ಸೊಪ್ಪು ತರಲು ಹೋದಾಗ ಕಾಡು ಹಂದಿ ದಾಳಿ | ರೈತ ಅಸ್ವಸ್ಥ

farmer in Tumari, Sagar taluk, Shivamogga district, was seriously injured in a wild boar attack

ಸೊಪ್ಪು ತರಲು ಹೋದಾಗ ಕಾಡು ಹಂದಿ ದಾಳಿ | ರೈತ ಅಸ್ವಸ್ಥ
Tumari, Sagar taluk, Shivamogga district,

SHIVAMOGGA | MALENADUTODAY NEWS | Jul 9, 2024  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ಹಂದಿ ದಾಳಿಯಿಂದ ರೈತರೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಇಲ್ಲಿನ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ ಈ ಘಟನೆ ನಡೆದಿದೆ. ಚೌಡಪ್ಪ (52) ಗಾಯಗೊಂಡವರು, 

ತಮ್ಮ ಸೊಪ್ಪಿನ ಬೆಟ್ಟದಲ್ಲಿ ಕೊಟ್ಟಿಗೆಗೆ ಸೊಪ್ಪು ತರಲು ಹೋದ ವೇಳೆ ಹಂದಿಯೊಂದು ಇವರ ಮೇಲೆ ಏಕಾಏಕಿ ದಾಳಿ ನಡೆಸಿದೆ. ಅಲ್ಲದೆ ತೊಡೆ ಭಾಗಕ್ಕೆ ಕಚ್ಚಿ ಗಾಯಗೊಳಸಿದೆ. ತೀವ್ರ  ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಚೌಡಪ್ಪರನ್ನು ನಿಟ್ಟೂರು ಖಾಸಗಿ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆಗೆ ಒಳಪಡಿಸಲಾಗಿದೆ.  

ಈ ಭಾಗದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳನ್ನ ಅರಣ್ಯ ಇಲಾಖೆ ನಿಯಂತ್ರಿಸುತ್ತಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.  ಇನ್ನಾದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಹಂದಿ ಉಳಪಟ ತಪ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

A farmer in Tumari, Sagar taluk, Shivamogga district, was seriously injured in a wild boar attack