ಹಳೆ ಪಿಂಚಣಿ ವ್ಯವಸ್ಥೆ | ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ | ಮಾಹಿತಿ ಕೇಳಿದ ಆರ್ಥಿಕ ಇಲಾಖೆ

The Finance Department has requested 'consolidated information' from all departments under the old pension scheme. 

ಹಳೆ ಪಿಂಚಣಿ ವ್ಯವಸ್ಥೆ |  ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ | ಮಾಹಿತಿ ಕೇಳಿದ ಆರ್ಥಿಕ ಇಲಾಖೆ
Finance Department, ಹಳೆ ಪಿಂಚಣಿ ಜಾರಿ, old pension scheme,

SHIVAMOGGA | MALENADUTODAY NEWS | Jul 9, 2024   

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ಒಂದು ಸಿಕ್ಕಿದೆ  ಹಳೆ ಪಿಂಚಣಿ ಜಾರಿ ಮಾಡುವ ಸಲುವಾಗಿ ವಿತ್ತ ಇಲಾಖೆ ಮಾಹಿತಿ ಕೇಳಿದೆ. 

ರಾಜ್ಯ ಸರ್ಕಾರಿ ಸೇವೆಗೆ 2006ರ ಏ.1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಆಗಿರುವ ನೌಕರರನ್ನು ಹಳೇ ಪಿಂಚಣಿ ಯೋಜ ನೆಗೆ ಒಳಪಡಿಸಲು ಎಲ್ಲ ಇಲಾಖೆಗಳಿಂದ 'ಕ್ರೋಢಿಕೃತ ಮಾಹಿತಿ' ಯನ್ನು ಆರ್ಥಿಕ ಇಲಾಖೆ ಕೋರಿದೆ ಎಂದು ತಿಳಿದು ಬಂದಿದೆ. 

ನೌಕರರ ಆಯ್ಕೆ ಅನುಸಾರ ನಿಗದಿತ ಅರ್ಹತೆ ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರದಿಂದ ಖಚಿತಪಡಿಸಿಕೊಂಡು ಆಯಾ ಇಲಾಖೆ ಗಳ ಮುಖ್ಯಸ್ಥರು ಆ.31ರ ಒಳಗೆ ಅನುಮೋದನೆಗಾಗಿ ಪ್ರಸ್ತಾ ವನೆಯನ್ನು ಸಲ್ಲಿಸಬೇಕು.

ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೊದಲು ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ, ದೃಢೀಕರಿಸಬೇಕು ಎಂದು ಆರ್ಥಿಕ ಇಲಾಖೆಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಇದರಿಂದ ಸುಮಾರು 8 ಸಾವಿರಕ್ಕೂ ಹೆಚ್ಚು ನೌಕರರು ಹಳೇ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸಾಧ್ಯತೆ ಇದೆ.

The Finance Department has requested 'consolidated information' from all departments to include government employees selected through recruitment notifications prior to April 1, 2006, under the old pension scheme.