ಅಡ್ಡ ಬಂದ ಎಮ್ಮೆಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿಗೆ ಕಾರಿಗೆ KSRTC ಬಸ್ ಡಿಕ್ಕಿ | ಫಾದರ್ ಆಂಥೋಣಿ ಫೀಟರ್ ದುರಂತ ಅಂತ್ಯ
Father Anthony Peter died in a collision between a KSRTC bus and a car near Chinnikatte, Savalanga, Davangere district.
SHIVAMOGGA | MALENADUTODAY NEWS | Jul 23, 2024
ಭೀಕರ ಅಪಘಾತವೊಂದರಲ್ಲಿ ಫಾದರ್ ಆಂಥೋಣಿ ಫೀಟರ್ ಸಾವನ್ನಪ್ಪಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆ ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳು ಸಾವನ್ನಪ್ಪಿದ್ದಾರೆ.ಇಂದು ಮೂರುವರೆ ಹೊತ್ತಿಗೆ ಗಂಟೆಗೆ ನಡೆದಿದೆ. ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಸೆಲಿರಿಯೋ ವಾಹನಗಳ ನಡುವೆ ಡಿಕ್ಕಿ ಯಾಗಿದೆ.
ದಾರಿಯಲ್ಲಿ ಅಡ್ಡಬಂದ ಎಮ್ಮೆಯೊಂದನ್ನ ತಪ್ಪಿಸಲು ಹೋದ ಕೆಎಸ್‌ಆರ್‌ಟಿಸಿ ಬಸ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಪಕ್ಕದಲ್ಲಿ ಬಿದ್ದಿದೆ. ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಫಾದರ್ ಆಂಥೋಣಿ ಪೀಟರ್ ಸ್ಥಳದಲ್ಲಿಯೇ ಸಾವುಕಂಡಿದ್ದಾರೆ ನ್ಯಾಮತಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ
ಫಾದರ್ ಆಂಥೋಣಿ ಫೀಟರ್ ಅಪಘಾತದಲ್ಲಿ ನಿಧನ | ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನ | ವಿಡಿಯೋ ಸುದ್ದಿ
Father Anthony Peter died in a collision between a KSRTC bus and a car near Chinnikatte, Savalanga, Davangere district.