ನವೆಂಬರ್ 11 2025 ಮಲೆನಾಡು ಟುಡೆ ಸುದ್ದಿ : ವೀಕೆಂಡ್ ಗುರು ಪೊಲೀಸರು ಹಿಡಿತಾರೆ ಅಂತಿದ್ದ ಜನರಿಗೆ, ಶಿವಮೊಗ್ಗ ಪೊಲೀಸರು ವಿಕೇಂಡ್ನಲ್ಲಿಯೇ ಶಾಕ್ ಕೊಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರದ ದಿನ ಕುಡಿದು ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ಲಕ್ಷ ರೂಪಾಯಿಗೂ ಅದಿಕ ದಂಡ ವಸೂಲಿ ಮಾಡಿದ್ದಾರೆ.


ನಿನ್ನೆ ಸೋಮವಾರ ಪೊಲೀಸರು ಬರೋಬ್ಬರಿ₹ 1,16,500 ದಂಡವನ್ನು ಕೋರ್ಟ್ಗೆ ಕಟ್ಟಿಸಿದ್ದಾರೆ. ಅದರ ರಸೀದಿಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್
ಮೊಬೈಲ್ ಗೆ ಬಂತ್ತೊಂದು ಟ್ರಾಫಿಕ್ ಚಲನ್ ಎಪಿಕೆ ಫೈಲ್ : ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್
ಶಿವಮೊಗ್ಗ ಪೂರ್ವ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವೀಕೆಂಡ್ ಕಾರ್ಯಾಚರಣೆಯಲ್ಲಿ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 11 ಮಂದಿ ₹ 1,16,500 ದಂಡ ಕಟ್ಟಿದ್ದಾರೆ. ಹೊರತಾಗಿ 04 ಸವಾರರ ಚಾಲನಾ ಪರವಾನಿಗೆಗಳನ್ನು (Driving Licenses – D.L) ಅಮಾನತುಗೊಳಿಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಕಛೇರಿಗೆ (RTO) ಶಿಫಾರಸು ಮಾಡಲಾಗಿದೆ. ಒಟ್ಟಾರೆ ಈ ನಿಟ್ಟಿನಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ

ಭದ್ರಾವತಿಯಲ್ಲಿ ಪೊಲೀಸ್ ಮೇಲೆ ಹಲ್ಲೆ! ಪೇಪರ್ ಟೌನ್ನಲ್ಲಿ 3 ಕೇಸ್ !ಇಲ್ಲಿವರೆಗೂ ಏನೆಲ್ಲಾ ಆಯ್ತು!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
