ಡ್ರೋನ್‌ ಹಾರಿಸುವದನ್ನ ಕಲಿಯುವ ಆಸಕ್ತಿ ಇದೆಯೆ? ಇಲ್ಲಿದೆ ಅದ್ಭುತ ಅವಕಾಶ

Shimoga District Scheduled Tribes Welfare Department has decided to provide drone training to scheduled tribe youths for the year 2024-25.

ಡ್ರೋನ್‌ ಹಾರಿಸುವದನ್ನ ಕಲಿಯುವ ಆಸಕ್ತಿ ಇದೆಯೆ? ಇಲ್ಲಿದೆ ಅದ್ಭುತ ಅವಕಾಶ
Shimoga District Scheduled Tribes Welfare Department , drone training to scheduled tribe youths  

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 29, 2024 ‌ 

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಯುವಕರಿಗೆ ಒಂದು ಅದ್ಭುತ ಅವಕಾಶವನ್ನ ನೀಡುತ್ತಿದೆ. ಈ ಅವಕಾಶಗಳನ್ನ ಬಳಸಿಕೊಂಡು ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಡ್ರೋನ್‌ ಡ್ರೈವರ್ಸ್‌ ಆಗಬಹುದು. 

ಹೌದು , ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 2024–25ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಯುವಕ, ಯುವತಿಯರಿಗೆ ಡ್ರೋನ್ ತರಬೇತಿ ನೀಡಲು ಮುಂದಾಗಿದೆ. ಈ ಸಂಬಂಧ ಡ್ರೋನ್‌ ಬಗ್ಗೆ ಕಲಿಯುವ  ಆಸಕ್ತಿ ಹೊಂದಿದವರಿಂದ ಅರ್ಜಿ ಆಹ್ವಾನಿಸಿದೆ. ಈ ಸಂಬಂಧ  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕಿ ಸಿ.ಲತಾ ಪ್ರಕಟಣೆ ನೀಡಿದ್ದಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಿಂದ ಅರ್ಜಿಯನ್ನು ಪಡೆಯಬಹುದಾಗಿದೆ. ಆ ಬಳಿಕ ಅರ್ಜಿಯನ್ನು  ಭರ್ತಿ ಮಾಡಿ ಮುಂಬರುವ ಡಿಸೆಂಬರ್‌ 10ರೊಳಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗೆ 08182– 200266, ಮೊ. 94827 62350 ಸಂಪರ್ಕಿಸಬಹುದಾಗಿದೆ. 



SUMMARY | Shimoga District Scheduled Tribes Welfare Department has decided to provide drone training to scheduled tribe youths for the year 2024-25.




KEY WORDS  |Shimoga District Scheduled Tribes Welfare Department , drone training to scheduled tribe youths