸ್ತೆಯಲ್ಲಿ ಕಳೆದ ಭಾನುವಾರ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ವಾಹನ ತಪಾಸಣೆಯಲ್ಲಿ ನಡೆಸ್ತಿದ್ದರು. 

ಈ ವೇಳೆ ದ್ವಿಚಕ್ರ ವಾಹನ ಸವಾರರೊಬ್ಬರು ಅಲ್ಲಿಗೆ ಬಂದಿದ್ದಾರೆ. ಅವರನ್ನ ತಡೆದು ತಪಾಸಣೆ ಮಾಡಿದಾಗ ಅವರು ಕುಡಿದು ವಾಹನ ಚಲಾಯಿಸಿರುವುದು ಕಂಡು ಬಂದಿದೆ. ಅಲ್ಲದೆ ಹೆಲ್ಮೆಟ್‌ ಸಹ ಧರಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ದಂಡದ ರಸೀದಿ ಬರೆಯಲಾಗಿತ್ತು. ಇಷ್ಟೆ ಅಲ್ಲದೆ ನಂಬರ್ ಪ್ಲೇಟ್, ಎಮಿಷನ್ ಪ್ರಮಾಣ ಪತ್ರ, ಸೈಡ್ ಮಿರರ್ ಇರದ ಸಂಬಂಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.  

SUMMARY |  The city's traffic police continue with their hefty fines. The Shivamogga traffic police, who had recently imposed a fine of Rs 10,000, have now imposed a fine of Rs 14,500 on a man for driving under the influence of alcohol. 



KEYWORDS | city traffic police,  Shivamogga traffic police, Rs 14,500 on a man for driving under the influence of alcohol.