ನಕ್ಸಲ್ ನಾಯಕ ವಿಕ್ರಂಗೌಡ್ಲು ಎನ್‌ಕೌಂಟರ್ | ಸಿಎಂ ಹೇಳಿದ್ದೇನು?
Chief Minister Siddaramaiah has reacted to the encounter of Naxal leader Vikram Goudlu in the courtyard of Jayanna Gowda's house near Peethabail near Kabbinale in Hebri
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024
ಹೆಬ್ರಿಯ ಕಬ್ಬಿನಾಲೆ ಸಮೀಪದ ಪೀತಬೈಲ್‌ನ ಬಳಿಯಲ್ಲಿ ಜಯಣ್ಣಗೌಡರ ಮನೆಯ ಅಂಗಳದಲ್ಲಿ ನಕ್ಸಲ್ ನಾಯಕ ವಿಕ್ರಂಗೌಡ್ಲು ನನ್ನ ಎನ್‌ಕೌಂಟರ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನ ನೀಡಿದ್ದಾರೆ.
ಈ ವಿಚಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಕ್ಸಲ್‌ರು ಶರಣಾದರೇ ಅವರಿಗೆ ಸಕಲ ಸವಲತ್ತು ನೀಡುವ ಪ್ಯಾಕೇಜ್ ನೀಡುವ ಆದೇಶವನ್ನು ಮಾಡಲಾಗಿದೆ.
ಆದರೆ, ಅವರು ಶರಣಾಗಿಲ್ಲ. ಕೇರಳ ಸರ್ಕಾರ 25 ಲಕ್ಷ ರಿವಾರ್ಡ್‌ನ್ನ ವಿಕ್ರಂಗೌಡ್ಲು ಮೇಲೆ ಘೋಷಣೆ ಮಾಡಿದೆ. ಅದೇ ರೀತಿ ಕರ್ನಾಟಕ ಸರ್ಕಾರ 5 ಲಕ್ಷ ರೂಪಾಯಿ ಘೋಷಣೆ ಮಾಡಿದೆ. ಹಲವು ಕೇಸ್‌ಗಳಲಿದ್ದ ಅವರನ್ನ ಈಗ ಎನ್‌ಕೌಂಟರ್ ಮಾಡಿದೆ.
ಇದನ್ನು ನೀವು ಇದನ್ನ ಅಪ್ರಿಶಿಯೇಟ್ ಮಾಡಬೇಕಲ್ವಾ? ನಕ್ಸಲಿಸಮ್ ಇರಬೇಕೋ ಹೋಗಬೇಕೋ ಎಂದು ಮಾಧ್ಯಮಗಳನ್ನ ಸಿಎಂ ಸಿದ್ದರಾಮಯ್ಯರವರು ಪ್ರಶ್ನೆ ಮಾಡಿದರು.
SUMMARY | Chief Minister Siddaramaiah has reacted to the encounter of Naxal leader Vikram Goudlu in the courtyard of Jayanna Gowda's house near Peethabail near Kabbinale in Hebri
KEY WORDS | Chief Minister Siddaramaiah , encounter of Naxal leader Vikram Goudlu, Peethabail encounter, Kabbinale in Hebri